ಶಿವ-ಶಕ್ತಿ ತತ್ವಗಳ ಸಹಯೋಗದ ವಿಕಾಸರೂಪ ಗಣಪ

12:30 PM, Tuesday, September 7th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Sridhara Raoಗಣೇಶನ ಹಬ್ಬ ರಾಷ್ಟ್ರೀಯ  ಐಕ್ಯತೆಯ ಸಂಕೇತವಾಗಿ, ಸ್ವಾತಂತ್ರö್ಯ ಚಳವಳಿಯ ಪಾಲನ ಶಕ್ತಿಯಾಗಿ ರಾಷ್ಟ್ರ  ಪ್ರೇಮದ ಚಿಲುಮೆಯಾಗಿದೆ. ಈ ಹಬ್ಬ ಭಾರತೀಯರಲ್ಲಿ ಐಕ್ಯ, ಉತ್ಸಾಹ, ಶಕ್ತಿ, ಸ್ವಾತಂತ್ರ್ಯದ ಕೆಚ್ಚನ್ನು ತುಂಬುತ್ತದೆ. ಎಲ್ಲರಿಗೂ ಪ್ರಿಯನಾದ ಗಣೇಶ ಇಂದಿಗೂ ಜನಜೀವನದ ಪ್ರೇರಕ ಶಕ್ತಿಯಾಗಿ ರಾಷ್ಟ್ರೀಯ ಏಕತೆಯ ಸಂಕೇತವಾಗಿ ಆರಾಧಿಸಲ್ಪಡುತ್ತಾನೆ.

ಗಣೇಶನು ಶಿವ ತತ್ವ ಶಕ್ತಿ ತತ್ವಗಳ ಸಹಯೋಗದ ವಿಕಾಸ ರೂಪ ಶಕ್ತಿ ಗಣಗಳೆಲ್ಲಕ್ಕೂ ಒಡೆಯ ಶಿವಶಕ್ತಿಯ ಆಶಯ, ಸಂಕಲ್ಪಗಳನ್ನು ಲೋಕದಲ್ಲಿ ವಿಸ್ತರಿಸಿದಾತ. ಗಣಪ ಸರ್ವಶಕ್ತ ಲೋಕ ಇಸ್ತರಣಾ ಕಾರ್ಯದ ಮೊದಲ ಹೆಜ್ಜೆೆಯೇ ಗಣೇಶನಾಗಿ ಸಾಕಾರಗೊಂಡಿದೆ. ಗಣಪ ಉಳಿದ ದೇವತೆಗಳಿಗಿಂತ ವಿಭಿನ್ನ ರುಪು ರೆಖೆಗಳು ವೈವಿದ್ಯ ಸರ್ವ ಪೂಜಿತನಾಗಿ ಸಕಲರಿಂದಲೂ ಆರಾಧಿಸಲ್ಪಡುತ್ತಾನೆ.

ಬ್ರಿಟಿಷದ ಪ್ರಭುತ್ವಕ್ಕೆ ತಲೆಬಾಗಿ ದಾಸರಾದ ಭಾರತಿಯ ಪ್ರಜೆಗಳಲ್ಲಿ ಪರಾ ತಂತ್ರ್ಯದ ದ ಅನುಭವವಾಗಿ ತೊಡಗಿತ್ತು. ಅನ್ಯಾಯಗಳು ಪರಾಕಾಷ್ಟೆಗೇರಿ ನಿರಂತರ ಶೋಷಣೆ ನಡೆಯುತ್ತಿತ್ತು. ಬಿಳಿಯರ ಸರಕರದ ವಿರುದ್ದ ಸೆಟೆದು ನಿಂತು ಹೋರಾಡುವ ಶಕ್ತಿ, ಎದೆಗಾರಿಕೆ ಒಬ್ಬರಲ್ಲಿಯೂ ಎರಲಿಲ್ಲ. ಅವರಿಗೆ ಡೊಗ್ಗು ಸಲಾಂ ಹೊಡೆದು ಬದುಕ್ ಬೇಕಾದ ಬ್ರಿಟಿಷರ ವಿರುದ್ದ ಧ್ವನಿಯೆತ್ತಲು ಉದಯಿಸಿದ.

ರವಿಯಂತೆ ಭಾರತೀಯ ರಾಷ್ಟ್ರೀಯ  ಜೀವನವದ ಕಟ್ಟಿದ ಮಹಾವಿಭೂತಿಗಳಲ್ಲಿ ಲೋಕ ಮಾನ್ಯ ಬಾಲಗಮಗಾಧರ ತಿಲಕರು ಒಬ್ಬರು. ಎಲ್ಲರನ್ನು ಒಂದೆಡೆಕಲೆ ಹಾಕುವುದಕ್ಕಾಗಿ ಸಾರ್ವಜನಿಕ ಗಣೇಶೋತ್ಸವ ಯೋಜನೆಯೊಣದನ್ನು ಹಾಕಿ ಕೊಂಡರು. ಮನೆ ಮನೆಗಳಲ್ಲಿ ನಡೆಯುತ್ತಿದ್ದ ಗಣಪತಿ ಪೂಜೆ ಸಾರ್ವಜನಿಕ ಉತ್ಸವವಾಗಿ ರೂಪು ಪಡೆಯಿತು. ಈ ಯೋಜನೆಯಿಂದ ಗಜಾನನೋತ್ಸವ ಸ್ವರೂಪವೇ ಬದಲಾಯಿತು. ಈ ಉತ್ಸವ ರಾಷ್ಟಿçಯ ಸ್ವರೂಪ ಪಡೆಯಿತು. ಓ ಉತ್ಸವದಿಮದ ಜನಜಾಗ್ರತಿ ರಾಷ್ಟೃಯ ಸ್ವಾತಂತ್ರಾö್ಯದ ಹೊಸಹುಮ್ಮಸ್ಸು ಉಕ್ಕೇರಿತು.

ಗಣಪ ವಿಗ್ರಹ ತಯಾರಿ ಒಂದು ವಿಶಿಷ್ಟ ಕಲೆ, ಕಲೆಗಾರ ತನ್ನ ಕಲಾಪ್ರಭೆಯನ್ನೆಲ್ಲಾ ಧಾರೆಯೆರೆದು ಏಕ ಮನಸ್ಸಿನಿಂದ ದ್ಯಾನಿಸಿ ಮೂರ್ತಿ ನಿರ್ಮಾಣಕ್ಕೆ ಪ್ರಾರಂಭಿಸುತ್ತಾನೆ. ತನ್ನ ಇಷ್ಟ ದೇವರ ಒಂದೊAದು ಅವಯವಗಳನ್ನು ತನ್ನ ಪ್ರಾಡಿಮೆಯಿಂದ ಪಳಪಳಿಸುವಂತೆ ಮಾಡಿ ಭಕ್ತ ಜನಕೋಟಿಯ ಎದುರು ತಮ್ಮ ಕಲಾಪ್ರದರ್ಶನವನ್ನು ತೆರೆದಿರುತ್ತಾನೆ ಶಿಲ್ಪಿ, ಶಿವ, ವಿಷ್ಣು ಮುಂತಾದ ದೇವತೆಗಳಿಗಿಂತಲು ಹೆಚ್ಚು ಜನಪ್ರಿಯನಾಗಿರುವ ಗಣಪನಿಗೆ ಪೂಜೆಯಲ್ಲಿ ಅಗ್ರಸ್ಥಾನ ಜನ ಜೀವನದ ಎಲ್ಲಾ ಶುಭ ಕಾರ್ಯಗಳಲ್ಲಿ ಮೊದಲ ಪೂಜೆ ಗಣೇಶನಿಗೆ ಸಲ್ಲುತ್ತದೆ. ವಿಕ್ಕ ದೇವತಾ ಕಾರ್ಯಗಳನ್ನು ಮಾಡುವಾಗಲು ನಿರ್ವಿಪ್ನತಾ ಸಿದ್ಧಿಗಾಗಿ ಲಂಭೋದರನಿಗೆ ಪೂಜೆ ಸಮರ್ಪಿತ.

ಸಿದ್ಧಿ ವಿನಾಯಕ, ಗಣೇಶ, ಗಜಮುಖ, ಏಕದಂತ ವಕ್ರತುಂಡ ಲಂಭೋದರ, ಹೇರಂಬ ಮುಷಿಕ ವಾಹನ ಮುಂತದ ಹೆಸರುಗಳಿಂದ ಆರಾಧಿಸಲ್ಪಡುವ ಗಣಪನ ಒಂದೊAದು ಹೆಸರು ಒಂದೊAದು ಗುಣಲಕ್ಷಣಗಳನ್ನು ಸಾರುತ್ತವೆ.

ಖೊಗ್ವೇದದ “ ಗಣಾನಂ ತ್ವಾ ಗಣಪತಿಂ ಹವಾ ಮಹೇ ಖುಕ್ಕು” ಇಂದಿಗೂ ಪಣಪತಿ ಪೂಜೆಯ ಮುಖ್ಯ ಮಂತ್ರ, ಮಹಾಭಾರತವನ್ನು ಬರೆಯಲು ವ್ಯಾಸರು ಗಣೇಶನನ್ನು ಲಿಪಿಕಾರನನ್ನಾಗಿ ಮಾಡಿಕೊಂಡು ಯಜುರ್ವೇವವ ತೈತ್ತಿರೀಯ ಸಂಹಿತೆಯಲ್ಲಿ : ನಮೋ ಗಣೇಭ್ಯೋ ಗಣಪತಿ ಭ್ಯಶ್ಚವೋ ನಮಃ” ಮಂತ್ರದಲ್ಲಿ ಅನೇಕ ಗಣಾಪತಿಗಳ ಉಲ್ಲೇಖವಿದೆ, ಕಿ.ಪೂ ಸುಮಾರು 4 ನೇ ಶತಮಾನದಷ್ಟು ಪ್ರಾಚೀನವಾದ ಮಾನವ ಗ್ರಹ ಸೂತ್ರದಲ್ಲಿ ವಿನಾಯಕ ಸಂಖ್ಯೆ 4 ಎಂದಿದೆ. ಇದರ ಹೆಸರು ಕ್ರಮವಾಗಿ ಸಾಲ ಕಟಂಕಟ, ಕೂಶ್ಮಾಂಡೆ, ರಾಜಪುತ್ರ ಉಸ್ಮಿತ ಮತ್ತು ದೇವಯಜನ ಎಂದಾಗಿದೆ. ಮುಂದೆ ಯಜ್ನವಲ್ಕ್ಮ  ಸ್ಮತಿಯಲ್ಲಿ ಈ ವಿನಾಯಕರ ತಾಯಿ ಅಮಿಂಕೆ ಎಂದೂ  ಇವರನ್ನೂ ತೃಪ್ತಿ ಪಡಿಸದೆ ಪೀಡೆ ಪರಿಹಾರವಾಗದೆಂದೂ ಹೇಳಿದೆ.

ಕ್ರಿಸ್ತ ಶಕಾರಂಭದಲ್ಲಿ ರಚಿತವಾದ ಭೋದಾಯನ ಗ್ರಹ್ಯ ಸೂತ್ರ. ಗೋಭಿಲ ಸ್ಮತಿಗಳಲ್ಲಿಯೂ ಸಾತವಾಹನ ಕಾಲದ ಕಾಲ ಕವಿ ರಚಿತ ಗಾಧಾ ಸಪ್ತ ಶತಿಯಲ್ಲಿಯೂ ಗಜಮುಖನ ಉಲ್ಲೇಖವಿದೆ. ಮುಂದೆ ಬರುವ ಕವಿಗಳಲ್ಲಿ ಮೊದಲಿಗರಾದ ಬಾಣ ಭಟ್ಟ, ಭವಭೂತಿಗಳು ಗಣಪತಿಯ ಸ್ತೋತ್ರ ಮಾಡಿದ್ದಾರೆ. 12ನೇ ಶತಮನ್ನದ ಕಾಶ್ಮೀರಿ ಕವಿ ಜಯರಧನ ಹರಿಚರಿತ ಚಿಂತಾಮಣಿಯಲ್ಲಿ ಗಣಪನ ಉಲ್ಲೇಖವಿದೆ. ಬ್ರಹ್ಮ ವೈವರ್ತ ಪುರಾಣದಲ್ಲಿ ಗಣೇಶನ ಜನ್ಮ ವ್ರತ್ತಂಶವಿದೆ. ಶಿಶುಪಾಲ ಕ್ರಿತಿಯಲ್ಲಿ ಮಾಷ ಕವಿ, ಬ್ರಹ್ಮ ವೈವರ್ತ ಪುರಣಾದಲ್ಲಿ ಗಣಪತಿಯನ್ನು ಉಲ್ಲೇಖಿಸಿದ್ದಾರೆ.

ಗಣಪನ ದಂತದ ಬಗ್ಗೆ ಶಮಂತಕೋ ಪಾಖ್ಯಾನದಲ್ಲಿ ವಿವರಿಸಲಾಗಿದೆ. ಭಾರತ ಮಾತ್ರವಲ್ಲ ಪ್ರಾಚೀನ ಭಾರತೀಯರು ನಮ್ಮ ಸಂಸ್ಕೃತಿ ಯನ್ನು ಹರಡಿದ ಸಾಗರೋತ್ತರ ದೇಶಗಳೆಲ್ಲ ಗಣಪತಿ ವಿಗ್ರಹಗಳು ಮತ್ತು ಪೂಜೆ ಜನಪ್ರಿಯವಾಗಿದೆ. ಜಾವ, ಕಾಂಬೋ, ಡಿಯಾ ಮೊದಲಾದ ಆಗ್ನೇಯ ಏಷ್ಯಾ ರಾಷ್ಟçಗಳಲ್ಲಿ ಹಿಂದು ಸಂಪ್ರದಾಯದ ಗಣಪತಿಯಿದ್ದರೆ ಬೀನ, ಜಪಾನ್, ಸಿಂಹಳಗಳಲ್ಲಿ ಬೌದ್ಧರ ಪ್ರಭಾವದಿಂದ ಮಾರ್ಪಟ್ಟ ರೂಪದಲ್ಲಿ ಗಣಪತಿ ವಿಗ್ರಹಗಳು ಕಾಣ ಸಿಗುತ್ತವೆ. ಈಗಂತೂ ಪ್ರಪಂಚದ ಹೆಚ್ಚು ಕಡಿಮೆ ಎಲ್ಲಾ ರಾಷ್ಟ್ರ ಗಳಲ್ಲಿ ಗಣಪತಿಯ ದೇವಾಲಯಗಳಿವೆ.

ಲೋಕ ವಿಸ್ತರಣಾ ಕಾರ್ಯದ ಮೊದಲ ಹೆಜ್ಜೆಯೇ ಗಣೇಶನಾಗಿ ಸಾಕಾರಗೊಂಡಿತೆನ್ನುವುದು ತತ್ವದ್ರಷ್ಟಿಗೆ ಕಂಡು ಬಂದ ನಿತ್ಯ ಸತ್ಯವಾಗಿರುತ್ತದೆ. ಸ್ರಷ್ಟಿ ಕರ್ತನಾಗಿ ಸರ್ವಶಕ್ತ. ಆತನ ಎಡೆ ತೊಡೆಯ ಮೇಲೆ ಶಕ್ತಿ ರೂಪಿ ಪತ್ನಿ ಆನೀನ, ಪಾಶ, ಅಂಕುಶ, ಬಾಣ, ಚಕ್ರ ಇತ್ಯಾದಿ ಮಾರಕಾಸ್ತçಗಳು ಆತನ ಆಯುಧಗಳು ಕಾಲ ದೇಶ ಸಂಸ್ಕçತಿಗಳು ಭಿನ್ನವಾದಂತೆ ಗಣೇಶನ ಪೂಜೆಯ ವಿಧಾನವು ಬದಲಾತ್ತಾ ನಡೆದಿದೆ, ಗಣೇಶನನ್ನು ತಾಂತ್ರಿಕ ದೇವತೆಯಗಿಯೂ ನಂಬಲಾಗಿದೆ 56789 ರೀತಿಯ ಗಣೇಶನ ಬಹುಮುಖಗಳು ಇವೆ ಎಂದರೆ ನಂಬುವುದೇ ಕಷ್ಟ. ಗಣೇಶ ಪರೋಪಕಾರಿ ದೇವತೆ ಎನ್ನುವುದಕ್ಕಿಂತ ಶಕ್ತಿ ದೇವತೆಯಾಗಿಯೇ ಮಾನ್ಯತೆ ಪಡೆದಿದ್ದಾನೆ. ಆದ್ದರಿಂದ ಎಲ್ಲಾರಿಗೂ ಶ್ರೀ ಗಣೇಶ ಎಲ್ಲರಿಗೂ ಸುಖ ಸಂಪತ್ತು ಸನ್ಮಾಂಗಲ ನೀಪಲ ಎಲ್ಲರೀಗೂ ಒಳ್ಳದಾಗಲಿ ಶ್ರೀ ದೇವರಲ್ಲಿ ಪ್ರಾರ್ಥಿಸೋಣ.

ಯನ್. ಶ್ರೀಧರ್ ರಾವ್, ನಿಟಿಲಾಪುರ ಗೋಳ್ತಮಜಲು ಗ್ರಾಮ, ಬಂಟ್ವಾಳ ತಾಲೂಕು, ಕಲ್ಲಡ್ಕ 574222

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English