ಚರ್ಮ ವೈದ್ಯರ ಸಂಘದಿಂದ ರೂ.1 ಕೋಟಿ ಮೌಲ್ಯದ ಕೋವಿಡ್ ಪರಿಹಾರ ಸಾಮಗ್ರಿ

10:45 PM, Monday, June 7th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Dermatologists ಬೆಂಗಳೂರು : “ವೈದ್ಯರು ಕೋವಿಡ್ ವೇಳೆ ಸೋಂಕಿತರಿಗೆ ಚಿಕಿತ್ಸೆ ನೀಡುವ ಮೂಲಕ ಸಮಾಜಕ್ಕೆ ನೆರವಾಗುತ್ತಿದ್ದಾರೆ. ಆದರೆ ಅವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ರೂ. 1 ಕೋಟಿಗೂ ಅಧಿಕ ಮೌಲ್ಯದ ಕೋವಿಡ್ ಪರಿಹಾರ ಕಾರ್ಯಕ್ಕಾಗಿ ಸಾಮಗ್ರಿಗಳನ್ನ ನೀಡಿದ್ದು, ಇದು ಕರ್ತವ್ಯ ಬದ್ಧತೆಯ ಜೊತೆಗೆ ಮಾನವೀಯ ಕಾಳಜಿಯ ಕಾರ್ಯವಾಗಿದೆ”, ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.

ನಗರದ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚರ್ಮ ವೈದ್ಯರ ಸಂಘವು ಕರ್ನಾಟಕದಲ್ಲಿನ ಭಾರತೀಯ ಚರ್ಮ, ಲೈಂಗಿಕ ಮತ್ತು ಕುಷ್ಠ ರೋಗ (ಐಎಡಿವಿಎಲ್-ಕೆಎನ್)ತಜ್ಞರ ಸಂಘವು ತನ್ನ ಸಹೋದರ ಸಹೋದರಿ ಸಂಸ್ಥೆಗಳ ಜೊತೆಗೂಡಿ ಕೊರೋನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ತವ್ಯದ ಜೊತೆಗೆ ತನ್ನ ಸೇವೆಯನ್ನ ಮತ್ತಷ್ಟು ವಿಸ್ತರಿಸಬೇಕು ಎಂಬ ಕಳಕಳಿಯೊಂದಿಗೆ ರೂ. 1 ಕೋಟಿ ಮೌಲ್ಯದ ಕೋವಿಡ್ ಪರಿಹಾರ ಸಾಮಗ್ರಿಗಳನ್ನ ರಾಜ್ಯದ ಸರ್ಕಾರಿ ಆಸ್ಪತ್ರೆಗೆ ನೀಡುವ ಮಹತ್ಕಾರ್ಯ ಕೈಗೊಂಡಿದೆ.

ಈ ಸಾಮಗ್ರ್ರಿಗಳಲ್ಲಿ ಪಲ್ಸ್ ಆಕ್ಸಿಮೀಟರ್, ಬಿಪಿ ಉಪಕರಣ, ಆಕ್ಸಿಜನ್ ಕ್ಯಾನುಲಾಗಳು, ಎನ್ ಐ ವಿ ಮಾಸ್ಕ್, ಗ್ಲುಕೋ ಮೀಟರ್ ಜೊತೆಗೆ ವಿಕ್ಟೋರಿಯಾ ಬೌರಿಂಗ್ ಆಸ್ಪತ್ರೆಗೆ ರೂ. 3 ಲಕ್ಷ ಮೌಲ್ಯದ ಸ್ಟ್ರೆಚರ್ ಗಳು, ಗಾಲಿ ಕುರ್ಚಿಗಳು ಮತ್ತು ಫಾಗಿಂಗ್ ಯಂತ್ರಗಳನ್ನ ಒದಗಿಸಿದೆ.

Dermatologistsಎರಡನೇ ಹಂತದಲ್ಲಿ ಕೆಳ ಹಂತದ ಕೆಲಸಗಾರರಿಗೂ ತಲುಪಬೇಕು ಎಂಬ ನಿಟ್ಟಿನಲ್ಲಿ ರೂ.50 ಲಕ್ಷ ಮೌಲ್ಯದ ಎನ್ 95 ಮಾಸ್ಕ್ ಗಳು ಮತ್ತು ಪಲ್ಸ್ ಆಕ್ಸಿಮೀಟರ್ ಗಳನ್ನು ರಾಜ್ಯಾದಾದ್ಯಂತ ಇರುವ 2700ಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡುವ ಗುರಿ ಹೊಂದಲಾಗಿದೆ.

ಕಾರ್ಯಕ್ರಮದಲ್ಲಿ ಕೋವಿಡ್ ರಿಲೀಫ್ ಕಮಿಟಿ ಅಧ್ಯಕ್ಷ ಡಾ ಬಿ ಎಸ್ ಚಂದ್ರಶೇಖರ್, ಹಿರಿಯ ಚರ್ಮವೈದ್ಯರಾದ ಡಾ ವೆಂಕಟರಾಮ್ ಮೈಸೂರು, ಕೋವಿಡ್ ರಿಲೈಡ್ ಕಮಿಟಿ ಸಂಚಾಲಕ ಡಾ ಜಗದೀಶ್ ಪಿ, ಹಿರಿಯ ಚರ್ಮವೈದ್ಯ ಡಾ ಆರ್ ರಘುನಾಥ ರೆಡ್ಡಿ, ಬೆಂಗಳೂರು ಚರ್ಮ ವೈದ್ಯರ ಸಂಘದ ಅಧ್ಯಕ್ಷೆ ಡಾ ಲೀಲಾವತಿ, ಮಿಂಟೋ ನಿರ್ದೇಶಕಿ ಡಾ ಸುಜಾತಾ, ಡಾ ಗಿರೀಶ್, ಐಎಡಿವಿಎಲ್ ಕರ್ನಾಟಕದ ಕಾರ್ಯದರ್ಶಿ ಡಾ ಸವಿತಾ ಎ ಎಸ್ , ಬೆಂಗಳೂರು ಚರ್ಮ ವೈದ್ಯರ ಸಂಘದ ಕಾರ್ಯದರ್ಶಿ ಡಾ ಮಹೇಶ್ ಕುಮಾರ್, ಡಿಹೆಚ್ ಒ ಡಾ ಶ್ರೀನಿವಾಸ, ಆರ್ ಜಿ ಯು ಹೆಚ್ ಎಸ್ ಉಪಕುಲಪತಿ ಡಾ ಎಸ್ ಸಚ್ಚಿದಾನಂದ, ಮೆಡಿಕಲ್ ಸೂಪರಿಂಟೆಂಡೆಂಟ್ ವಿಕ್ಟೋರಿಯಾ ಆಸ್ಪತ್ರೆಯ ಡಾ ರಮೇಶ್ ಕೃಷ್ಣ ಉಪಸ್ಥಿತರಿದ್ದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English