ಬೆಂಗಳೂರು ಛೇಂಬರ್‌ ಆಫ್‌ ಕಾಮರ್ಸ್‌ ಮುಂದಾಳತ್ವದಲ್ಲಿ ಬಿಬಿಎಂಪಿಗೆ ವಿವಿಧ ನೆರವು

9:26 PM, Tuesday, June 15th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

BCCಬೆಂಗಳೂರು :  ಮಾನ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್‌ ಶೆಟ್ಟರ್‌ ಅವರು ಬೆಂಗಳೂರು ಛೇಂಬರ್‌ ಆಫ್‌ ಕಾಮರ್ಸ್‌ ಮುಂದಾಳತ್ವದಲ್ಲಿ ವಿವಿಧ ಕಂಪನಿಗಳು ತಮ್ಮ ಸಿಎಸ್‌ಆರ್‌ ಅನುದಾನದ ಅಡಿಯಲ್ಲಿ ನೀಡುತ್ತಿರುವ 2 ಎಲ್‌ಪಿಜಿ ಬಳಸಿ ಶವದಹನ ಮಾಡುವ ಚಿತಾಗಾರಗಳನ್ನು, 5 ದೇಹವನ್ನು ಕಾಪಿಡುವ ಶೈತ್ಯಾಗಾರಗಳನ್ನು, ಐಟಿಐ ಕೋವಿಡ್‌ ಆಸ್ಪತ್ರೆಗೆ 10 ಆಕ್ಸಿಜನ್‌ ಕಾನ್ಸನ್ಟ್ರೇಟರ್‌ ಮತ್ತು ಜಿಗಣಿ ಸರಕಾರಿ ಆಸ್ಪತ್ರೆಗೆ ಆಮ್ಲಜನಕ ಉತ್ಪಾದನಾ ಘಟಕವನ್ನು ಮಂಗಳವಾರ  ಬಿಬಿಎಂಪಿ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಬಿಸಿಐಸಿ ಯ ಅಧ್ಯಕ್ಷರಾದ ಪರುಶುರಾಮನ್‌, ಉಪಾಧ್ಯಕ್ಷರಾದ ಡಾ. ಎಲ್‌ ರವೀಂದ್ರನ್‌, ಹಿರಿಯ ಉಪಾಧ್ಯಕ್ಷರಾದ ಕೆ ಆರ್‌ ಶೇಖರ್‌, ಟಯೋಟಾ ಕಿರ್ಲೋಸ್ಕರ್‌ ಆಟೋ ಪಾರ್ಟ್ಸ್‌ನ ಜನರಲ್ ಮ್ಯಾನೇಜರ್ ನಾಗರಾಜ್‌, ಟಿಐಇಐ ವೈಸ್ ಪ್ರೆಸಿಡೆಂಟ್ ಅಮಿತ್‌ ಜೈನ್‌, ನಿರ್ದೇಶಕ ರಾದ ಪರಮೇಶ್ವರನ್‌, ಬಿಸಿಐಸಿ ಹಿಂದಿನ ಅಧ್ಯಕ್ಷೆ ಇಂದಿರಾ ಪ್ರೇಮ್‌ ಮೆನನ್‌ ಮತ್ತು ನಿವೃತ್ತ ಐಎಎಸ್‌ ಅಧಿಕಾರಿ ವಿದ್ಯಾಶಂಕರ್‌ ಉಪಸ್ಥಿತರಿದ್ದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English