ಮುಂಬಯಿ : ಅಮೀರ್ ಖಾನ್ ರೀನಾ ದತ್‌ಗೆ ವಿಚ್ಛೇದನ ನೀಡಿದ ಬಳಿಕ ಕಿರಣ್ ರಾವ್ ಅವರನ್ನು ವಿವಾಹವಾಗಿ ಅವರೊಂದಿಗೆ ಇದ್ದರು. ಅಮೀರ್ ಖಾನ್ ಜೀವನದಲ್ಲಿ ಇಬ್ಬರು ಮಹಿಳೆಯರು ಮಾತ್ರ ಬಂದರು ಎಂದು ಹೇಳಲಾಗಿದೆ. ಆದರೆ ರೀನಾಳ ಜೊತೆ ವಿಚ್ಛೇದನ ಹಾಗು ಕಿರಣ್ ರಾವ್ ಜೊತೆ ಮದುವೆಯಾಗಿತ್ತು. ಆದರೆ ಈಗ ಕಿರಣ್ ರಾವ್ ಜೊತೆಗೂ ವಿಚ್ಛೇದನವಾಗಿದೆ.
ಬಾಲಿವುಡ್ ನಟ ಅಮೀರ್ ಖಾನ್ ಘೋಷಣೆಯೊಂದನ್ನ ಮಾಡಿದ್ದು ತನಗೆ ಎಷ್ಟೇ ಮಕ್ಕಳಾದರೂ ಅವರನ್ನ ಮುಸಲ್ಮಾನರಾಗೇ ಮಾಡುತ್ತೇನೆ ಎಂದಿದ್ದಾನೆ.
ನಟ ಅಮೀರ್ ಖಾನ್ ಎರಡು ಮದುವೆಯಾಗಿದ್ದಾನೆ, ಇಬ್ಬರೂ ಹೆಂಡತಿಯರು ಹಿಂದುಗಳೇ ಆಗಿದ್ದಾರೆ. ಮೊದಲ ಹೆಂಡತಿಯ ಹೆಸರು ರೀನಾ ದತ್ ಆಗಿತ್ತು, ಆಕೆಯಿಂದ ಅಮೀರ್ ಖಾನ್ ಇಬ್ಬರು ಮಕ್ಕಳ ತಂದೆಯಾಗಿದ್ದ.
ಇದಾದ ಬಳಿಕ ಅಮೀರ್ ಖಾನ್ ಮತ್ತೊಬ್ಬ ಹಿಂದೂ ಮಹಿಳೆಯನ್ನ ಮದುವೆಯಾದ, ಆಕೆಯ ಹೆಸರು ಕಿರಣ್ ರಾವ್ ಅಂತ. ಕಿರಣ್ ರಾವ್ ನಿಂದಲೂ ಅಮೀರ್ ಖಾನ್ ಒಂದು ಮಗುವಿನ ತಂದೆಯಾಗಿದ್ದಾನೆ.
ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಮೀರ್ ಖಾನ್ ನನ್ನ ಹೆಂಡತಿಯರು ಹಿಂದುಗಳೇ ಆಗಿದ್ದರೂ ನನ್ನ ಮಕ್ಕಳು ಮಾತ್ರ ಮುಸಲ್ಮಾನರಾಗೇ ಇರುತ್ತಾರೆ ಹಾಗು ಇಸ್ಲಾಂ ಮತವನ್ನೇ ಪಾಲಿಸುತ್ತಾರೆ ಎಂದಿದ್ದಾನೆ.
ಅಷ್ಟೇ ಅಲ್ಲ ಮುಂದೆ ಮಾತನಾಡಿದ ಅಮೀರ್ ಖಾನ್ – ನಾನೊಬ್ಬ ಪಕ್ಕಾ ಮುಸಲ್ಮಾನನಾಗಿದ್ದು ಇಸ್ಲಾಂ ಮತವನ್ನ ಶೃದ್ಧೆಯಿಂದ ಪಾಲಿಸುತ್ತೇನೆ ಹಾಗು ರೋಜಾ ಕೂಡ ಇರುತ್ತೇನೆ ಎಂದಿದ್ದಾನೆ.
ಅಮೀರ್ ಖಾನ್ ತನ್ನ ಪೂರ್ವಜರ ನಂಟು ಪಾಕಿಸ್ತಾನದ ಪೇಶಾವರದ ಖಾನ್‌ದಾನ್ ನದ್ದಾಗಿದೆ ಎಂದು ಹೇಳಿದ್ದಾನೆ ಹಾಗು ನಾನು ಯಾವು ಯಾವುದೇ ವಿಷಯವನ್ನೂ ಮರೆಮಾಚುವುದಿಲ್ಲ ಎಂದಿದ್ದಾನೆ. ಅಷ್ಟೇ ಅಲ್ಲ ಅಮೀರ್ ಖಾನ್ ದಿನಕ್ಕೆ ಐದು ಬಾರಿ ತಪ್ಪದೇ ನಮಾಜ್ ಮಾಡುತ್ತೇನೆ ಅಂತಲೂ ಹೇಳಿದ್ದಾನೆ.
ಹಲವು ದಿನಗಳಿಂದ ವದಂತಿಗಳಂತೆ ಅಪ್ಪಳಿಸುತ್ತಿದ್ದ ಸಂಗತಿಗೆ ಇಂದು ಸ್ಪಷ್ಟತೆ ಸಿಕ್ಕಿದೆ. ಸ್ಟಾರ್ ದಂಪತಿ ಎನಿಸಿದ್ದ ಬಾಲಿವುಡ್ ನಟ ಆಮೀರ್ ಖಾನ್ ಮತ್ತು ಕಿರಣ್ ರಾವ್ ಅವರು ವಿವಾಹ ವಿಚ್ಛೇದನ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇಂದು ಇಬ್ಬರೂ ಜಂಟಿ ಹೇಳಿಕೆ ನೀಡಿ ತಮ್ಮ ಡಿವೋರ್ಸ್ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಆದರೆ, ದಾಂಪತ್ಯ ಅಂತ್ಯವಾದರೂ ಅವರಿಬ್ಬರ ಸಂಬಂಧ ಪರೋಕ್ಷ ರೀತಿಯಲ್ಲಿ ಮುಂದುವರಿಯಲಿರುವುದು ಗಮನಾರ್ಹ ಸಂಗತಿ. ಅವರಿಗೆ ಜನಿಸಿದ ಆಜಾದ್ ಅನ್ನು ಇಬ್ಬರೂ ಸೇರಿ ಪೋಷಿಸುವ ಜವಾಬ್ದಾರಿಯನ್ನು ಹಂಚಿಕೊಂಡಿದ್ಧಾರೆ. ಹಾಗೆಯೇ, ಪಾನಿ ಫೌಂಡೇಶನ್ ಇತ್ಯಾದಿ ಹಲವು ಕಾರ್ಯಗಳಲ್ಲಿ ಆಮೀರ್ ಖಾನ್ ಮತ್ತು ಕಿರಣ್ ರಾವ್ ಮಾಮೂಲಿಯಂತೆ ಒಟ್ಟಿಗೆ ಕೆಲಸ ಮಾಡಲಿದ್ದಾರೆ.
ಈ 15 ಅವಿಸ್ಮರಣೀಯ ವರ್ಷಗಳಲ್ಲಿ ನಾವು ಜೀವಮಾನದಷ್ಟು ಅನುಭವ, ಖುಷಿ, ನಗೆಯನ್ನ ಕಂಡಿದ್ದೇವೆ. ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಿಂದ ಗಟ್ಟಿಗೊಂಡಿದೆ. ಈಗ ನಮ್ಮ ಜೀವನಗಳಲ್ಲಿ ಹೊಸ ಆಧ್ಯಾಯ ಪ್ರಾರಂಭಿಸಲು ಇಚ್ಛಿಸಿದ್ದೇವೆ. ಆದರೆ, ನಾವಿಬ್ಬರೂ ಪತಿ ಮತ್ತು ಪತ್ನಿಯಾಗಿ ಹೊಸ ಆಧ್ಯಾಯ ಅಲ್ಲ, ಆದರೆ, ಪರಿಸ್ಪರರಿಗೆ ಸಹ-ಪೋಷಕರು ಮತ್ತು ಕುಟುಂಬವಾಗಿ ನಾವು ಇರಲಿದ್ದೇವೆ” ಎಂದು ಆಮೀರ್ ಮತ್ತು ಕಿರಣ್ ರಾವ್ ಜಂಟಿಯಾಗಿ ಸಹಿ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English