ಬಡವರಿಗೆ ಫಾರಂ ಕೋಳಿ ಮತ್ತು ತರಕಾರಿ ವಿತರಣೆ ಮಾಡಿದ ಬಿಬಿಎಂಪಿ ಮಾಜಿ ಸದಸ್ಯೆ

8:20 PM, Thursday, June 10th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Manjulaಬೆಂಗಳೂರು : ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ಬಡವರಿಗೆ ಶಿವನಗರ ವಾರ್ಡ್ನಲ್ಲಿ ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ವಿಜಯಕುಮಾರ್ ಗುರುವಾರ ಬಡವರಿಗೆ ಫಾರಂ ಕೋಳಿ ಮತ್ತು 21 ಬಗೆಯ ತರಕಾರಿ ವಿತರಣೆ ಮಾಡಿದರು.

ಬಡವರು ಲಾಕ್ ಡೌನ್ ಜಾರಿಯಿಂದ ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕಷ್ಟಕರ ಸನ್ನಿವೇಶದಲ್ಲಿ ಅವರಿಗೂ ಮಾಂಸಹಾರ ಸೇವನೆ ಮಾಡಬೇಕು ಎಂದು ಆಸೆ ಇರುತ್ತದೆ. ಅದ್ದರಿಂದ, ಪ್ರತಿಯೊಬ್ಬರಿಗೂ ಒಂದು ಕೋಳಿ ಮತ್ತು ಪೌಷ್ಟಿಕಾಂಶ ತರಕಾರಿ ವಿತರಿಸಲಾಗಿದೆ ಎಂದು ಮಂಜುಳಾ ವಿಜಯಕುಮಾರ್ ತಿಳಿಸಿದ್ದಾರೆ.

ಶ್ರೀಮಂತರಿಗೆ ಹಣ ಇರುತ್ತದೆ ಉತ್ತಮ ಆಹಾರ ಸೇವಿಸುತ್ತಾರೆ.  ಲಾಕ್ ಡೌನ್ನಲ್ಲಿಬಡವರು ಮಾಂಸಹಾರ ಮತ್ತು ಪೌಷ್ಟಿಕಾಂಶ ತರಕಾರಿ ಸೇವನೆ ಮಾಡಬೇಕು ಎಂದು ಅವರು ಹೇಳಿದ್ದಾರೆ.

                       

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English