ಮಂಗಳೂರು : ಮೊಬೈಲ್ ಬಳಸಬಾರದು ಎಂದು ಪೋಷಕರು ಬುದ್ದಿ ಮಾತು ಹೇಳಿದ್ದಕ್ಕೆ ಆಕ್ರೋಶಗೊಂಡ ಯುವತಿಯೊಬ್ಬಳು ಮನೆ ಬಿಟ್ಟು ಪರಾರಿಯಾದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಪುಣಿ ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಕುಕ್ಕದಕಟ್ಟೆ ಸೈಟ್ ಮನೆಯ ನಿವಾಸಿಯಾದ ದೀಕ್ಷಿತಾ ಜೂನ್ 6 ರಂದು ಕಾಣೆಯಾಗಿದ ಯುವತಿ.
ಕಾಣೆಯಾದ ಯುವತಿಗೆ 18 ವರ್ಷ ವಯಸ್ಸಾಗಿದೆ. ಆಕೆಯ ತಾಯಿ ಅತಿಯಾಗಿ ಫೋನಿನಲ್ಲಿ ಮಾತನಾಡುತ್ತಿದ್ದನ್ನು ಪ್ರಶ್ನಿಸಿದಕ್ಕೆ ಆಕ್ರೋಶಗೊಂಡು ಮನೆಯಲ್ಲಿ ಯಾವುದೇ ವಿಚಾರ ಹೇಳದೆ ನಾಪತ್ತೆಯಾಗಿದ್ದಾಳೆ.
ಬಾಲಕಿಯ ತಾಯಿ ಜೂನ್ 6 ರಂದು ಬೆಳಿಗ್ಗೆ 7.30 ಕ್ಕೆ ಮುಡಿಪು ನಗರಕ್ಕೆ ಹೋಗಿದ್ದರು ಎಂದು ಹೇಳಲಾಗಿದೆ. ಈ ಸಮಯದಲ್ಲಿ ಆಕೆ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ. ದೀಕ್ಷಿತಾ ದುಂಡು ಮುಖ, ಗೋಧಿ ಬಣ್ಣ ಸಾಧಾರಣಾ ಮೈಕಟ್ಟು ಹೊಂದಿದ್ದಾರೆ. ಕಾಣೆಯಾದ ಸಮಯದಲ್ಲಿ ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಚೂಡಿದಾರ್ ಟಾಪ್ ಧರಿಸಿದ್ದಾಳೆ. ಕನ್ನಡ, ಮಲಯಾಳಂ, ತುಳು ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾಳೆ.
ಆಕೆಯ ತಾಯಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದರು.
ಯುವತಿಯ ಪತ್ತೆಯಾದಲ್ಲಿ ಮಂಗಳೂರು ನಗರ ನಿಯಂತ್ರಣ ಕೊಠಡಿ ಅಥವಾ ಕೊಣಾಜೆ ಪೊಲೀಸ್ ಠಾಣೆ ದೂ. ಸಂಖ್ಯೆ: 0824-2220536, 9480802350 ಹಾಗೂ 0824-2220800 ಗೆ ಸಂಪರ್ಕಿಸಬಹುದು ಎಂದು ಕೊಣಾಜೆ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English