ಕೋವಿಡ್-19 ರೋಗಿಗಳಿಗಾಗಿ 24 ಹಾಸಿಗೆಗಳ ತೀವ್ರ ನಿಗಾ ಘಟಕ ಸೌಲಭ್ಯ ಉದ್ಘಾಟನೆ

6:57 PM, Monday, June 7th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Round Table ಬೆಂಗಳೂರು : ರೌಂಡ್ ಟೇಬಲ್ ಇಂಡಿಯಾ(ಆರ್ಟಿಐ) ತನ್ನ ಕಾರ್ಪೋರೇಟ್ ಪಾಲುದಾರರಾದ ಎಂಬೆಸ್ಸಿ ಆರ್ಇಐಟಿ, ಎಎನ್ಜೆಡ್, ಬ್ಲ್ಯಾಕ್ ಸ್ಟೋನ್, ಸ್ವಿಸ್ ರೆ ಫೌಂಡೇಷನ್ ಮತ್ತು ಮೆಕಫೀಗಳೊಂದಿಗೆ ಪಾಲುದಾರಿಕೆಯಲ್ಲಿ 3 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದು, ಸಿಐಐ(ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ)ನ ನಾಯಕತ್ವದಡಿ, ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ 24 ಹಾಸಿಗೆಗಳ ಐಸಿಯು ಸೌಲಭ್ಯವನ್ನು ಹಸ್ತಾಂತರಿಸಿದೆ. ಕೋವಿಡ್ -19 ಸಾಂಕ್ರಾಮಿಕದ ವಿರುದ್ಧ ಹೋರಾಟ ನಡೆಸಲು ಕೈಗೂಡಿಸುವಂತೆ ಮುಖ್ಯಮಂತ್ರಿಯವರ ಮನವಿಗೆ ಪ್ರತಿಕ್ರಿಯಿಸಿ, ಪಾಲುದಾರರು ಬಹುಅಗತ್ಯದ ಜೀವ ಉಳಿಸುವ ಉಪಕರಣಗಳು ಮತ್ತು ಮಾನವಶಕ್ತಿ ನೆರವನ್ನು ದಾನವಾಗಿ ನೀಡಿದರು. ಈ ಸೌಲಭ್ಯವನ್ನು ಮುಖ್ಯಮಂತ್ರಿ ಬಿ. ಎಸ್. ಯೆಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಡಾ. ಸಿ. ಎನ್. ಅಶ್ವತ್ಥನಾರಾಯಣ್, ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ಮತ್ತು ಕರ್ನಾಟಕದ ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರು ಉದ್ಘಾಟಿಸಿದರು.

ರೌಂಡ್ ಟೇಬಲ್ ಇಂಡಿಯಾ ಮತ್ತು ಕಾರ್ಪೋರೇಟ್ ಸಂಸ್ಥೆಗಳು ಆಸ್ಪತ್ರೆಯ ಅಗತ್ಯಗಳನ್ನು ಗುರುತಿಸಿ, ಜೀವ ಉಳಿಸುವ ವೈದ್ಯಕೀಯ ಉಪಕರಣಗಳ ಪೂರೈಕೆದಾರರ ಪಟ್ಟಿ ಅಂತಿಮಗೊಳಿಸಿ, ಈ ಪರಿಹಾರದ ಉಪಕ್ರಮಕ್ಕೆ ಸಕ್ರಿಯ ಚಾಲನೆ ನೀಡುವತ್ತ ನಿಧಿ ಸಂಗ್ರಹಿಸಿದ್ದರು. ಮುಂದಿನ ಮೂರು ತಿಂಗಳ ಅವಧಿಯವರೆಗೆ ಕ್ಲೌಡ್ ಫಿಜಿಷಿಯನ್ ಮತ್ತು ಲೇಬರ್ನೆಟ್ಗಳ ಬೆಂಬಲ ಹಾಗೂ ಅಜೀಮ್ ಪ್ರೇಮ್ಜೀ ಫೌಂಡೇಷನ್ ಬೆಂಬಲದಿಂದ ಈ ಐಸಿಯು ಸೌಲಭ್ಯ ಲಾಭ ಪಡೆಯಲಿದೆ. ಹೆಚ್ಚುವರಿಯಾಗಿ ಆರೋಗ್ಯ ಇಲಾಖೆಯು ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಆಸ್ಪತ್ರೆಗೆ ವೆಂಟಿಲೇಟರ್ಗಳನ್ನು ಪೂರೈಸಲಿದೆ.

ರೌಂಡ್ ಟೇಬಲ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಪ್ರಿಯೇಶ್ ಶಾ ಅವರು ಮಾತನಾಡಿ, “ಅಗತ್ಯವಿರುವ ಸಮಯಗಳಲ್ಲಿ ಜನರಿಗೆ ನೆರವಾಗುವುದಕ್ಕಿಂತಲೂ ಹೆಚ್ಚು ಗೌರವಾನ್ವಿತವಾದದ್ದು ಯಾವುದೂ ಇರುವುದಿಲ್ಲ. ಜಗತ್ತು ಗೊಂದಲಮಯವಾಗಿರುವ ಈ ಸಮಯದಲ್ಲಿ ಸಮಾಜದ ಎಲ್ಲ ಕ್ಷೇತ್ರಗಳಿಂದ ಬೆಂಬಲ ಅಗತ್ಯವಿರುವಾಗ, ಕಾರ್ಪೋರೇಟ್ ಸಂಸ್ಥೆಗಳು ಮುಂದಾಗಿ ನೆರವು ನೀಡುವುದು ಅತ್ಯಂತ ಮುಖ್ಯವಾಗಿರುತ್ತದೆ. ಈ ಅದ್ಭುತವಾದ ಉಪಕ್ರಮದ ಮೂಲಕ ಅತ್ಯಂತ ಸ್ಪಷ್ಟ ಮತ್ತು ಅಗತ್ಯವಾದ ಕೊಡುಗೆಯನ್ನು ಸಮಾಜದ ಕಲ್ಯಾಣಕ್ಕಾಗಿ ನೀಡಿರುವ ನಮ್ಮ ಪಾಲುದಾರರಿಗೆ ನಾನು ಅತ್ಯಂತ ಕೃತಜ್ಞನಾಗಿರುತ್ತೇನೆ” ಎಂದರು.

ಎಂಬೆಸ್ಸಿ ಆರ್ಇಐಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈಕ್ ಹಾಲೆಂಡ್ ಅವರು ಮಾತನಾಡಿ, “ಈ ಸಾರ್ವಜನಿಕ-ಖಾಸಗಿ ಉಪಕ್ರಮವನ್ನು ಸಾಧ್ಯವಾಗಿಸಿದ್ದಕ್ಕಾಗಿ ಗೌರವಾನ್ವಿತ ಮುಖ್ಯಮಂತ್ರಿ ಅವರು ಮತ್ತು ಆರೋಗ್ಯ ಇಲಾಖೆಗಳಿಗೆ ವಂದಿಸಲು ನಾವು ಇಚ್ಛಿಸುತ್ತೇವೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಆರೋಗ್ಯ ಮೂಲಸೌಕರ್ಯಕ್ಕೆ ಬೆಂಬಲ ನೀಡಲು ನಮ್ಮ ಕೈಲಾದುದ್ದೆಲ್ಲವನ್ನು ಮಾಡಲು ನಾವು ಬದ್ಧತೆ ಹೊಂದಿರುತ್ತೇವೆ. ಈ ಪ್ರಮುಖವಾದ ಪರಿಹಾರ ಯೋಜನೆಯನ್ನು ಅನುಷ್ಠಾನಕ್ಕೆ ತರಲು ನಮ್ಮ ಸಾಮಥ್ರ್ಯದಲ್ಲಿ ನಂಬಿಕೆ ಪ್ರದರ್ಶಿಸಿದ ಹಾಗೂ ನಮ್ಮ ಸಾಂಘಿಕ ಸಂಪನ್ಮೂಲಗಳನ್ನು ಕ್ರೋಢಿಕರಿಸಲು ಕೈಜೋಡಿಸಿದ ನಮ್ಮ ಕಾರ್ಪೋರೇಟ್ ಪಾಲುದಾರರಿಗೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ” ಎಂದರು.

ಸ್ವಿಸ್ ರೇನ ಬೆಂಗಳೂರಿನ ಜಾಗತಿಕ ಸೇವಾ ಕೇಂದ್ರದ ಮುಖ್ಯಸ್ಥರಾದ ಅಮಿತ್ ಕಾರ್ಲಾ ಅವರು ಮಾತನಾಡಿ, “ಕೋವಿಡ್-19ರ ತೀವ್ರರೀತಿಯ 2ನೇ ಅಲೆಯ ವಿರುದ್ಧ ಹೋರಾಡುತ್ತಿರುವ ಭಾರತೀಯ ಮಾರುಕಟ್ಟೆಗೆ ನೆರವಾಗಲು ಸ್ವಿಸ್ ರೇ ಬದ್ಧತೆ ಹೊಂದಿದೆ. ಈ ಸವಾಲಿನ ಸಮಯದಲ್ಲಿ ನಮ್ಮ ಸಿಬ್ಬಂದಿ, ಅವರ ತಕ್ಷಣದ ಕುಟುಂಬದ ಸದಸ್ಯರು ಅಲ್ಲದೆ, ಭಾರತದಲ್ಲಿನ ವಿಸ್ತಾರವಾದ ಸಮುದಾಯಕ್ಕೆ ಸಮಗ್ರ ಬೆಂಬಲವನ್ನು ಪೂರೈಸಲು ಅತ್ಯುತ್ತಮ ಪ್ರಯತ್ನಗಳನ್ನು ನಾವು ಕೈಗೊಂಡಿದ್ದೇವೆ. ಸಮುದಾಯದ ಪ್ರಮುಖ ವೈದ್ಯಕೀಯ ಅಗತ್ಯಗಳನ್ನು ಪೂರೈಸುವ ಮತ್ತು ಆರೋಗ್ಯ ಮೂಲಸೌಕರ್ಯವನ್ನು ದೃಢಪಡಿಸಲು ನೆರವಾಗುವ ಈ ಯೋಜನೆಗೆ ಕೊಡುಗೆ ನೀಡಲು ಮತ್ತು ಅದರಲ್ಲಿ ಭಾಗವಹಿಸಲು ನೀಡಲಾಗಿರುವ ಈ ಅವಕಾಶವನ್ನು ನಾವು ಬಹಳವಾಗಿ ಪ್ರಶಂಸಿಸುತ್ತೇವೆ” ಎಂದರು.

ಮೆಕಫಿ ಇಂಡಿಯಾದ ಉಪಾಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ವೆಂಕಟ್ ಕೃಷ್ಣಾಪುರ್ ಅವರು ಮಾತನಾಡಿ, “ನಮ್ಮ ಸಮುದಾಯಗಳ ಮೇಲೆ ಕೋವಿಡ್-19ರ 2ನೇ ಅಲೆ ವಿನಾಶಕಾರಿ ಪರಿಣಾಮವನ್ನು ಉಂಟುಮಾಡಿದೆ. ಅದರ ಉಗ್ರತೆ ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ. ಈ ಅಗತ್ಯದ ಸಮಯದಲ್ಲಿ ದೇಶಕ್ಕಾಗಿ ತಮ್ಮ ಕೊಡುಗೆ ನೀಡಲು ಒಂದುಗೂಡುವುದಕ್ಕೆ ಸಂಸ್ಥೆಗಳಿಗೆ ಇದಕ್ಕಿಂತಲೂ ಉತ್ತಮ ಸಮಯ ಇನ್ನೊಂದಿರುವುದಿಲ್ಲ. ಪಾಲುದಾರಿಕೆ ಕೈಗೊಂಡು ಅಗತ್ಯವಿರುವ ವೈದ್ಯಕೀಯ ಮೂಲಸೌಕರ್ಯ ಸ್ಥಾಪಿಸುವುದರಲ್ಲಿ ನಾವು ಗೌರವ ಹೊಂದಿದ್ದೇವೆ. ಇದು ಇಂದಿನ ಅತ್ಯಂತ ತುರ್ತು ಅಗತ್ಯವಾಗಿದೆ. ಮುಖ್ಯವಾಗಿ ಅಗತ್ಯವಿರುವ ಪರಿಹಾರ ಯೋಜನೆಯ ಕ್ಷಿಪ್ರ ಮೇಲ್ದರ್ಜೆಕರಣಕ್ಕೆ ಅವಕಾಶ ಮಾಡಿಕೊಡುವಲ್ಲಿ ನೆರವಾಗಲು ಮತ್ತು ಕರ್ನಾಟಕ ಸರಕಾರ ಹಾಗೂ ಆರೋಗ್ಯ ಇಲಾಖೆಯ ಉಪಕ್ರಮಗಳಿಗೆ ಪೂರಕವಾಗಿ ನಮ್ಮ ಪ್ರಯತ್ನಗಳು ಇವೆ ಎಂದು ಮೆಕಫಿನಲ್ಲಿ ನಾವು ಪ್ರಾಮಾಣೀಕವಾದ ಭರವಸೆಯನ್ನು ಹೊಂದಿರುತ್ತೇವೆ” ಎಂದರು.

ಎಎನ್ಝೆಡ್ ಬೆಂಗಳೂರು ಸೇವಾ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ಎಸ್ವಿ ವೆಂಕಟರಾಮನ್ ಅವರು ಸಹಭಾಗಿತ್ವ ಕುರಿತು ಹರ್ಷ ವ್ಯಕ್ತಪಡಿಸಿ ಮಾತನಾಡಿ, “ಈ ಸಹಭಾಗಿತ್ವದ ಮೂಲಕ ಈ ಆಸ್ಪತ್ರೆ ಸಂಪೂರ್ಣವಾಗಿ ಸಜ್ಜಾಗಿರುವ ಐಸಿಯು ಹಾಸಿಗೆಗಳು ಮತ್ತು ಜೀವ ಉಳಿಸುವ ಉಪಕರಣಗಳನ್ನು ಸ್ವೀಕರಿಸಲಿದೆ ಎಂಬುದಕ್ಕೆ ಎಎನ್ಝೆಡ್ ಹರ್ಷಗೊಂಡಿದೆ. ಇದು ಕೋವಿಡ್ ವಿರುದ್ಧ ಒಂದಾಗಿ ಹೋರಾಡುವಲ್ಲಿ ಬಹುದೂರ ಸಾಗಲಿದೆ. ವರ್ಲ್ಡ್ ವಿಷನ್ ಆಸ್ಟ್ರೇಲಿಯಾದ ಇಂಡಿಯಾ ಕೋವಿಡ್-19 ಮನವಿಯಂತಹ ನಮ್ಮ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಉಪಕ್ರಮಗಳ ಮೂಲಕ ಹಾಸಿಗೆಗಳು, ಆಕ್ಸಿಜನ್ ಯಂತ್ರಗಳು ಮತ್ತು ಆಸ್ಪತ್ರೆ ವೈದ್ಯಕೀಯ ಪೂರೈಕೆಗಳಿಗೆ ಭಾರತದಲ್ಲಿ ಅತ್ಯಂತ ತೀವ್ರ ರೀತಿಯಲ್ಲಿ ಕೋವಿಡ್ನಿಂದ ಪೀಡಿತರಾಗಿರುವ ಜಿಲ್ಲೆಗಳಿಗೆ ಒಂದು ದಶಲಕ್ಷ ಡಾಲರ್ ದಾನವನ್ನು ನಾವು ಪ್ರಕಟಿಸಿದ್ದೆವು. ಇದಕ್ಕೂ ಮೇಲೆ ಎಎನ್ಝೆಡ್ ಬೆಂಗಳೂರು ಸೇವಾ ಕೇಂದ್ರ ಕೋವಿಡ್ ವಿರುದ್ಧ ಹೋರಾಡಲು `ಫೈಟಿಂಗ್ ಕೋವಿಡ್ ಟುಗೆದರ್ ಡೊನೇಷನ್ ಡ್ರೈವ್’ ಅಭಿಯಾನವನ್ನು ನಡೆಸುತ್ತಿದ್ದು, ಇದು ಸಿಬಿಎಂ ಇಂಡಿಯಾ ಟ್ರಸ್ಟ್ ಮತ್ತು ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೆಬಲ್ಡ್, ಬೆಂಗಳೂರುಗಳಿಗೆ ಬೆಂಬಲ ನೀಡುತ್ತದೆ. ಈ ದಾನವು ವೈಕಲ್ಯ ಇರುವ ಜನರಿಗೆ, ಸೌಲಭ್ಯವಂಚಿತ ಕುಟುಂಬಗಳಿಗೆ, ಮುಂಚೂಣಿಯ ಕಾರ್ಯಕರ್ತರಿಗೆ ಪೋಷಕಾಂಶಯುಕ್ತ ಆಹಾರ ಮತ್ತು ನೈರ್ಮಲ್ಯದ ಕಿಟ್ಗಳನ್ನು ಪೂರೈಸಲಿದೆ. ಜೊತೆಗೆ ಬಹು ಅಗತ್ಯದ ವೈದ್ಯಕೀಯ ಮೂಲಸೌಕರ್ಯ ಮತ್ತು ವೈದ್ಯಕೀಯ ಉಪಕರಣಗಳನ್ನು ಸಕರ್ಾರಿ ಮತ್ತು ಸಹಾಯಾರ್ಥ ಆಸ್ಪತ್ರೆಗಳಿಗೆ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ ಎಎನ್ಝೆಡ್ ತನ್ನ ಉದ್ಯೋಗಿಗಳು ಮತ್ತು ಗ್ರಾಹಕರ ದಾನಗಳಿಗೆ ಸಮನಾಗಿ(ಡಾಲರ್ – ಫಾರ್ – ಡಾಲರ್) ಒಂದು ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ಗಳನ್ನು ದಾನವಾಗಿ ನೀಡುತ್ತಿದೆ. ಉದ್ಯೋಗಿಗಳು ಮತ್ತು ಗ್ರಾಹಕರ ಕೊಡುಗೆಗಳು ಕೋವಿಡ್-19 ಆರೋಗ್ಯ ಬಿಕ್ಕಟ್ಟಿನ ವಿರುದ್ಧ ಹೋರಾಡಲು ನೆರವಾಗಲಿವೆ ಎಂಬ ಭರವಸೆ ನನಗಿದೆ” ಎಂದರು.

ರೌಂಡ್ ಟೇಬಲ್ ಇಂಡಿಯಾ ಕುರಿತು :-
ರೌಂಡ್ ಟೇಬಲ್ ಇಂಡಿಯಾ ಧರ್ಮಯೇತರ, ರಾಜಕೀಯೇತರ ಮತ್ತು ವರ್ಗಯೇತರ ಸಂಘಟನೆಯಾಗಿದ್ದು, ತಮ್ಮ ಸಮುದಾಯಕ್ಕೆ ಹಿಂತಿರುಗಿಸಿ ಕೊಡುಗೆ ನೀಡುವಲ್ಲಿ ಕೈಜೋಡಿಸುವ ಅತ್ಯುತ್ತಮ ಅವಕಾಶವನ್ನು ತಮ್ಮ ಸದಸ್ಯರಿಗೆ ಸಾದರಪಡಿಸುತ್ತಿದೆ. ರೌಂಡ್ ಟೇಬಲ್ ಇಂಡಿಯಾ 100ಕ್ಕೂ ಹೆಚ್ಚಿನ ನಗರಗಳಲ್ಲಿ 340ಕ್ಕೂ ಹೆಚ್ಚಿನ ಟೇಬಲ್ಗಳನ್ನು ಹೊಂದಿದೆ. ಈ ಸಮೂಹಗಳಲ್ಲಿ ಉದ್ಯಮಿಗಳು, ಉದ್ಯಮಶೀಲರು, ತಂತ್ರಜ್ಞಾನ ಉದ್ಯಮಿಗಳು, ವೃತ್ತಿಪರರು ಸೇರಿರುತ್ತಾರೆ. ಸಮುದಾಯದ ಬೃಹತ್ ಅಗತ್ಯಗಳಿಗೆ ನೆರವಾಗಲು ವೈಯಕ್ತಿಕ ಕಾಳಜಿಗಳನ್ನು ಮೀರಿ ಮುಂದಾಗುವ ಜನರನ್ನು ಇದು ಒಳಗೊಂಡಿರುತ್ತದೆ. 3041 ಯೋಜನೆಗಳೂ ಮತ್ತು 7141 ತರಗತಿ ಕೊಠಡಿಗಳನ್ನು ಶಾಲೆಗಳಲ್ಲಿ ದೇಶದಾದ್ಯಂತ ಆರ್ಟಿಐ ನಿರ್ಮಿಸಿದೆ. ಶಿಕ್ಷಣದ ಮೂಲಕ ಸ್ವಾತಂತ್ರ್ಯ(ಫ್ರೀಡಂ ಥ್ರೂ ಎಜುಕೇಷನ್) ಎಂಬ ತಮ್ಮ ದೀರ್ಘಕಾಲೀನ ರಾಷ್ಟ್ರೀಯ ಯೋಜನೆ ಮೂಲಕ 7.86 ದಶಲಕ್ಷ ಮಕ್ಕಳ ಮೇಲೆ ಪರಿಣಾಮ ಉಂಟುಮಾಡಿದೆ.

ವರದಿ :ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English