ಬೆಂಗಳೂರು : ಸದಾ ಸಂಸಾರದ ರಥ ಸಾಗಿಸುವಲ್ಲಿಯೇ ಕಳೆದುಹೋದ ಹೆಂಗಳೆಯರ ಆತ್ಮಸ್ಥೈರ್ಯವನ್ನು ಹೆಚ್ಚಿಸಿ ಅವರಲ್ಲಿನ ಪ್ರತಿಭೆಗೊಂದು ವೇದಿಕೆ ಕಲ್ಪಿಸಿ ಕೊಡುವ ಮಿಸೆಸ್ ಇಂಡಿಯಾ ಕರ್ನಾಟಕ ಅಂತಿಮ ಹಣಾಹಣಿಗೆ ಕ್ಷಣಗಣನೆ ಆರಂಭವಾಗಿದೆ.
ಮಿಸೆಸ್ ಇಂಡಿಯಾ ಕರ್ನಾಟಕದ ನಿರ್ದೇಶಕಿ ಪ್ರತಿಭಾ ಸಂಶಿಮಠ ಅವರ ನೇತೃತ್ವದಲ್ಲಿ ಪ್ರತಿ ವರ್ಷವೂ ಅದ್ಧೂರಿಯಾಗಿ ನೆರವೇರುವ ಮಿಸೆಸ್ ಇಂಡಿಯಾ ಕರ್ನಾಟಕ ಫೈನಲ್ ಸ್ಪರ್ಧೆಯು ಈ ಬಾರಿ ಮೂರು ದಿನಗಳ ಕಾಲ ಅಂದರೆ ಆಗಸ್ಟ್ 9, 10 ಮತ್ತು 11ರಂದು ಆಯೋಜನೆಗೊಂಡಿದ್ದು, ನಗರದ ಯಲಹಂಕದಲ್ಲಿನ ರಮಡಾ ಹೋಟೆಲ್ ನಲ್ಲಿ ನಡೆಯಲಿದೆ. ಈಗಾಗಲೇ ಮಿಸೆಸ್ ಇಂಡಿಯಾ ಕರ್ನಾಟಕದಲ್ಲಿ ವಿಜೇತರಾಗಿ ರಾಜ್ಯವನ್ನ ಪ್ರತಿನಿಧಿಸಿದ್ದ ಹಲವರು ದೀಪಾಲಿ ಫಡ್ನಿಸ್ ಅವರು ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುವ ಮಿಸೆಸ್ ಇಂಡಿಯಾ ಕೀರಿಟ ಹಾಗೂ ರನ್ನರ್ ಅಪ್ ಕೀರಿಟ ಮುಡಿಗೇರಿಸಿಕೊಳ್ಳುವ ಮೂಲಕ ತಮ್ಮ ಪ್ರತಿಭೆಯನ್ನ ಪ್ರದರ್ಶಿಸಿದ್ದಾರೆ. ಈ ಸ್ಪರ್ಧೆಯು ಮೂರು ಗುಂಪುಗಳಾಗಿ ಆಯೋಜನೆಗೊಂಡಿದ್ದು 20 ರಿಂದ 40 ವಯೋಮಾನ, 40 ರಿಂದ 60 ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕವಾಗಿ ಸ್ಪರ್ಧೆ ಆಯೋಜಿಸಲಾಗಿರುತ್ತದೆ.
ಪ್ರತಿ ವರ್ಷದಂತೆ ತೀವ್ರ ಕುತೂಹಲ ಕೆರಳಿಸಿರುವ ಪೈನಲ್ ಪಂದ್ಯಕ್ಕೆ ಈ ಬಾರಿ ರಾಯಲ್ ಬ್ಲೂ ಕಲರ್ ಥೀಮ್ ಆಯ್ಕೆ ಮಾಡಿಕೊಳ್ಳಲಾಗಿದ್ದು, ಡಾಲ್ಸ್ ಮತ್ತು ಮೋರ್ನ ವಸ್ತ್ರ ವಿನ್ಯಾಸಗಾರ್ತಿ ರೇಣು ಕೋಹ್ಲಿ ವಿನ್ಯಾಸಗೊಳಿಸಿದ್ದಾರೆ. ಸ್ಪರ್ಧಿಗಳ ವಿವಿಧ ರೂಪದ ಫೋಟೋ ಶೂಟ್, ವೈಯಕ್ತಿಕ ಸಂದರ್ಶನ ನಡೆಸಲಕಾಗಿದ್ದು, ಪ್ರತಿ ಸ್ಪರ್ಧಿಯನ್ನು ವಿವಿಧ ಹಿನ್ನೆಲೆಯಿಂದ ಬಂದಿರುವ ನಾಲ್ಕು ಜನ ತೀರ್ಪುಗಾರರು ಸಂದರ್ಶನ ಮಾಡಲಿದ್ದಾರೆ. ಮಧ್ಯಾಹ್ನ ಓರಿಯಂಟೇಷನ್ ಮತ್ತು ವರ್ಕ್ಶಾಪ್ ನಡೆಸಲಾಗುತ್ತಿದ್ದು, ಸಂಜೆ ಪ್ರತಿಭಾ ಸ್ಪರ್ಧೆ ನಡೆಯಲಿದೆ. ಇದೇ ಮೊದಲ ಬಾರಿಗೆ ಸ್ಪರ್ಧಿಗಳಿಗಾಗಿ ಸಾಕಷ್ಟು ವಿನೋದ ಮೂಡಿಸುವ ಪೈಜಾಮ ಮಾರ್ಟಿ ಪೋಟೋ ಶೂಟ್ ಆಯೋಜಿಸಲಾಗಿದೆ.
ಆಗಸ್ಟ್ 10 ರಂದು ಸ್ಪರ್ಧಿಗಳಿಗೆ ಸ್ಪೋಟ್ರ್ಸ್ ಥೀಮ್ ಫೋಟೋಶೂಟ್ ಆಯೋಜಿಸಲಾಗಿದ್ದು, ದೇಶಿಯ ಲಗೋರಿ ಖೋ..ಖೋ.. ಗಿಲ್ಲಿ ದಾಂಡು ಸೇರಿದಂತೆ ಹಾಗೂ ವಿದೇಶಿಯ ಕ್ರೀಡೆಗಳಾದ ಫುಟ್ ಬಾಲ್, ಕ್ರಿಕೆಟ್, ಲಾನ್ ಟೆನ್ನಿಸ್, ಬಾಸ್ಕೆಟ್ ಬಾಲ್, ಟೆಬಲ್ ಟೆನ್ನಿಸ್ ಮತ್ತು ಟಗ್ ಆಫ್ ವಾರ್ ನಡೆಸಲಾಗುತ್ತದೆ. ಇದಾದ ನಂತರ ಗ್ರೂಮಿಂಗ್ ಮತ್ತು ಕೋರಿಯಾಗ್ರಫಿ ಬಗ್ಗೆ ತಿಳಿಸಿಕೊಡಲಾಗುತ್ತಿದ್ದು, ಆಮೇಲೆ ವಿಶೇಷ ಇಂಡಿಯನ್ ಫೋಟೋಶೂಟ್ ಕೈಗೊಳ್ಳಲಾಗುತ್ತದೆ.
ಈ ಎಲ್ಲವುಗಳ ಆಧಾರದ ಮೇಲೆ ಪ್ರಮುಖ ಫೈನಲ್ ಸ್ಪರ್ಧೆಯು ಆಗಸ್ಟ್ 11ರಂದು ಮೂರು ಸುತ್ತಿನ ಮೂಲಕ ನಡೆಯಲಿದೆ. ಸ್ಪರ್ಧಿಗಳು ಸಾಸ್ಕøತಿಕ ಹಿನ್ನೆಲೆಯ ಯಾವುದೇ ಸಂದೇಶವುಳ್ಳ ಅಥವಾ ಥೀಮ್ ಬೇಕಾದರು ಆಯ್ದುಕೊಳ್ಳಬಹುದಾಗಿದೆ. ಎರಡನೇ ಸುತ್ತಿನಲ್ಲಿ ಸಾಸಿ ಎಲೆಗೆಂಝಾ ವಿನ್ಯಾಸಗಾರ್ತಿ ಸಂಧ್ಯಾ ವಿನ್ಯಾಸಗೊಳಿಸಿರುವ ಹವಾಯಿನ್ ಥೀಮ್ನಲ್ಲಿ ಕಂಗೋಳಿಸಲಿದ್ದು, ಅಂತಿಮ ಸುತ್ತಿನಲ್ಲಿ ವೆಸ್ಟ್ರ್ನ್ ಗೌನ್ ನಲ್ಲಿ ಕಣ್ಮನ ಸೆಳೆಯಲಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳನ್ನು ಪ್ರತಿನಿಧಿಸುತ್ತಿದ್ದು, ಜಿಲ್ಲೆಗೊಬ್ಬರಂತೆಯೂ ವಿಜೇತರನ್ನ ಘೋಷಿಸಲಾಗುತ್ತದೆ. ಹಾಗೆಯೇ ಅಂತಿಮ ಸ್ಪರ್ಧೆಯ ಸುತ್ತಿಗೆ ಮೂರು ವಯೋಮಾನದವರು ಸೇರಿದಂತೆÀ 25 ಲಲನೆಯರು ಆಯ್ಕೆಯಾಗಲಿದ್ದು, ಪ್ರಶ್ನೋತ್ತರದ ಮೂಲಕ ವಿಜೇತರನ್ನ ಘೋಷಿಸಲಾಗುತ್ತದೆ. ವಿವಿಧ ವೀಡಿಯೋ ತುಣುಕುಗಳನ್ನ ಚಿತ್ರಿಸಲಾಗಿದ್ದು, ಅದರಲ್ಲಿ ವಿಶೇಷವಾಗಿ ಆ ಯಾಮ್ ವುಮೆನ್ ಎಂಬುದರಲ್ಲಿ ಸ್ಪರ್ಧಿಗಳು ತಮ್ಮ ಪಾಸಿಟಿವ್ ಹಾಗೂ ನೆಗೆಟಿವ್ ಅಂಶಗಳನ್ನ ಹಂಚಿಕೊಳ್ಳಲಿದ್ದಾರೆ.
ಈ ಕುರಿತು ಮಾತನಾಡಿದ ಮಿಸೆಸ್ ಇಂಡಿಯಾ ಕರ್ನಾಟಕದ ಆಯೋಜಕಿ, ಮಿಸೆಸ್ ಏಶಿಯಾ ಇಂಟರ್ ನ್ಯಾಷನಲ್ & ಮಿಸೆಸ್ ಇಂಡಿಯಾ 2015, ನಿರ್ದೇಶಕಿ ಮಿಸೆಸ್ ಇಂಡಿಯಾ ಕರ್ನಾಟಕ ಪ್ರತಿಭಾ ಸಂಶಿಮಠ,”ಹೆಣ್ಣು ಕೇವಲ ಬಾಹ್ಯವಾಗಿಯಷ್ಟೇ ಸೌಂದರ್ಯವುಳ್ಳವಳಲ್ಲ, ಆಂತರಿಕವಾಗಿಯೂ ಅವಳು ಪ್ರತಿಭಾಪೂರ್ಣಳು, ಅಂತಃಶಕ್ತಿಯುಳ್ಳವಳು. ಈ ಕಾರಣಕ್ಕೆ ನಮ್ಮ ವೇದಿಕೆಯಲ್ಲಿ ಶಾರೀರಿಕ ಸೌಂದರ್ಯಕ್ಕಿಂತ ಹೆಚ್ಚಾಗಿ ಆಕೆಯಲ್ಲಿ ಸುಪ್ತವಾಗಿರುವ ಪ್ರತಿಭೆಗೆ ವೇದಿಕೆ ಕಲ್ಪಿಸಿ ಇಡೀ ಸಮಾಜ ಆಕೆಯನ್ನ ಹೆಮ್ಮೆಯಿಂದ ಗುರುತಿಸುವಂತೆ ಮಾಡುವುದಾಗಿದೆ,” ಎಂದು ತಿಳಿಸಿದರು.
ಪ್ರತಿಭಾ ಸಂಶಿಮಠ ಅಂತರಾಷ್ಟ್ರೀಯ ಮಟ್ಟದಲ್ಲಿ ಗೃಹಿಣಿಯರಿಗೆಂದೆ ಆಯೋಜಿಸುವ ಸೌಂದರ್ಯ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯ ಮೂಲಕ ಗೆಲುವಿನ ಕೀರಿಟ ಮುಡಿಗೇರಿಸಿಕೊಂಡ ಮೊದಲ ಕನ್ನಡತಿಯಾಗಿದ್ದಾರೆ. ಸಧ್ಯ ಈ ಸ್ಪರ್ಧೆಯ ಮೂಲಕ ಹಲವು ಟ್ಯಾಲೆಂಟೆಡ್ ಮಹಿಳೆಯರನ್ನ ಸಮಾಜಕ್ಕೆ ಪರಿಚಯಿಸುತ್ತಿದ್ದಾರೆ.
ವರದಿ :ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯುರೋ.
Click this button or press Ctrl+G to toggle between Kannada and English