ಕೋವಿಡ್-19 ರೋಗಿಗಳಿಗಾಗಿ 24 ಹಾಸಿಗೆಗಳ ತೀವ್ರ ನಿಗಾ ಘಟಕ ಸೌಲಭ್ಯ ಉದ್ಘಾಟನೆ

Monday, June 7th, 2021
ಕೋವಿಡ್-19 ರೋಗಿಗಳಿಗಾಗಿ 24 ಹಾಸಿಗೆಗಳ ತೀವ್ರ ನಿಗಾ ಘಟಕ ಸೌಲಭ್ಯ ಉದ್ಘಾಟನೆ

ಬೆಂಗಳೂರು : ರೌಂಡ್ ಟೇಬಲ್ ಇಂಡಿಯಾ(ಆರ್ಟಿಐ) ತನ್ನ ಕಾರ್ಪೋರೇಟ್ ಪಾಲುದಾರರಾದ ಎಂಬೆಸ್ಸಿ ಆರ್ಇಐಟಿ, ಎಎನ್ಜೆಡ್, ಬ್ಲ್ಯಾಕ್ ಸ್ಟೋನ್, ಸ್ವಿಸ್ ರೆ ಫೌಂಡೇಷನ್ ಮತ್ತು ಮೆಕಫೀಗಳೊಂದಿಗೆ ಪಾಲುದಾರಿಕೆಯಲ್ಲಿ 3 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದು, ಸಿಐಐ(ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ)ನ ನಾಯಕತ್ವದಡಿ, ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ 24 ಹಾಸಿಗೆಗಳ ಐಸಿಯು ಸೌಲಭ್ಯವನ್ನು ಹಸ್ತಾಂತರಿಸಿದೆ. ಕೋವಿಡ್ -19 ಸಾಂಕ್ರಾಮಿಕದ ವಿರುದ್ಧ ಹೋರಾಟ ನಡೆಸಲು ಕೈಗೂಡಿಸುವಂತೆ ಮುಖ್ಯಮಂತ್ರಿಯವರ ಮನವಿಗೆ ಪ್ರತಿಕ್ರಿಯಿಸಿ, ಪಾಲುದಾರರು ಬಹುಅಗತ್ಯದ ಜೀವ ಉಳಿಸುವ ಉಪಕರಣಗಳು ಮತ್ತು ಮಾನವಶಕ್ತಿ ನೆರವನ್ನು […]