ಮಂಗಳೂರು : ನಿಷೇದಿತ ಮಾದಕ ವಸ್ತು ಎಂಡಿಎಂಎ ಅನ್ನುಬೆಂಗಳೂರಿನಿಂದ ಕಾಸರಗೋಡಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಭಾನುವಾರ ಕೊಣಾಜೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಾಸರಗೋಡಿನ ಶಫೀಕ್ ಹಾಗೂ ಅಲ್ತಾಫ್ ಎಂದು ಗುರುತಿಸಲಾಗಿದೆ.
ಮಂಜನಾಡಿ ಗ್ರಾಮದ ನಾಟೆಕಲ್ ವಿಜಯನಗರ ಎಂಬಲ್ಲಿ ಪಿಎಸ್‌ಐ ಮಲ್ಲಿಕಾರ್ಜುನ ಬಿರದಾರ ಹಾಗೂ ಸಿಬ್ಬಂದಿಗಳೂ ವೇಳೆ ನಾಟೆಕಲ್ ಕಡೆಯಿಂದ ಬಂದ ಬಿಳಿ ಬಣ್ಣ ಸ್ವಿಫ್ಟ್ ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿದ್ದು, ಈ ವೇಳೆ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ವಿಚಾರಿಸಿದ ವೇಳೆ ಬೆಂಗಳೂರಿನ ಕಮ್ಮನಹಳ್ಳಿ ಎಂಬಲ್ಲಿಂದ ನಿಷೇಧಿತ ಮಾದಕ ದ್ರವ್ಯ ಎಂಡಿಎಂ ಅನ್ನು ಖರೀದಿಸಿ ತಂದಿದ್ದಾಗಿ ತಿಳಿಸಿದ್ದಾರೆ.
ಆರೋಪಿಗಳಿಂದ ಸುಮಾರು 3,90,000 ರೂ. ಮೌಲ್ಯದ ಒಟ್ಟು 65 ಗ್ರಾಂ ತೂಕದ ಎಂಡಿಎಂ, ಸ್ವಿಫ್ಟ್ ಕಾರು, ಸುಮಾರು 11,000 ರೂ. ಮೌಲ್ಯದ 4 ಮೊಬೈಲ್ ಸಹಿತ ಒಟ್ಟು 9.01 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪ ಪೊಲೀಸ್ ಆಯುಕ್ತ ಹರಿರಾಮ್ ಶಂಕರ್ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಹಾಗೂ ನಟರಾಜ್ ಎಸಿಪಿ ಸಂಚಾರ, ಕೊಣಾಜೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ ಹಾಗೂ ಪಿಎಸ್‌ಐ ಮಲ್ಲಿಕಾರ್ಜುನ ಬಿರದಾರ, ಶರಣಪ್ಪ ಭಂಡಾರಿ, ಎಎಸ್‌ಐ ಮೋಹನ್, ಸಿಬ್ಬಂದಿಗಳಾದ ನಾಗರಾಜ ಲಮಾಣಿ, ಅಶೋಕ್, ಪುರುಷೋತ್ತಮ, ಮಂಜುನಾಥ್, ಶಿವಕುಮಾರ ಭಾಗವಹಿಸಿದ್ದರು.
ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Click this button or press Ctrl+G to toggle between Kannada and English