ಜಗತ್ತಿನಲ್ಲಿ ಇಸ್ಲಾಂನ ಆಡಳಿತ ತರಲಿಕ್ಕಾಗಿಯೇ ‘ಹಲಾಲ್’ ಆರ್ಥಿಕತೆಯ ರಚನೆ !

11:21 PM, Monday, September 20th, 2021
Share
1 Star2 Stars3 Stars4 Stars5 Stars
(No Ratings Yet)
Loading...

Ramesh Sindheಮಂಗಳೂರು  : ‘ಹಲಾಲ್ ಸರ್ಟಿಫಿಕೆಶನ್'(ಪ್ರಮಾಣಪತ್ರ) ಮೂಲಕ ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಿಸಲಾಗುತ್ತಿದೆ. ಕಳೆದ 50 ವರ್ಷಗಳಲ್ಲಿ, ಇಸ್ಲಾಮಿಕ್ ದೇಶಗಳು 10 ಟ್ರಿಲಿಯನ್ ಅಮೇರಿಕಾ ಡಾಲರ್‌ನ ಆರ್ಥಿಕತೆಯನ್ನು ನಿರ್ಮಿಸಿವೆ. ಅದು ಭಾರತದ ಆರ್ಥಿಕತೆಯ ಮೂರು ಪಟ್ಟಿನಷ್ಟಿದೆ. ಇಸ್ಲಾಮಿಕ್ ಪ್ರಾಬಲ್ಯ ಮತ್ತು ಭಯೋತ್ಪಾದನೆಯನ್ನು ನಿರ್ಮಿಸಲು ಹಲಾಲ್‌ನ ಹಣವನ್ನು ಬಳಸಲಾಗುತ್ತಿದೆ, ಎಂದು ಜಗತ್ತಿನಾದ್ಯಂತದ ಅನೇಕ ಗುಪ್ತಚರ ಸಂಸ್ಥೆಗಳಿಂದ ಮಾಹಿತಿಯಿದೆ. ಹಲಾಲ್ ಇದು ‘ಮದರ ಆಫ್ ಜಿಹಾದ್’ ಆಗಿದೆ. ‘ಗ್ರಾಂಟ್ ಮುಕ್ತೀ ಆಫ್ ಬೊಸನಿಯಾ’ದ ಮೌಲಾನಾ ಮುಸ್ತಫಾ ಇವರು ಐ.ಎಸ್.ಐ.ಎಸ್. ಹಾಗೂ ತಾಲಿಬಾನ್ ಭಯೋತ್ಪಾದಕರಿಗೆ, ಮುಂದಿನಂತೆ ಹೇಳಿದ್ದಾರೆ, ‘ನೀವು ನಿಮ್ಮ ಸ್ವಂತ ಮುಸಲ್ಮಾನ ಸಹೋದರರ ರಕ್ತವನ್ನು ಏಕೆ ಚೆಲ್ಲುತ್ತಿದ್ದೀರಿ, ಹಲಾಲ್ ಆರ್ಥಿಕತೆಯ ಮೂಲಕ ನಾವು ಜಗತ್ತಿನಾದ್ಯಂತ ಇಸ್ಲಾಂನ ಆಡಳಿತವನ್ನು ತರಬಹುದು. ಒಮ್ಮೆ ಅವರು (ಮುಸ್ಲಿಮೇತರ ದೇಶಗಳು) ನಮ್ಮ ಗುಲಾಮರಾದರೆ, ನಾವು ಅವರ ಎಲ್ಲಾ ಸಂಪತ್ತನ್ನು ಲೂಟಿ ಮಾಡೋಣ. ಅನೇಕ ದೇಶಗಳಲ್ಲಿ, ಪಂಚತಾರಾ ಹೋಟೆಲ್‌ಗಳಲ್ಲಿ ಅಂತರರಾಷ್ಟ್ರೀಯ ಪರಿಷತ್ತುಗಳನ್ನು ನಡೆಸಿ ಆಯಾ ರಾಷ್ಟ್ರಗಳ ರಾಷ್ಟ್ರಪತಿ ಮತ್ತು ಪ್ರಧಾನಿಗಳನ್ನು ಆಮಂತ್ರಿಸಿ ನೀವು ಹಲಾಲ್ ಸರ್ಟಿಫಿಕೆಟ್ ತೆಗೆದುಕೊಂಡರೆ ಜಗತ್ತಿನ ಕಾಲು ಭಾಗವು ನಿಮ್ಮ ಉತ್ಪನ್ನಗಳನ್ನು ಖರೀದಿಸುತ್ತದೆ’. ಎಂದು ಹೇಳಿ ಅವರಿಗೆ ‘ಹಲಾಲ್ ಸರ್ಟಿಫಿಕೆಟ್’ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತದೆ. ಇದರಿಂದ ಜಗತ್ತಿನ ಮೇಲೆ ಇಸ್ಲಾಂನ ಅಧಿಕಾರ ತರುವುದು, ಇದಕ್ಕಾಗಿಯೇ ‘ಹಲಾಲ್ ಆರ್ಥಿಕತೆ’ಯನ್ನು ಸ್ಥಾಪಿಸಲಾಗಿದೆ, ಎಂದು ‘ಜಟ್ಕಾ ಸರ್ಟಿಫಿಕೆಶನ್ ಅಥಾರಟಿ’ಯ ಅಧ್ಯಕ್ಷ ಶ್ರೀ. ರವಿ ರಂಜನ ಸಿಂಗ್ ಹೇಳಿದರು. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ‘ಹಲಾಲ್ ಸರ್ಟಿಫಿಕೆಶನ್ : ಒಂದು ಆರ್ಥಿಕ ಜಿಹಾದ್’ ಎಂಬ ವಿಶೇಷ ‘ಆನ್‌ಲೈನ್’ ಸಂವಾದದಲ್ಲಿ ಮಾತನಾಡುತ್ತಿದ್ದರು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಇವರು ಮಾತನಾಡುತ್ತಾ, ಹಲಾಲ್ ಕೇವಲ ಮಾಂಸದಲ್ಲಿ ಮಾತ್ರವಲ್ಲ, ಅನೇಕ ಆಹಾರ ಪದಾರ್ಥಗಳು, ಸೌಂದರ್ಯವರ್ಧಕಗಳು ಮತ್ತು ನಿರ್ಮಾಣಕಾರ್ಯ ವ್ಯವಹಾರಗಳಲ್ಲಿಯೂ ಜಾರಿಗೊಳಿಸಿದೆ. ‘ಹಲ್ದಿರಾಮ್‌ನ ೫೦೦ ಉತ್ಪನ್ನಗಳು, ‘ಆಶೀರ್ವಾದ ಹಿಟ್ಟು, ‘ಅಮೂಲ್’ನ ಐಸ್‌ಕ್ರೀಮ್, ‘ಫಾರ್ಚೂನ್ ಆಯಿಲ್’ ಮತ್ತು ಇತರ ಹಲವು ಆಯುರ್ವೇದ ಔಷಧಗಳು ‘ಹಲಾಲ್ ಸರ್ಟಿಫೈಡ್’ ಆಗಿವೆ. ಭಾರತದ ಆಹಾರ ಮತ್ತು ಔಷಧ ಆಡಳಿತದ (ಎಫ್.ಡಿ.ಎ) ‘ಆಹಾರ ಸುರಕ್ಷತೆ ಮತ್ತು ಪ್ರಮಾಣೀಕರಣ ಪ್ರಾಧಿಕಾರ’ (ಎಫ್.ಎಸ್.ಎಸ್.ಐ.ಎ.) ಇದು ಅಧಿಕೃತ ಸರಕಾರಿ ಪ್ರಮಾಣಪತ್ರವಾಗಿರುವಾಗ ಈ ‘ಹಲಾಲ್ ಸರ್ಟಿಫಿಕೆಟ್’ ಏಕೆ ? ನಾವು ವರ್ಷವಿಡೀ ಆಂದೋಲನವನ್ನು ಮಾಡಿ 24 ಸಾವಿರ ಕೋಟಿ ರೂಪಾಯಿಯ ಮಾಂಸ ರಫ್ತು ಮಾಡುವ ಭಾರತ ಸರಕಾರದ ‘ಅಪೆಡಾ’ದ ನಿಯಮದಿಂದ ‘ಹಲಾಲ್ ಪ್ರಮಾಣೀಕೃತ ಮಾಂಸ’ ಎಂಬ ಶಬ್ದವನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ಅದೇ ರೀತಿ 40 ಸಾವಿರ ಕೋಟಿ ರೂಪಾಯಿಯ ಆರ್ಥಿಕತೆ ಇರುವ ಭಾರತ ಸರಕಾರದ ‘ಏರ್ ಇಂಡಿಯಾ’, ರೈಲ್ವೆಯ ‘ಐ.ಆರ್.ಸಿ.ಟಿ.ಸಿ.’ ಭಾರತೀಯ ಪ್ರವಾಸೋದ್ಯಮ ಮಂಡಳಿ ‘ಐ.ಟಿ.ಡಿ.ಸಿ.’ ಇವುಗಳಿಂದ ‘ಹಲಾಲ್ ಪ್ರಾಮಾಣಿಕೃತ’ ಉತ್ಪನ್ನಗಳನ್ನು ತೆಗೆದು ಹಾಕಲು ಹೋರಾಟ ಮಾಡಬೇಕಿದೆ. ‘ಹಲಾಲ್ ಉತ್ಪಾದನೆಗಳನ್ನು’ ಖರೀದಿಸಿ ನಮಗೆ ಇಸ್ಲಾಮಿಕ್ ಅರ್ಥವ್ಯವಸ್ಥೆಯನ್ನು ಚಾಲನೆ ಮಾಡಲಿಕ್ಕಿಲ್ಲ, ಬದಲಾಗಿ ಹಿಂದೂ ರಾಷ್ಟ್ರ ಸ್ಥಾಪಿಸಲು ಭಾರತೀಯ ಅರ್ಥವ್ಯವಸ್ಥೆಗೆ ಚಾಲನೆ ನೀಡಿ ‘ಹಲಾಲ್ ಅರ್ಥವ್ಯವಸ್ಥೆ’ ಮುಚ್ಚಿ ಬಿಡಬೇಕಾಗಿದೆ, ಎಂದೂ ಹೇಳಿದರು. ಈ ಸಮಯದಲ್ಲಿ, ‘ವಿವೇಕಾನಂದ ಕಾರ್ಯ ಸಮಿತಿ’ಯ ಅಧ್ಯಕ್ಷರಾದ ಶ್ರೀ. ನೀರಜ ಅತ್ರಿ ಇವರು ಮಾತನಾಡುತ್ತಾ, ಹಲಾಲ್ ಮತ್ತು ಹರಾಮ್ ಇದು ಇಸ್ಲಾಂ ಅನುಸಾರ ಯಾವುದು ಯೋಗ್ಯ ಮತ್ತು ಯಾವುದು ಅಯೋಗ್ಯ ಇದೆ ಎಂದು ಹೇಳುತ್ತದೆ. ಈ ಮಾಧ್ಯಮವು ಜನರನ್ನು ನಿಯಂತ್ರಿಸುವ ವ್ಯವಸ್ಥೆಯಾಗಿದ್ದು ಈ ಮೂಲಕ ಇಸ್ಲಾಂನ ಪ್ರಾಬಲ್ಯವನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು
ಹಿಂದೂ ಜನಜಾಗೃತಿ ಸಮಿತಿ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English