ಬೆಂಗಳೂರು : ದುಷ್ಕರ್ಮಿಗಳ ತಂಡವೊಂದು ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಒಬ್ಬರನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಡಾ ಘಟನೆ ಗುರುವಾರ ನಡೆದಿದೆ.
ಛಲವಾದಿಪಾಳ್ಯದ 138ನೇ ವಾರ್ಡ್ನ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆಯಾದ ದುರ್ದೈವಿ.
ಪತಿ ಕದಿರೇಶ್ ಅವರನ್ನು ಮನೆ ಸಮೀಪದ ಮುನೇಶ್ವರ ದೇವಸ್ಥಾನದ ಬಳಿ 2018ರ ಫೆಬ್ರವರಿ 8ರಂದು ಆಟೋದಲ್ಲಿ ಬಂದ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಕದಿರೇಶ್ರ ಸಹೋದರರು ಮತ್ತು ಸಾರ್ವಜನಿಕರ ಕಣ್ಣೆದುರಲ್ಲೇ ಈ ಹತ್ಯೆ ನಡೆದಿತ್ತು.
ಬೆಳಗ್ಗೆ ಛಲವಾದಿಪಾಳ್ಯದ ಫ್ಲವರ್ ಗಾರ್ಡನ್ನ ಮನೆಯಲ್ಲಿದ್ದ ರೇಖಾ ಕದಿರೇಶ್ ಅವರನ್ನು ಹೊರ ಕರೆದ ದುಷ್ಕರ್ಮಿಗಳು, ಮನೆ ಮುಂದೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ರೇಖಾರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯ ಲಾಯಿತ್ತಾದರೂ ಬದುಕಲಿಲ್ಲ.
ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ ಮತ್ತು ಕಾಟನ್ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಹಚರರಿಂದಲೇ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Click this button or press Ctrl+G to toggle between Kannada and English