ಶಿಷ್ಯನ ಜೀವನದಲ್ಲಿ ಗುರುಗಳ ಮಹತ್ವ

10:44 PM, Saturday, July 10th, 2021
Share
1 Star2 Stars3 Stars4 Stars5 Stars
(No Ratings Yet)
Loading...

Guru Poornimaಮಂಗಳೂರು  : ಮನುಷ್ಯ ತನ್ನ ದಿನನಿತ್ಯದ ಜೀವನದಲ್ಲಿ ಅತ್ಯಂತ ಚಿಕ್ಕ-ಚಿಕ್ಕ ವಿಷಯಗಳಿಗೂ ಸಂಬಂಧಪಟ್ಟ ಪರಿಣಿತರ ಅಂದರೆ ಶಿಕ್ಷಕರು, ವೈದ್ಯರು, ವಕೀಲರು ಇತ್ಯಾದಿ ಇತರ ಯಾರಿಂದಲಾದರೂ ಮಾರ್ಗದರ್ಶನವನ್ನು ಪಡೆಯುತ್ತಾನೆ, ಹಾಗಾದರೆ ಮನುಷ್ಯ ಜನ್ಮದ ಮೂಲ ಉದ್ದೇಶ ಅಂದರೆ ಮೋಕ್ಷ ಪ್ರಾಪ್ತಿಗಾಗಿ ಯಾರ ಮಾರ್ಗದರ್ಶನ ಪಡೆಯಬೇಕು? ಮನುಷ್ಯ ಜೀವನದ ಉದ್ದೇಶ ಸಫಲವಾಗಲು ನಾವು ಭಗವಂತನ ಸಗುಣ ರೂಪವಾದ ಗುರುಗಳ ಮರ‍್ಗರ‍್ಶನ ಪಡೆಯಬೇಕು. ಹಾಗಾದರೆ ‘ಜನ್ಮ-ಮರಣದ ಚಕ್ರದಿಂದ ಮುಕ್ತಿ ಕೊಡುವ ಗುರುಗಳ ಮಹತ್ವ ಎಷ್ಟಿರಬಹುದು’ ಎಂಬುದರ ಕಲ್ಪನೆಯನ್ನೂ ಸಹ ಮಾಡಲು ಆಗುವುದಿಲ್ಲ. ಮನುಷ್ಯನ ಜೀವನದಲ್ಲಿ ತಂದೆ ಜನ್ಮ ಕೊಡಬಹುದು ಆದರೆ ಗುರುಗಳು ಅವನನ್ನು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸುತ್ತಾರೆ. ಆದ್ದರಿಂದಲೇ ತಂದೆಗಿಂತಲೂ ಗುರುಗಳನ್ನು ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಜನ್ಮ ಜನ್ಮಾಂತರಗಳಿಂದ ನಮ್ಮೊಟ್ಟಿಗೆ ಬಂದಿರುವ ಪ್ರಾರಬ್ಧ, ಅಯೋಗ್ಯ ಸಂಸ್ಕಾರಗಳು ಇವೆಲ್ಲ ನಮ್ಮನ್ನು ಈ ಭವ ಸಾಗರದಲ್ಲಿ ಮುಳುಗಿಸಲು ನೋಡಿದರೆ ಗುರಗಳು ತಮ್ಮ ಕೃಪೆಯಿಂದ ನಮ್ಮನ್ನು ಮೋಕ್ಷಕ್ಕೆ ಕರೆದೊಯ್ಯಲು ಕಾಯುತ್ತಿರುತ್ತಾರೆ ಅದಕ್ಕೆ “ಗುರುಕೃಪಾ ಹಿ ಕೇವಲಂ, ಶಿಷ್ಯ ಪರಮ ಮಂಗಲಂ” (ಗುರುಗಳ ಕೃಪೆಯಿಂದಲೇ ಶಿಷ್ಯನ ಪರಮ ಮಂಗಲ ವಾಗುತ್ತದೆ) ಎಂದು ಹೇಳಿದ್ದಾರೆ ಇದರಿಂದ ನಮಗೆ ಗುರುಗಳ ಅಸಾಧಾರಣ ಮಹತ್ವ ಗಮನಕ್ಕೆ ಬರುತ್ತದೆ.

ನಮ್ಮ ಜೀವನದಲ್ಲಿ ಗುರುಗಳು ಏಕೆ ಬೇಕು ?
ಮನುಷ್ಯ ಜನ್ಮದ ನಿಜವಾದ ಉದ್ದೇಶ ಎಂದರೆ ಮೋಕ್ಷ ಪ್ರಾಪ್ತಿ (ಈಶ್ವರ ಪ್ರಾಪ್ತಿ) ಮಾಡಿಕೊಳ್ಳುವುದು. ಮೋಕ್ಷ ಪ್ರಾಪ್ತಿ ಮಾಡಿಕೊಳ್ಳುವುದು ಎಂದರೆ ಒಂದು ಕಲ್ಲನ್ನು ಮರ‍್ತಿಯಾಗಿ ತಯಾರಿಸುವ ಪ್ರಕ್ರಿಯೆ. ಯಾವ ರೀತಿ ಒಂದು ಕಲ್ಲನ್ನು ಒಬ್ಬ ಶಿಲ್ಪಿ ತನ್ನ ಕೌಶಲ್ಯದಿಂದ ಕೆತ್ತಿ ಕೆತ್ತಿ ಅದಕ್ಕೆ ಒಂದು ಸುಂದರ ಆಕಾರವನ್ನು ನೀಡಿ ಅದನ್ನು ಪೂಜೆಗೆ ಯೋಗ್ಯವಾಗುವ ರೀತಿಯಲ್ಲಿ ಮರ‍್ತಿಯಾಗಿ ತಯಾರಿಸುವನೋ ಅದೇ ರೀತಿ ಗುರುಗಳು ನಮ್ಮನ್ನು ಉತ್ತಮ ಸಾಧಕನಾಗಿ ತಯಾರಿಸಿ ಮೋಕ್ಷದ ಆನಂದವನ್ನು ನೀಡುತ್ತಾರೆ. ಗುರುಗಳು ಶಿಷ್ಯನ ಅಜ್ಞಾನವನ್ನು ಹೋಗಲಾಡಿಸಿ, ಅವನ ಆಧ್ಯಾತ್ಮಿಕ ಉನ್ನತಿಯಾಗಬೇಕೆಂದು, ಅವನಿಗೆ ಸಾಧನೆ ಹೇಳುತ್ತಾರೆ, ಅದನ್ನು ಅವನಿಂದ ಮಾಡಿಸಿಕೊಳ್ಳುತ್ತಾರೆ ಮತ್ತು ಅವನಿಗೆ ಅನುಭೂತಿಗಳನ್ನೂ ಕೊಡುತ್ತಾರೆ. ಗುರುಗಳ ಗಮನವು ಶಿಷ್ಯನ ಲೌಕಿಕ ಸುಖದ ಕಡೆಗೆ ಇರುವುದಿಲ್ಲ (ಏಕೆಂದರೆ ಅದು ಪ್ರಾರಬ್ಧಕ್ಕನುಸಾರ ಇರುತ್ತದೆ), ಆಧ್ಯಾತ್ಮಿಕ ಉನ್ನತಿಯ ಕಡೆಗಿರುತ್ತದೆ. ಅದಕ್ಕಾಗಿ ನಮ್ಮ ಜೀವನದಲ್ಲಿ ಗುರುಗಳ ಮರ‍್ಗರ‍್ಶನದ ಅವಶ್ಯಕತೆ ಇರುತ್ತದೆ.

ಶಿಷ್ಯನ ಜೀವನದಲ್ಲಿ ಗುರುಗಳ ಮಹತ್ವ
‘ನಾನು ಯಾರು ?’ ಎನ್ನುವ ಶೋಧನೆ ಮಾಡುವುದು ಮತ್ತು ಗುರುಗಳಲ್ಲಿ ಶರಣಾಗುವುದು ಇವು ನಮ್ಮ ಸಾಧನೆಯಲ್ಲಿ ಉನ್ನತಿಯ ಎರಡು ಮರ‍್ಗಗಳಾಗಿವೆ. ಮನಸ್ಸನ್ನು ಸ್ವಸ್ಥವಾಗಿ ಇಟ್ಟುಕೊಳ್ಳುವುದು, ಗುರುಗಳಿಗೆ ಶರಣಾಗಿ ಕೃಪೆಗಾಗಿ ಕಾಯುವುದು ಸುಲಭವಾದ ವಿಷಯವಲ್ಲ. ಗುರುಗಳ ಅಖಂಡ ಸ್ಮರಣರೂಪದ ಅಭ್ಯಾಸದ ಅವಶ್ಯಕತೆಯಿದೆ. ಈ ಅಭ್ಯಾಸವೂ ಗುರುಕೃಪೆಯ ಸಹಾಯವಿದ್ದರೆ ಮಾತ್ರ ಸಾಧ್ಯ. ರಾತ್ರಿ ಮಗುವು ಮಲಗಿದ್ದಾಗ ತಾಯಿಯು ಅದಕ್ಕೆ ಹಾಲು ಕುಡಿಸುತ್ತಾಳೆ. ಮರುದಿನ ಆ ಮಗುವಿಗೆ ತಾನು ಏನೂ ಕುಡಿದೇ ಇಲ್ಲ ಎಂದೆನಿಸುತ್ತದೆ. ರಾತ್ರಿ ಮಗುವು ಹಾಲನ್ನು ಕುಡಿದಿರುವುದರ ಅರಿವು ತಾಯಿಗೆ ಮಾತ್ರವೇ ಇರುತ್ತದೆ. ಅಂತೆಯೇ ಶಿಷ್ಯನ ಉನ್ನತಿಯು ಯಾವ ರೀತಿಯಲ್ಲಿ ಆಗುತ್ತಿದೆ ಎನ್ನುವುದನ್ನು ಗುರುಗಳು ಅರಿತಿರುತ್ತಾರೆ. ಗುರುಗಳು ತಮ್ಮ ಕಣ್ಣುಗಳಿಂದ, ಶಬ್ದಗಳಿಂದ ಅಥವಾ ಸ್ರ‍್ಶದಿಂದ ಕೃಪೆಯ ಧಾರೆಯನ್ನು ಉದ್ದೇಶಪರ‍್ವಕವಾಗಿ ಭಕ್ತನೆಡೆ ಕಳುಹಿಸುತ್ತಾರೆ. ಈ ಕೃಪೆಯು ಗುರುಗಳ ಪ್ರಯತ್ನಗಳಿಂದ ಶಿಷ್ಯನಿಗೆ ಕೊಡಲಾಗಿರುತ್ತದೆ. ಗುರುಕೃಪೆಯ ಪರ‍್ಣ ಉಪಯೋಗವಾಗುವುದಕ್ಕಾಗಿ ಶಿಷ್ಯನು ಸತತವಾಗಿ ಪ್ರಯತ್ನವನ್ನು ಮುಂದುವರಿಸುತ್ತಾ ಇರಬೇಕು. ಶಿಷ್ಯನು ಯಾವ ಸಾಧನೆ ಮಾಡಬೇಕು ಎಂದು ಗುರುಗಳಿಗೆ ತಿಳಿದಿರುತ್ತದೆ. ಅವನಿಗೆ ಕೇವಲ ಸಾಧನೆಯನ್ನು ಹೇಳಿ ಸುಮ್ಮನಾಗದೇ ಅವನಿಂದ ಸಾಧನೆ ಮಾಡಿಸಿಕೊಳ್ಳುತ್ತಾರೆ. ಶ್ರೀ ಶಂಕರಾಚರ‍್ಯರು ಹೇಳಿದ್ದಾರೆ, ‘ಜ್ಞಾನದಾನ ಮಾಡುವ ಸದ್ಗುರುಗಳಿಗೆ ಶೋಭಿಸುವಂತಹ ಉಪಮೆ (ಹೋಲಿಕೆ) ಈ ತ್ರಿಭುವನದಲ್ಲಿ ಎಲ್ಲಿಯೂ ಇಲ್ಲ. ಅವರಿಗೆ ಸ್ರ‍್ಶಮಣಿಯ (ಪಾರಸಮಣಿ) ಉಪಮೆಯನ್ನು ನೀಡಿದರೂ ಅದು ಅಪರ‍್ಣವಾಗುವುದು; ಏಕೆಂದರೆ ಸ್ರ‍್ಶಮಣಿಯು ಕಬ್ಬಿಣವನ್ನು ಸುರ‍್ಣವನ್ನಾಗಿ ಮಾಡಿದರೂ, ಅದರ ಗುಣವನ್ನು ಕೊಡಲು ಸಾಧ್ಯವಿಲ್ಲ (ಅಂದರೆ ಕಬ್ಬಿಣವು ಸ್ರ‍್ಶಮಣಿಯ ಗುಣವನ್ನು ಪಡೆಯುವುದಿಲ್ಲ). ಗುರುಗಳ ಮಹತ್ವವನ್ನು ರ‍್ಣಿಸಲು ಶಿಷ್ಯನಿಗೆ ಶಬ್ದಗಳು ಸಾಕಾಗುವುದಿಲ್ಲ. ಗುರುಗಳು ಒಳಗೂ ಇದ್ದಾರೆ, ಹೊರಗೂ ಇದ್ದಾರೆ. ನೀವು ಅಂರ‍್ಮುಖರಾಗುವಂತಹ ಪರಿಸ್ಥಿತಿಯನ್ನು ಗುರುಗಳು ನರ‍್ಮಿಸುತ್ತಾರೆ. ನಿಮ್ಮನ್ನು ಆತ್ಮದ ಕಡೆಗೆ ಅಂದರೆ ಬ್ರಹ್ಮನ ಕಡೆಗೆ ಸೆಳೆಯಬೇಕೆಂದು ಗುರುಗಳು ಒಳಗೆ ಅಂದರೆ ಹೃದಯದಲ್ಲಿ ಸಿದ್ಧತೆ ಮಾಡುತ್ತಾ ಇರುತ್ತಾರೆ.

ಗುರುಶಿಷ್ಯ ಪರಂಪರೆಯ ಕೊಡುಗೆ
ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಯನ್ನು ಕಾಪಾಡಲಾಗಿದೆ. ಅಲ್ಲದೇ ಈ ಪರಂಪರೆಯೆಂದರೆ ಭಾರತೀಯ ಸಂಸ್ಕೃತಿಯ ಭೂಷಣವಾಗಿದೆ. ‘ಗುರುಗಳ ಮಹತ್ವ’ವೇ ಅದರಲ್ಲಿನ ರ‍್ಮವಾಗಿದೆ. ಹಿಂದೂ ಸಂಸ್ಕೃತಿಯಲ್ಲಿ ಗುರುಗಳು ಶಿಷ್ಯನಿಂದ ಮಾಡಿಸಿಕೊಂಡಿರುವ ಕರ‍್ಯಗಳನ್ನು ಅನೇಕ ಉದಾಹರಣೆಗಳ ಮೂಲಕ ಬಣ್ಣಿಸಬಹುದು. ‘ರ‍್ಯ ಚಾಣಕ್ಯ ಮತ್ತು ಚಂದ್ರಗುಪ್ತ ಮರ‍್ಯ’, ‘ಸರ‍್ಥ ರಾಮದಾಸಸ್ವಾಮಿ ಮತ್ತು ಛತ್ರಪತಿ ಶಿವಾಜಿ ಮಹಾರಾಜರು’, ‘ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದ’, ‘ಗೋವಿಂದಪೂಜ್ಯಪಾದ ಆದಿ ಶಂಕರಾಚರ‍್ಯರು’, ‘ದ್ರೋಣಾಚರ‍್ಯ ರ‍್ಜುನ ಮತ್ತು ಏಕಲವ್ಯ’ ಮುಂತಾದ ಗುರು-ಶಿಷ್ಯರ ಜೋಡಿಗಳು ಮತ್ತು ಅವರ ಅದ್ವಿತೀಯ ಕರ‍್ಯವು ಇಂದು ಜಗತ್ಪ್ರಸಿದ್ಧವಾಗಿದೆ. ಇವೆಲ್ಲ ಉದಾಹರಣೆಗಳಿಂದ ಅರ‍್ಮದ ವಿರುದ್ಧ ಹೋರಾಡುವ ಶ್ರೀಕೃಷ್ಣನು ರ‍್ಜುನನಿಗೆ ಮಾಡಿದ ಉಪದೇಶವು ಎಲ್ಲೆಡೆ ಹರಡಿದೆ. ರ‍್ತಮಾನ ಕಾಲದ ಅರ‍್ಮಾಚರಣಿ ವಾತಾವರಣವನ್ನು ಗಮನಿಸಿ ಗುರು-ಶಿಷ್ಯ ಸಂಬಂಧದ ಅನುಭವ ಹಾಗೂ ಅದರಿಂದ ರ‍್ಮಾಚರಣಿ ರಾಜ್ಯ ಸ್ಥಾಪನೆಯ ಅವಶ್ಯಕತೆ ಗಮನಕ್ಕೆ ಬರುತ್ತದೆ.

ಇದೆ ಜುಲೈ 23 ಆಷಾಢ ಹುಣ್ಣಿಮೆಯಂದು ‘ಗುರುಪರ‍್ಣಿಮೆ’ ಇದೆ. ಈ ದಿನದಂದು ಗುರುಗಳ ತತ್ತ್ವವು ಭೂಮಿಯ ಕಡೆ 1000 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಕರ‍್ಯರತವಾಗಿರುತ್ತದೆ. ಈ ಗುರುತತ್ವ್ತದ ಲಾಭ ಪಡೆಯಲು ಮತ್ತು ಗುರುಗಳ ಕೃಪೆಗೆ ಪಾತ್ರರಾಗಲು ಗುರುಗಳಿಗೆ ಅಪೇಕ್ಷಿತ ವಿರುವಂತೆ ರ‍್ಮಕರ‍್ಯದಲ್ಲಿ ಸಹಭಾಗಿಯಾಗೋಣ.

ಸಂಕಲನ : ಶ್ರೀ ವಿನೋದ ಕಾಮತ, ವಕ್ತಾರರು, ಸನಾತನ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲೆ .
ಸಂಪರ್ಕ: 93425 99299

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English