ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಲು ಪ್ರೇರೇಪಿಸಿ ನಗ್ನ ದೇಹದ ವಿಡಿಯೋ ತೋರಿಸಿ 30 ಲಕ್ಷ ವಸೂಲಿ – ಮೂವರ ಬಂಧನ

10:46 PM, Monday, July 5th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Puttur Honey Trapಪುತ್ತೂರು : ಓರ್ವ ಯುವತಿ ಮತ್ತು ಆರು ಮಂದಿ ಯುವಕರು ಸೇರಿ ಪುತ್ತೂರಿನ ಯುವಕನೊಬ್ಬನಿಗೆ ಮಾಡಿದ ಹನಿಟ್ರ್ಯಾಪ್ ಪ್ರಕರಣವನ್ನು ಭೇದಿಸಿರುವ ಪುತ್ತೂರು ಗ್ರಾಮಾಂತರದ ಸಂಪ್ಯ ರಾಣೆಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಯುವತಿಯೊಬ್ಬಳು ಅನಾಮಧೇಯ ನಂಬರ್‌ನಿಂದ ಯುವಕರೊಬ್ಬರಿಗೆ ಮಸೇಜ್ ಕಳುಹಿಸಿ ಪರಿಚಯ ಮಾಡಿಸಿಕೊಂಡು ಬಳಿಕ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಲು ಪ್ರೇರೇಪಿಸಿ ನಗ್ನ ದೇಹದ ವಿಡಿಯೋವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ತನ್ನ ಸಹಚರದೊಂದಿಗೆ ಸೇರಿಕೊಂಡು ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ರೂ. 30ಲಕ್ಷ ಹಣ ಪಡೆದು ಕೊಂಡಿದ್ದರು.

ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸಂತ್ರಸ್ತ ಯುವಕನ ದೂರಿಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಸಂಪ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English