ಮುಂಬೈಯಲ್ಲಿ ಮೃತಪಟ್ಟಿದ್ದ ಪುತ್ತೂರು ನಿವಾಸಿಯ ಗುರುತು ಪತ್ತೆ

2:33 PM, Saturday, July 31st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Shashi Poojaryಪುತ್ತೂರು: ಮುಂಬೈಯಲ್ಲಿ ಮೃತಪಟ್ಟಿದ್ದ ಪುತ್ತೂರು ನಿವಾಸಿಯ ಗುರುತು ಪತ್ತೆಯಾಗಿದೆ. ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಮೂಡಾಯೂರು ಎಂಬಲ್ಲಿಯ ಶಶಿ ಪೂಜಾರಿ ಮುಂಬೈಯಲ್ಲಿ ಮೃತಪಟ್ಟವರು ಎಂದು ಗುರುತು ಪತ್ತೆ ಹಚ್ಚಲಾಗಿದೆ. ಮೃತದೇಹ ತರಲು ಇದೀಗ ಅವರ ಸಂಬಂಧಿಕರು ಮುಂಬೈಗೆ ತೆರಳಿದ್ದಾರೆ.

ಈ ಬಗ್ಗೆ ಮೆಗಾ ಮೀಡಿಯಾ ನ್ಯೂಸ್ ನಲ್ಲಿ ಜುಲೈ 27 ರಂದು ಸುದ್ದಿ ಪ್ರಕಟಿಸಲಾಗಿತ್ತು. ‘ಮಹಾರಾಷ್ಟ್ರದ ಬಾಂದ್ರಾಪೂರ್ವದ ಎವರ್ ಗ್ರೀನ್ ಹೋಟೇಲ್ ಬಳಿ ಕಳೆದ 35 ವರ್ಷಗಳಿಂದ ಪಾನ್ ಬೀಡ ಅಂಗಡಿ ಹೊಂದಿದ್ದ ಶಶಿ ಪೂಜಾರಿಯವರು ಮೃತಪಟ್ಟಿದ್ದಾರೆ. ಇವರು ತಾನು ದಕ್ಷಿಣ ಕನ್ನಡದ ಪುತ್ತೂರಿನವರು ಎಂದು ನಮ್ಮಲ್ಲಿ ಹೇಳಿ ಕೊಳ್ಳುತ್ತಿದ್ದರು. ನನ್ನ ಸಹೋದರ, ಸಹೋದರಿ ಪುತ್ತೂರಿನಲ್ಲಿ ಇದ್ದಾರೆ ಎಂದು ತಿಳಿಸಿದ್ದರು. ಇವರ ವಾರಿಸುದಾರರು ಯಾರಾದರು ಇದ್ದರೆ ಕೂಡಲೇ ನಮ್ಮನ್ನು ಸಂಪರ್ಕಿಸಿ’ ಎಂದು ಕೆಲವು ದಿನಗಳಿಂದ ಮೃತರ ಭಾವಚಿತ್ರ ಹಾಗೂ ಮುಂಬೈಯಲ್ಲಿರುವ ಅವರ ಸ್ನೇಹಿತರು  ಮೊಬೈಲ್ ಫೋನ್ ನಂಬರ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು.‌ ಮುಂಬೈಯಲ್ಲಿ ಮೃತರಾಗಿರುವ ಪುತ್ತೂರಿನವರು ಯಾರಾಗಿರಬಹುದು ಎಂದು ವ್ಯಾಪಕ ಕುತೂಹಲ ಸೃಷ್ಠಿಸಿತ್ತು. ಇದೀಗ ಅವರ ಗುರುತು ಪತ್ತೆಯಾಗಿದೆ.

ಮೂಡಾಯೂರಿನ ಲಕ್ಷ್ಮಿ ಮತ್ತು ನಾಗಪ್ಪ ಪೂಜಾರಿಯವರ ಪುತ್ರ ಶಶಿಪೂಜಾರಿ ಯಾನೆ ಶಿವಪ್ಪ ಪೂಜಾರಿ(55ವ)ಯವರೇ ಮುಂಬೈಯಲ್ಲಿ ಮೃತಪಟ್ಟ ವ್ಯಕ್ತಿ ಎಂಬುದು ಇದೀಗ ಗೊತ್ತಾಗಿದೆ.‌ 35 ವರ್ಷಗಳ ಹಿಂದೆ ಉದ್ಯೋಗ ಅರಸಿ ಇವರು ಮುಂಬೈಗೆ ಹೋಗಿದ್ದವರು ಮತ್ತೆ ಇತ್ತ ಬಂದಿರಲಿಲ್ಲ, ಮನೆಯವರ ಜತೆ ಸಂಪರ್ಕವೂ ಹೊಂದಿರಲಿಲ್ಲ. ಪ್ರಾರಂಭದಲ್ಲಿ ಅವರಿಗಾಗಿ ಹುಡುಕಾಟ ನಡೆಸಿದ್ದ ಮನೆಯವರು ಬಳಿಕ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಅವಿವಾಹಿತರಾಗಿದ್ದ ಇವರು ತಾನು ಮುಂಬೈಯಲ್ಲಿ ಹೊಂದಿದ್ದ ಪಾನ್‌ಬೀಡ ಅಂಗಡಿಯ ಬಳಿ ಎರಡು ರೂಮುಗಳನ್ನು ಹೊಂದಿದ್ದರು. ಮೃತ ಶಶಿ ಪೂಜಾರಿಯವರ ಸಹೋದರ, ಬನ್ನೂರು ಗ್ರಾಮ ಪಂಚಾಯತ್ ಸದಸ್ಯರೂ, ನಾಟಕ ಕಲಾವಿದರೂ ಆಗಿರುವ ಮೂಡಾಯೂರು ತಿಮ್ಮಪ್ಪ ಪೂಜಾರಿ ಮತ್ತು ಅವರ ಆಪ್ತರು ಮುಂಬೈಗೆ ತೆರಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English