ನಿಷೇದಿತ ಮಾದಕ ವಸ್ತು ಎಂಡಿಎಂಎ ವಶ, ಇಬ್ಬರ ಬಂಧನ

Sunday, June 13th, 2021
mdma

ಮಂಗಳೂರು : ನಿಷೇದಿತ ಮಾದಕ ವಸ್ತು ಎಂಡಿಎಂಎ ಅನ್ನುಬೆಂಗಳೂರಿನಿಂದ ಕಾಸರಗೋಡಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಭಾನುವಾರ ಕೊಣಾಜೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡಿನ ಶಫೀಕ್‌‌ ಹಾಗೂ ಅಲ್ತಾಫ್‌‌ ಎಂದು ಗುರುತಿಸಲಾಗಿದೆ. ಮಂಜನಾಡಿ ಗ್ರಾಮದ ನಾಟೆಕಲ್‌‌‌ ವಿಜಯನಗರ ಎಂಬಲ್ಲಿ ಪಿಎಸ್‌‌ಐ ಮಲ್ಲಿಕಾರ್ಜುನ ಬಿರದಾರ ಹಾಗೂ ಸಿಬ್ಬಂದಿಗಳೂ ವೇಳೆ ನಾಟೆಕಲ್‌ ಕಡೆಯಿಂದ ಬಂದ ಬಿಳಿ ಬಣ್ಣ ಸ್ವಿಫ್ಟ್‌‌‌‌ ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿದ್ದು, ಈ ವೇಳೆ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ವಿಚಾರಿಸಿದ ವೇಳೆ ಬೆಂಗಳೂರಿನ ಕಮ್ಮನಹಳ್ಳಿ ಎಂಬಲ್ಲಿಂದ […]

ಮಂಗಳೂರಲ್ಲಿ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ… ಓರ್ವನ ಸ್ಥಿತಿ ಗಂಭೀರ

Tuesday, December 19th, 2017
four-people

ಮಂಗಳೂರು: ನಗರದ ರಾವ್ ಆ್ಯಂಡ್ ವೃತ್ತದ ಬಳಿ ದುಷ್ಕರ್ಮಿಗಳ ತಂಡವೊಂದು ನಾಲ್ವರ ಮೇಲೆ ತಲವಾರ್‌‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ಹಲ್ಲೆಯಿಂದ ಒಬ್ಬನ ತಲೆಗೆ ಬಲವಾದ ಏಟು ಬಿದ್ದಿದ್ದು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಉಳಿದ ಮೂವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಶಫೀಕ್ (45), ಅನೀಸ್ (22), ಹಫೀಝ್ (22) ಹಾಗೂ ಪಕ್ಕದ ಪಾನ್ ಅಂಗಡಿಯ ಮಾಲೀಕ ಗಾಯಗೊಂಡಿದ್ದಾರೆ. ಹರ್ಷ ಬಾರ್ ಬಳಿ ನಿಂತಿದ್ದ ಶಫೀಕ್ ಮೇಲೆ ಮೂವರ ತಂಡವೊಂದು ಏಕಾಏಕಿ ಬಂದು ತಲವಾರ್‌ನಿಂದ ಹಲ್ಲೆ ನಡೆಸಿದೆ. ಆಗ ಇದೇ […]