ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ಮೈಸೂರಿನ ಜಿಲ್ಲಾಧಿಕಾರಿ ಆಗಬೇಕೆಂದು ಸಹಿ ಸಂಗ್ರಹ

5:01 PM, Sunday, June 13th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

sindooriಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮತ್ತೆ ಮೈಸೂರಿನ ಜಿಲ್ಲಾಧಿಕಾರಿಯನ್ನಾಗಿ ನೇಮಿಸಬೇಕು ಎಂದು ಆನ್ಲೈನ್ ಕ್ಯಾಂಪೇನ್ ಶುರುವಾಗಿದೆ.

‘ಚೇಂಜ್ ಆರ್ಗ್’ ಸಾಮಾಜಿಕ ಮಾಧ್ಯಮದಲ್ಲಿ “ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ” ಹೆಸರಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದ್ದು, ಈಗಾಗಲೇ ಸುಮಾರು 26 ಸಾವಿರ ಜನರಿಂದ ಸಹಿ ಸಂಗ್ರಹ ಆಗಿದೆ.

ಮೈಸೂರಿನಲ್ಲಿ  ಭೂಮಿ ಒತ್ತುವರಿ ತೆರವು. ಕೆರೆಗಳ ಅಕ್ರಮ, ಸರ್ಕಾರಿ ಭೂಮಿ ಅಕ್ರಮ  ಮತ್ತು  ಭೂ ಮಾಫಿಯಾದ ಬುಡಕ್ಕೆ ಕೊಡಲಿ ಇಡುವ ಕೆಲಸವನ್ನು ರೋಹಿಣಿ ಸಿಂಧೂರಿ ಮಾಡಿದ್ದರು.

ರೋಹಿಣಿ ಸಿಂಧೂರಿ ಮತ್ತು ಶಿಲ್ಪಾನಾಗ್  ಕಿತ್ತಾಟದಲ್ಲಿ  ಇಬ್ಬರನ್ನೂ ಸರ್ಕಾರ ಕಳೆದ ವಾರ ವರ್ಗಾವಣೆ ಮಾಡಿದೆ. ಇವರಿಬ್ಬರಿಂದ ತೆರವಾದ ಸ್ಥಾನಕ್ಕೆ ಬೇರೆ ಅಧಿಕಾರಿಗಳು ಬಂದಿದ್ದಾರೆ.

ಇದೀಗ ‘ಚೇಂಜ್ ಆರ್ಗ್’ ಸಿಂಧೂರಿ ಮತ್ತೆ ಜಿಲ್ಲೆಗೆ ಬರಬೇಕು, ಜಿಲ್ಲಾಧಿಕಾರಿಯಾಗಿ ಇಲ್ಲೇ ಕೆಲಸ ಮಾಡಬೇಕು ಎಂದು ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಸಾರ್ವಜನಿಕರಿಂದ ಸಂಗ್ರಹವಾದ ಸಹಿಯನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ತಲುಪಿಸಲು ತಯಾರಿ ನಡೆದಿದೆ. 35 ಸಾವಿರ ಸಹಿ ಸಂಗ್ರಹಿಸುವ ಗುರಿಯ ಅಭಿಯಾನಕ್ಕೆ ಈಗಾಗಲೇ 26 ಸಾವಿರ ಜನ ಸಹಿ ಹಾಕಿದ್ದಾರೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English