ಜನವರಿ 3 ರಿಂದ ಮಂಗಳೂರಿನಿಂದ ದುಬೈ ಗೆ ಜೆಟ್‌ ಏರ್‌ವೇಸ್‌ ಹಾರಾಟ

12:25 PM, Thursday, January 3rd, 2013
Share
1 Star2 Stars3 Stars4 Stars5 Stars
(No Ratings Yet)
Loading...

Jet airwaysಮಂಗಳೂರು : ದೇಶದ ಎರಡನೇ ಅತಿ ದೊಡ್ಡ ವಿಮಾನ ಯಾನ ಸಂಸ್ಥೆಯಾದ ಮುಂಬಯಿ ಮೂಲದ ಜೆಟ್ ಏರ್‌ವೇಸ್, ಜನವರಿ 3ರಿಂದ ಮಂಗಳೂರು-ದುಬೈ ಮಧ್ಯೆ ಹಾರಾಟ ಆರಂಭಿಸಲಿದೆ. ಮೊದಲ ಬಾರಿಗೆ ಜೆಟ್ ಏರ್‌ವೇಸ್‌ನ ಅಂತಾರಾಷ್ಟ್ರೀಯ ವಿಮಾನ ಮಂಗಳೂರಿನಿಂದ ದುಬಾಯಿಗೆ ಹಾರಾಟ ನಡೆಸಲು ಕ್ಷಣಗಣನೆ ಆರಂಭಗೊಂಡಿದೆ. ದುಬೈ ಹಾಗೂ ಮಂಗಳೂರು ನಡುವೆ ನೇರ ವಿಮಾನ ಯಾನವನ್ನು ಆರಂಭಿಸುವ ನಿಟ್ಟಿನಲ್ಲಿ ಅನೇಕ ವರ್ಷಗಳಿಂದ ಪ್ರಯತ್ನ ನಡೆಯುತ್ತಿತ್ತು. ಆದರೆ ಇದರ ಹಿಂದೆ ಏರ್ ಇಂಡಿಯಾ ವಿಮಾನ ಯಾನದ ಲಾಬಿ ಕೆಲಸ ಮಾಡುತ್ತಿತ್ತು ಎಂದು ಹೇಳಲಾಗಿತ್ತು.

ಜೆಟ್‌ ಏರ್‌ವೇಸ್‌ನಿಂದ ಮಂಗಳೂರಿನ ಪ್ರಯಾಣಿಕರಿಗೆ ಸಾಕಷ್ಟು ಪ್ರಯೋಜನವಾಗಲಿದೆ ಕಾರಣ ಕೇವಲ ಒಂದೇ ವಿಮಾನ ಹಾರಾಟ ನಡೆಸುತ್ತಿದ್ದರಿಂದ ಸೀಮಿತ ಸೀಟು, ಅದರಲ್ಲೂ ಇಕ್ಕಟ್ಟಾದ ಸೀಟು, ತೃಪ್ತಿಕರವಲ್ಲದ ಆಹಾರ, ಕೆಲವೊಮ್ಮೆ ಪೈಲಟ್‌ಗಳ ಧರಣಿಯಿಂದ ವಿಮಾನ ರದ್ದು ಮೊದಲಾದ ಸಮಸ್ಯೆಗಳಿದ್ದವು. ಇದಕ್ಕೆ ಪರ್ಯಾಯ ವಿಮಾನ ಯಾನದ ಅಗತ್ಯತೆ ಇತ್ತು. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೇಂದ್ರ ವಿಮಾನ ಯಾನ ಸಚಿವಾಲಯ ಎರಡು ತಿಂಗಳ ಹಿಂದೆ ಅಧಿಕೃತವಾಗಿ ಅಂತಾರಾಷ್ಟ್ರೀಯ ಸ್ಥಾನಮಾನ ಘೋಷಿಸಿತ್ತು. ಇದರ ಲಾಭ ಎಂಬಂತೆ ಇದೀಗ ಜೆಟ್ ಏರ್‌ವೇಸ್ ಆಗಮನವಾಗಿದ್ದು, ಮುಂದೆ ಇನ್ನಷ್ಟು ಅಂತಾರಾಷ್ಟ್ರೀಯ ವಿಮಾನಗಳು ಆಗಮಿಸಲಿದ್ದು, ಇದರ ಪ್ರಯೋಜನ ವಿದೇಶಕ್ಕೆ ತೆರಳುವ ಪ್ರಯಾಣಿಕರಿಗೆ ಸಿಗಲಿದೆ.

ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಥಮ ಬಾರಿಗೆ ಖಾಸಗಿ ಜೆಟ್ ಏರ್‌ವೇಸ್‌ನಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಡೆಯಲಿದ್ದು, ನಿಲ್ದಾಣದಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ. ಇಷ್ಟರ ವರೆಗೆ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆ ತನಕ ಮಾತ್ರ ವಿಮಾನ ಹಾರಾಟ ವ್ಯವಸ್ಥೆ ಇದ್ದು, ಇದೀಗ ರಾತ್ರಿ 3.30 – 4.30ರ ಅವಧಿಯಲ್ಲೂ ವಿಮಾನ ಆಗಮನ, ನಿರ್ಗಮನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕರಾದ ಜೆ.ಟಿ. ರಾಧಾಕೃಷ್ಣ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English