ಅಮಾಯಕ ಹಿಂದುಗಳಿಗೆ ಆಮಿಷ ಒಡ್ಡಿ ಮತಾಂತರ ಸಹಿಸಲು ಸಾಧ್ಯವಿಲ್ಲ : ಕಾರ್ಕಳ ಬಿಜೆಪಿ

7:43 PM, Saturday, September 11th, 2021
Share
1 Star2 Stars3 Stars4 Stars5 Stars
(No Ratings Yet)
Loading...

Pragathi Centerಕಾರ್ಕಳ   : ಹಿಂದೂ ಧರ್ಮೀಯರನ್ನು ಗುರಿಯಾಗಿಸಿಕೊಂಡು ಷಡ್ಯಂತ್ರ ನಡೆಸಿ ಮತಾಂತರ ಮಾಡುವ ಆರೋಪಗಳು ಕಾರ್ಕಳದ ವಿವಿಧೆಡೆ ಕಂಡು ಬರುತ್ತಿದೆ, ಇತ್ತೀಚೆಗೆ ಮಿಷನರಿಗಳ ಕುಕೃತ್ಯ ಮಿತಿಮೀರಿದ್ದು ಪ್ರಾರ್ಥನೆ ಹೆಸರಿನಲ್ಲಿ ಮತಾಂತರ ನಡೆಸಿ ಹಿಂದೂಗಳ ಸಹನೆಯನ್ನ ಪರೀಕ್ಷೆಗೆ ಒಡ್ಡುತ್ತಿದ್ದಾರೆ.

ಒಂದೆಡೆಯಲ್ಲಿ ಮತಾಂತರ ಮತ್ತೊಂದು ಕಡೆ ಗೋಕಳ್ಳತನ ಹಿಂದುಗಳ ಸಹನೆಯ ಕಟ್ಟೆ ಒಡೆಯುವಂತೆ ಮಾಡುತ್ತಿದೆ ಇದು ತಕ್ಷಣ ನಿಲ್ಲಬೇಕು ಇಲ್ಲವಾದಲ್ಲಿ, ಇಂತಹ ಕೃತ್ಯಗಳು ಮುಂದೆ ಸಾಮಾಜಿಕ ಅಶಾಂತಿಗೆ ಕಾರಣವಾಗುವುದರಲ್ಲಿ ಸಂದೇಹವಿಲ್ಲ.

ಇಂತಹ ಕೃತ್ಯಗಳನ್ನು ಬಿಜೆಪಿ ತೀಕ್ಷ್ಣವಾಗಿ ಖಂಡಿಸುತ್ತದೆ. ಸಾಮಾಜಿಕ ಶಾಂತಿ ಕದಡುವ ಪ್ರಯತ್ನಗಳನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ. ಎಲ್ಲಾ ಧರ್ಮಗಳನ್ನು ಗೌರವಿಸುವುದರ ಜೊತೆಗೆ ಮಾತೃ ಧರ್ಮದ ರಕ್ಷಣೆಗೆ ಹಾಗೂ ಗೋಮಾತೆಯ ರಕ್ಷಣೆಗೆ ಬಿಜೆಪಿ ಪಕ್ಷ ಬದ್ಧವಾಗಿದೆ ಎಂದು ಕಾರ್ಕಳ ಬಿಜೆಪಿ ಅಧ್ಯಕ್ಷರಾದ ಮಹಾವೀರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English