ಮಂಗಳೂರು : ರೋಟರಿ ಜಿಲ್ಲಾ 3181ರ 2 ದಿನಗಳ ಅವಧಿಯ ವಾರ್ಷಿಕ ಸಮ್ಮೇಳನ “ಅಭಯ” ತಾ. 19, 20 ಜೂನ್‌ರಂದು ನಗರದ ಎ-1 ಲಾಗಿಕ್ಸ್ ಸಭಾಂಗಣದಲ್ಲಿ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮದ ಮೂಲಕ ಸರಳವಾಗಿ ಜರಗಿತು. ರೋಟರಿ ಅಂತರಾಷ್ಟ್ರೀಯ ಸಂಸ್ಥೆಯ ನಿರ್ದೇಶಕ ರೋ| ಭರತ್ ಪಾಂಡ್ಯ ಉದ್ಘಾಟಿಸಿದರು. ದೇಶದ ವಿವಿಧ ಪ್ರದೇಶದ ರೋಟರಿ ಸಂಸ್ಥೆಯ ಉನ್ನತ ಪದಾಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸಂಸ್ಥೆಯ ಧ್ಯೇಯ, ಉದ್ದೇಶಗಳು, ವಿವಿಧ ಸೇವೆಗಳ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ಅತಿಥಿ ಉಪನ್ಯಾಸಕರಾಗಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ
ಡಾ| ವೀರೇಂದ್ರ ಹೆಗ್ಗಡೆ, ಖ್ಯಾತ ಕನ್ನಡ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಖ್ಯಾತ ವಾಣಿಜ್ಯೋದ್ಯಮಿ ಉಲ್ಲಾಸ್ ಕಾಮತ್ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಆಸಕ್ತಿದಾಯಕ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ನಗರದ ಖ್ಯಾತ ವೈದ್ಯಕೀಯ ಶಾಸ್ತçತಜ್ಞ, ರೋಟರಿ ಜಿಲ್ಲಾ ಮಾಜಿ ಗವರ್ನರ್, ಸಂಸ್ಥೆಯ ಜಿಲ್ಲಾ ಉಪದೇಶಕ ಡಾ| ದೇವದಾಸ ರೈ ಅವರನ್ನು ಗೌರವಿಸಿ ರೋಟರಿ ಅಂತರಾಷ್ಟಿçÃಯ ಶ್ರೇಷ್ಠ ಮಟ್ಟದ “ಸ್ವಹಿತ ಮೀರಿದ ಸೇವೆ” ಪ್ರಶಸ್ತಿಯನ್ನು ರೋಟರಿ ಜಿಲ್ಲಾ ಸಲಹೆಗಾರರಾದ ಹಾಗೂ ಮಾಜಿ ಗವರ್ನರ್‌ರಾದ ರೋ| ಕೃಷ್ಣ ಶೆಟ್ಟಿಯವರು ಪ್ರದಾನ ಮಾಡಿ ಅಭಿನಂದಿಸಿದರು. ಈ ಪ್ರಶಸ್ತಿಯನ್ನು ಡಾ| ದೇವದಾಸ ರೈಯವರು ಮೂರು ದಶಕಗಳ ಕಾಲ ನಿರಂತರ ರೋಟರಿ ಸಂಸ್ಥೆಯ ಆಂದೋಲನ, ಅಭಿಯಾನಕ್ಕಾಗಿ ನೀಡಿದ ಅಮೂಲ್ಯ ಕೊಡುಗೆ, ಸಲ್ಲಿಸಿದ ಅನುಪಮ ಸೇವೆ ಮತ್ತು ಅಪ್ರಮಿತ ಸಾಧನೆಯನ್ನು ಪರಿಗಣಿಸಿ ನೀಡಲಾಯಿತು.
ರೋಟರಿ ಜಿಲ್ಲಾ ಗರ್ವನರ್‌ರಾದ ರೋ| ರಂಗನಾಥ ಭಟ್‌ರವರು ಡಾ| ರೈಯವರ ನಾಯಕತ್ವ ಗುಣ, ನಿಸ್ವಾರ್ಥ, ಪ್ರಾಮಾಣಿಕ ಸೇವೆ, ಕಾರ್ಯಕ್ಷಮತೆ ಮತ್ತು ಕರ್ತವ್ಯ ನಿಷ್ಠೆಯನ್ನು ಪ್ರಶಂಸಿಸಿ ಪ್ರಶಸ್ತಿಗೆ ಆಯ್ಕೆಯಾದ ಪ್ರತಿಭಾವಂತ ರೋಟರಿ ಸದಸ್ಯರೆಂದು ನುಡಿದರು.
ಪ್ರಶಸ್ತಿ ಸ್ವೀಕರಿಸಿ, ಪ್ರತಿಕ್ರಿಯಿಸಿದ ಡಾ| ರೈಯವರು ಪ್ರಶಸ್ತಿಗೆ ಪಾತ್ರರಾಗಿ ನನಗೆ ಸಂಸ್ಥೆಯ ಮೇಲಿನ ಅಭಿಮಾನ ಇನ್ನೂ ಹೆಚ್ಚಿದೆ, ಇನ್ನಷ್ಟು ಶ್ರಮಿಸಿ ಸಾಧಿಸಲು ಪ್ರೇರಣೆ ನೀಡಿದೆ. ಈ ಪ್ರಶಸ್ತಿ ಸ್ವೀಕರಿಸಲು ನಾನು ಸದಸ್ಯತ್ವ ಹೊಂದಿದ ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆ, ಹಾಗೂ ನನ್ನ ಸಹೋದ್ಯೋಗಿ ಸದಸ್ಯರ ಬೆಂಬಲ ಮತ್ತು ಸಹಕಾರ ಮೂಲ ಕಾರಣ ಎಂದು ನುಡಿದು ನಾನು ಜೀವನ ಪರ್ಯಂತ ರೋಟರಿ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುವೆನೆಂದು ಆಶ್ವಾಸನೆ ನೀಡಿ ರೋಟರಿ ಅಂತರಾಷ್ಟಿçÃಯ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಜಿಲ್ಲಾ ಸಮ್ಮೇಳನ ಕಾರ್ಯದರ್ಶಿ ರೋ| ಕಿರಣ್ ಪ್ರಸಾದ್ ರೈ, ಜಿಲ್ಲಾ ಮಾಹಿತಿ ಮತ್ತು ತಂತ್ರಜ್ಞಾನ ಕಾರ್ಯದರ್ಶಿ ರೋ| ಪ್ರವೀಣ್ ಉಡುಪ, ಜಿಲ್ಲಾ ಆಡಳಿತ ಕಾರ್ಯದರ್ಶಿ ರೋ| ವಿಕ್ರಮ್ ದತ್ತ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English