ದೇಶ ದ್ರೋಹಿಗಳ ಸಮರ್ಥನೆ – ಕಾಂಗ್ರೆಸ್‌ನ ನಿಜ ಬಣ್ಣ ಬಯಲು : ವಿ ಸುನಿಲ್ ಕುಮಾರ್

9:00 PM, Friday, July 9th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Sunil Kumar ಕಾರ್ಕಳ : ಈ ದೇಶವನ್ನು ಬಹಳಷ್ಟು ವರ್ಷ ಆಳಿದ ರಾಜಕೀಯ ಪಕ್ಷವಾದ ಕಾಂಗ್ರೆಸ್ ದೇಶದ ಭದ್ರತೆಯ ವಿಚಾರ ಬಂದಾಗ, ಸೈನಿಕರ ವಿಚಾರ ಬಂದಾಗ ಪಾಕಿಸ್ತಾನವನ್ನು ಪರೋಕ್ಷವಾಗಿ ಬೆಂಬಲಿಸುವ ಹೇಳಿಕೆಗಳನ್ನು ರಾಷ್ಟೀಯ ಮಟ್ಟದಿಂದ ಹಿಡಿದು ತಳಮಟ್ಟದ ನಾಯಕರುಗಳು ನೀಡುತ್ತಿರುವುದು ಅಂಧಃಪತನದ ಪ್ರತೀಕ ಎಂದು ಕಾರ್ಕಳ ಶಾಸಕರಾದ ವಿ ಸುನಿಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಭಿವೃದ್ದಿ ಚಟುವಟಿಕೆಗಳನ್ನು ಸಹಿಸದೆ ಅನೇಕ ಅಪಪ್ರಚಾರ, ಸುಳ್ಳಿನ ಅಂತೆ-ಕAತೆಗಳನ್ನು ಸೃಷ್ಠಿಸಿ ಪ್ರಚಾರ ಪಡೆಯುತ್ತಿರುವುದರ ಜೊತೆಗೆ ಇದೀಗ ತನ್ನ ಕಾರ್ಯಕರ್ತರ ಮೂಲಕ ಸೈನಿಕರ ಆತ್ಮಸ್ಥೆಸ್ಥೈರ್ಯ ಕಸಿಯುವ ಮತ್ತು ದೇಶದ ಜನತೆ ಮುಜುಗರ ಪಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೇಶ ದ್ರೋಹದ ಹೇಳಿಕೆ ದಾಖಲಿಸಿರುವುದು ಅತ್ಯಂತ ಹೇಯ ಕೃತ್ಯ. ಅದನ್ನು ಸಮರ್ಥಿಸಿಕೊಳ್ಳುತ್ತಿರುವ ಈ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಮತ್ತು ಇತರ ಸ್ಥಳೀಯ ಕಾಂಗ್ರೆಸ್ ನಾಯಕರುಗಳಿಗೆ ನಾಚಿಕೆಯಾಗಬೇಕು.

ಈಗಾಗಲೇ ಇಂತಹ ಹೇಯ ಕೃತ್ಯಗಳಿಗೆ ಕುಖ್ಯಾತಿಯಾಗಿರುವ ರಾಧಾಕೃಷ್ಣ ನಾಯಕ್ ಎಂಬ ವ್ಯಕ್ತಿಯ ವಿಚಾರದಲ್ಲಿ ಕಳೆದ ವರ್ಷ ಐಪಿಸಿ ಸೆಕ್ಷನ್ 294 ರನ್ವಯ ಕೇಸ್ ಸಂಖ್ಯೆ 68/2020 ರಲ್ಲಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ. ಮಾತ್ರವಲ್ಲದೇ ಬೆಂಗಳೂರಿನಲ್ಲಿ ಈ ಹಿಂದೆ ಮಹಿಳೆಯೊಬ್ಬರಿಗೆ ನಕಲಿ ಸಾಮಾಜಿಕ ಜಾಲತಾಣ ಸೃಷ್ಠಿಸಿ ಕಿರುಕುಳ ನೀಡಿದ ಬಗ್ಗೆ ಕೂಡ ಆರೋಪ ಕೇಳಿ ಬಂದಿದ್ದು ಇಂತಹ ಅಪ್ರಬುದ್ದ ವಿಕೃತ ಮನೋಭಾವನೆಯ ವ್ಯಕ್ತಿಯನ್ನು ಬಳಸಿಕೊಂಡು ದೇಶ ದ್ರೋಹದ ಕೆಲಸ ಮುಂದುವರೆಸಿದಲ್ಲಿ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಇದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ.

ಈ ದೇಶದ ಗಾಳಿ, ನೀರು, ಮಣ್ಣು, ಆಹಾರ ಮತ್ತು ಪ್ರಕೃತಿಯೊಂದಿಗೆ ಬದುಕುವ ನಾವು ದೇಶಪ್ರೇಮ ಮೆರೆಯಬೇಕಾದುದು ಎಲ್ಲಾ ಪಕ್ಷದ ನಾಯಕರುಗಳ ಆದ್ಯ ಕರ್ತವ್ಯವಾಗಿದೆ. ವಿರೋದಿ ದೇಶ ಪಾಕಿಸ್ತಾನದ ಬಗ್ಗೆ ಅತೀ ವ್ಯಾಮೋಹ ಹೊಂದಿರುವ ವ್ಯಕ್ತಿಗಳು ಮತ್ತು ಅವರನ್ನು ಬೆಂಬಲಿಸುವ ಕಾಂಗ್ರೆಸ್ ನಾಯಕರುಗಳು ಪಾಕಿಸ್ತಾನಕ್ಕೆ ಪಲಾಯನ ಮಾಡಿ ಅಲ್ಲಿ ತಮ್ಮ ದೇಶದ ಬಗೆಗಿನ ದೇಶ ಭಕ್ತಿ ತೋರ್ಪಡಿಸುವುದು ಸೂಕ್ತ ಎಂದು ಕಾರ್ಕಳ ಶಾಸಕರಾದ ವಿ ಸುನಿಲ್ ಕುಮಾರ್ ರವರು ಪತ್ರಿಕಾ ಪ್ರಕಟನೆಯಲ್ಲಿ ಅಭಿಪ್ರಾಯ ವ್ಯಕ್ತಿಪಡಿಸಿದ್ದಾರೆ.

ದೇಶ ದ್ರೋಹದ ಚಟುವಟಿಕೆಗಳನ್ನು ಬೆಂಬಲಿಸುವವರು ಮಹಾ ದೇಶ ದ್ರೋಹಿಗಳು

ಕಾರ್ಕಳ : ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ದೇಶದ ಗಡಿಭಾಗದಲ್ಲಿ ದೇಶ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ನಮ್ಮ ದೇಶದ ಹೆಮ್ಮೆಯ ಸೈನಿಕರ ಸಾವನ್ನು ಬಯಸುವ ಕ್ರೂರ ಮನಸ್ಥತಿಯ ಕಾಂಗ್ರೆಸ್ ಕಾರ್ಯಕರ್ತನ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನಿಲುವನ್ನು ಕಾರ್ಕಳ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ.

ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರೇ, ದೀರ್ಘಕಾಲದಿಂದ ಬೇರೆ ಬೇರೆ ಪಕ್ಷಗಳಲ್ಲಿ ರಾಜಕೀಯ ಮಾಡಿಕೊಂಡು ಬಂದಿದ್ದ ಹಿರಿಯ ಮುತ್ಸದ್ದಿ ಎನಿಸಿಕೊಂಡವರಾದ ನೀವು, ಒಬ್ಬ ನಿಷ್ಕೃಷ್ಠ ಕೀಳು ವಿಚಾರದ ವ್ಯಕ್ತಿಯ ಪರವಾಗಿ ನಿಂತಿರುವುದು ದೇಶ ರಕ್ಷಣೆ ಬಗೆಗಿನ ನಿಮ್ಮ ನಿಲುವು ಏನೆಂಬುದು ಎತ್ತಿ ತೋರಿಸುತ್ತದೆ.

ದೇಶ ದ್ರೋಹಿ ಹೇಳಿಕೆಗಳನ್ನು ನೀಡುವವರನ್ನು ನಿಮ್ಮ ಜೊತೆಗಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಇದೆ ಮೊದಲಲ್ಲ. ಕೆಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಬೆಂಬಲ, ಮಂಗಳೂರು ಗಲಭೆಗೆ ಬೆಂಬಲ, ಹಿಂದೂ ಕಾರ್ಯಕರ್ತರ ಕೊಲೆಗಳ ಸಮರ್ಥನೆ, ನಿಮ್ಮ ಆಡಳಿತದಲ್ಲಿ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆಗಳ ದೇಶ ದ್ರೋಹಿ ಕೃತ್ಯಗಳ ಪ್ರಕರಣಗಳನ್ನು ಹಿಂತೆಗೆದುಕೊಂಡಿರುವುದು, ಮತ್ತು ವಿಧಾನ ಸಭೆಯಲ್ಲಿ ಯಾಸಿನ್ ಭಟ್ಕಳ ನಂತಹ ಭಯೋತ್ಪಾದಕನನ್ನು ಸಮರ್ಥಿಸಿ ಮಾತನಾಡುವ ನಿಮ್ಮ ಒಲೈಕಾ ರಾಜಕಾರಣ ಮತ್ತು ಪಾಕಿಸ್ತಾನ ಪ್ರೇಮ ಏನೆಂದು ಬಹಿರಂಗವಾಗುತ್ತಿದೆ. ರಾಷ್ಟ್ರೀಯತೆ ವಿಚಾರದಲ್ಲಿ ಕಾಂಗ್ರೆಸ್ ನಿಲುವನ್ನು ಪಕ್ಷದ ರಾಜ್ಯಾಧ್ಯಕ್ಷರಾದ ಡಿ ಕೆ ಶಿವಕುಮಾರ್ ರಾಜ್ಯದ ಜನತೆಯ ಮುಂದೆ ಸ್ಪಷ್ಟಪಡಿಸಬೇಕು.

ರಾಧಾಕೃಷ್ಣ ನಾಯಕ್ ಒಬ್ಬ ವಿಕೃತ ಮನೋಭಾವ ಉಳ್ಳವನಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ಸೃಷ್ಠಿಸಿ ದೇಶ ಮತ್ತು ವ್ಯಕ್ತಿಗಳ ನಿಂದನೆ ಮಾಡಿ ಬೆದರಿಸುವುದೆ ಈತನ ಹವ್ಯಾಸ. ಇಂತಹ ಸಂಸ್ಕಾರಹೀನ ವ್ಯಕ್ತಿಯನ್ನು ತನಿಖೆಗಾಗಿ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿರುವುದನ್ನು ಹಲ್ಲೆಯಾಗಿದೆ ಎಂಬುದಾಗಿ ಬಿಂಬಿಸಿ ದಕ್ಷ ಪೊಲೀಸ್ ವ್ಯವಸ್ಥೆಯ ಬಗ್ಗೆ ದೂಷಣೆ ಮಾಡುವುದು, ಪೊಲೀಸರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದು ಕಾಂಗ್ರೆಸ್‌ನ ರಾಜಕೀಯ ಅಜೆಂಡಾಗಳಲ್ಲಿ ಒಂದು. ಈ ಪ್ರಕರಣದಲ್ಲಿ ಈತನ ಮೇಲೆ ಪೊಲೀಸ್ ಇಲಾಖೆ ದೇಶ ದ್ರೋಹದ ಕೇಸು ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಆಗ್ರಹಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English