ಮಂಗಳೂರು: ಹಲವಾರು ಅಪರಾಧ ಕೃತ್ಯಗಳಲ್ಲಿ ಆರೋಪಿಗಳ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ ನಗರ ಪೊಲೀಸ್ ಕಮಿಶನರೇಟ್ ನ ಶ್ವಾನದಳದ ಸದಸ್ಯೆ ಸುಧಾ ಮೃತಪಟ್ಟಿದೆ.
ಡೊಬರ್ ಮನ್ ಶ್ವಾನ 2011 ಮಾರ್ಚ್ 15 ರಂದು ಜನಿಸಿತ್ತು. 2013 ಏ.2ರಂದು ಸೇವೆಗೆ ಸೇರಿತ್ತು. ಸಂದೀಪ್ ಎಂಬವರು ಈ ಶ್ವಾನದ ನಿರ್ವಹಣೆ ಮಾಡುತ್ತಿದ್ದರು.
ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಮೊದಲಾದ ಹಿರಿಯ ಅಧಿಕಾರಿಗಳು ಮೃತ ಶ್ವಾನಕ್ಕೆ ಅಂತಿಮ ನಮನ ಸಲ್ಲಿಸಿದರು.
Click this button or press Ctrl+G to toggle between Kannada and English