ನಟಿ ವಿನ್ನಿ ಫರ್ನಾಂಡಿಸ್‌ ಗೆ ಹೃದಯಾಘಾತ

5:00 PM, Thursday, July 29th, 2021
Share
1 Star2 Stars3 Stars4 Stars5 Stars
(No Ratings Yet)
Loading...

Vinni - Fernandes ಮಂಗಳೂರು : ಕನ್ನಡ, ತುಳು, ಕೊಂಕಣಿ ಭಾಷೆಯ ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ನಟಿ ವಿನ್ನಿ ಫರ್ನಾಂಡಿಸ್‌ (63) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ವಿನ್ನಿ ಕೊಂಕಣಿ ನಾಟಕಗಳಲ್ಲಿನ ಪಾತ್ರಗಳೊಂದಿಗೆ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ ತುಳು ಮತ್ತು ಕನ್ನಡ ನಾಟಕಗಳಲ್ಲೂ ಅಭಿನಯಿಸಿದ್ದರು. ಹಾಸ್ಯ, ಸಾಮಾಜಿಕ ಪಾತ್ರಗಳಲ್ಲಿ ಹೆಚ್ಚು ಪ್ರಸಿದ್ಧಿಯಾಗಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿದ್ದರು. ಪತಿ ವಿನ್ಸೆಂಟ್‌, ಮಕ್ಕಳಾದ ಪ್ರತಾಪ್‌, ಬಬಿತಾ ಅವರನ್ನು ಅಗಲಿದ್ದಾರೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English