ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ-2021 ಪ್ರದಾನ

10:33 PM, Wednesday, September 22nd, 2021
Share
1 Star2 Stars3 Stars4 Stars5 Stars
(No Ratings Yet)
Loading...

venugopal  Award ಮುಂಬಯಿ : ಪತ್ರಕರ್ತತ್ವ ಜವಾಬ್ದಾರಿಯುತ ಸ್ಥಾನವಾಗಿದ್ದು, ಪತ್ರಕರ್ತರು ಸವಿಂಧಾನದ ಒಂದು ಶಕ್ತಿಯಾಗಿದ್ದಾರೆ. ಇದನ್ನು ವೃತ್ತಿಯೋ, ಪ್ರವೃತ್ತಿಯೋ ಆಗಿಸಿದ ಮುಂಬಯಿಯಲ್ಲಿನ ಕನ್ನಡಿಗ ಪತ್ರಕರ್ತರಲ್ಲಿ ಕಪಸಮ ಕನ್ನಡ ಮರಾಠಿಗರ ಸಾಮರಸ್ಯತ್ವದ ಬೆಸುಗೆಯನ್ನಾಗಿಸಿದೆ. ಸಂಘದ ಸೇವೆ ಶ್ಲಾಘನೀಯವಾದುದು. ಇವತ್ತು ಅವಿಷ್ಕೃತ ಆನ್‌ಲೈನ್ ಮಾಧ್ಯಮಗಳ ಪಾತ್ರ ಬಹಳಷ್ಟು ಮುಂಚೂಣಿಯಲ್ಲಿದ್ದರೂ ವೃತ್ತಪತ್ರಿಕೆಗಳು ತಮ್ಮ ಸ್ಥಾನವನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಂಡಿವೆ. ಇಂತಹ ಪತ್ರಕರ್ತರ ಪರಿವಾರದ ಸುರಕ್ಷ ಅತ್ಯವಶ್ಯಕವಾಗಿದೆ ಎಂದು ದಕ್ಷಿಣ-ಮಧ್ಯ ಮುಂಬಯಿ ಲೋಕಸಭಾ ಕ್ಷೇತ್ರದ ತಿಳಿಸಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇಂದಿಲ್ಲಿ ಭಾನುವಾರ ಬೆಳಿಗ್ಗೆ ಅಂಧೇರಿ ಪೂರ್ವದ ಸಾಲೀಟರಿ ಕಾರ್ಪೋರೆಟ್ ಪಾರ್ಕ್‌ಇದರ ಕ್ಲಬ್ ಹೌಸ್‌ನ ದಿ| ಶ್ರೀ ಆನಂದ ಕೆ.ಪೂಜಾರಿ ಪಾಲಡ್ಕ ಸಭಾಗೃಹದಲ್ಲಿನ ದಿ| ಶ್ರೀಮತಿ ಅಪ್ಪಿ ಕೃಷ್ಣ ಶೆಟ್ಟಿ ಕಂಬಿಹಳ್ಳಿ-ಚಿಕ್ಕಮಗಳೂರು ವೇದಿಕೆಯಲ್ಲಿ ಆಯೋಜಿಸಿದ್ದ ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ-೨೦೨೧ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಸಂಸದ ಶೆವ್ಹಾಲೆ ಮಾತನಾಡಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಅಜಂತಾ ಕ್ಯಾಟರರ್‍ಸ್ ಮುಂಬಯಿ ಇದರ ಪ್ರವರ್ತಕ ಜಯರಾಮ ಬಿ.ಶೆಟ್ಟಿ ಶ್ರೀ ಚಿತ್ತಾರಿ ಹಾಸ್ಪಿಟಲಿಟಿ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಸದರಾಮ ಎನ್.ಶೆಟ್ಟಿ, ಪ್ರಶಸ್ತಿ ಆಯ್ಕೆ ಸಮಿತಿ ಕಾರ್ಯಾಧ್ಯಕ್ಷೆ ಡಾ| ಸುನೀತಾ ಎಂ.ಶೆಟ್ಟಿ, ಕಪಸಮ ಉಪಾಧ್ಯಕ್ಷ ರಂಗ ಎಸ್.ಪೂಜಾರಿ ಉಪಸ್ಥಿತರಿದ್ದು ಕೇರಳ ರಾಜ್ಯದ ಕಾಸರಗೋಡು ಅಲ್ಲಿನ ಹಿರಿಯ ಕನ್ನಡಿಗ ಪತ್ರಕರ್ತ ಅಚ್ಯುತ ಚೇವಾರ್ ಇವರಿಗೆ ಶಾಲು ಹೊದಿಸಿ, ರೂಪಾಯಿ 25,000/- ನಗದು, ಪುರಸ್ಕಾರ ಫಲಕ, ಪ್ರಶಸ್ತಿಪತ್ರ, ಫಲಪುಷ್ಪವನ್ನಿತ್ತು ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.

ಜಯರಾಮ ಶೆಟ್ಟಿ ಮಾತನಾಡಿ ಪತ್ರಿಕೋದ್ಯಮ ಸಮಾಜಕ್ಕೆ ದಾರಿದೀಪವಾಗಿದೆ. ಕಪಸಮ ಸಂಘ ಮುಂಬಯಿ ಕನ್ನಡಿಗರ ಪತ್ರಕರ್ತರಿಗೆ ಶ್ರೀರಕ್ಷೆ ಆಗಿದೆ ಎಂದರು.

ಇದೊಂದು ಗ್ರಾಮೀಣ ಪ್ರದೇಶಕ್ಕೆ ಸಂದ ಪ್ರಶಸ್ತಿ. ಈ ಗೌರವವನ್ನು ಯೋಗ್ಯವಾಗಿ ಸ್ವೀಕರಿಸಿದ್ದೇನೆ.ಕೆ.ಟಿ ಗೋಪಾಲ್ ಗೌರವ ಅಂದರೆ ಅದು (ಕಾಸರಗೋಡು) ತವರೂರ ಗೌರವ ಅಂದೆನಿಸಿದ್ದೇನೆ ಎಂದ ಅಚ್ಯುತ ಚೇವಾರ್ ಪ್ರಶಸ್ತಿಗೆ ಉತ್ತರಿಸಿದರು.

ಪತ್ರಕರ್ತ ಅಂದರೆ ನಿರ್ಭೀತಿತನ. ಇದರ ಅರಿವು ನಮ್ಮ ಕಣ್ಣ ಮುಂದೆ ಬರಬೇಕು. ನಮಗೆ ಸಾಹಿತಿಗಳೆಂದು ಹೆಸರಿದ್ದು ಬರವಣಿ ಮಾಡಿದ್ದರೂ ಒಬ್ಬ ಪತ್ರಕರ್ತನಲ್ಲಿರುವ ನಿರ್ಭೀತಿ ಸಾಹಿತಿಗೆ ಇರುವುದಿಲ್ಲ ಭಯವಿಲ್ಲದ ವೃತ್ತಿ ಪತ್ರಕರ್ತತ್ವವಾಗಿದೆ. ಸಾಹಿತಿಗೆ ಅಂಜಿಕೆ, ದಾಕ್ಷಿಣ್ಯ ಇರುತ್ತದೆ ಆದರೆ ಪತ್ರಕರ್ತನಿಗಿಲ್ಲ. ಇದನ್ನೇ ಕೆ.ಟಿ ವೇಣುಗೋಪಾ ಲ್ ಸಿದ್ಧಿಸಿದ್ದರು ಎಂದು ಡಾ| ಸುನೀತಾ ಶೆಟ್ಟಿ ತಿಳಿಸಿದರು.

ಹೊರನಾಡ ಮತ್ತು ಗಡಿನಾಡ ಪತ್ರಕರ್ತರ ಶಕ್ತಿ ಪ್ರದರ್ಶನದ ಸಂಕೇತ ಈ ಕಾರ್ಯಕ್ರಮವಾಗಿದೆ. ನಾವೆಲ್ಲರೂ ಸಾಂಘಿಕಕವಾಗಿದ್ದರೆ ಸಂಘದ ಮೂಲಕ ಹಲವಾರು ಸೌಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದು. ಮುಂದೆಯೂ ಒಗ್ಗಟ್ಟಿನಿಂದ ಐಕ್ಯರಾಗಿ ಸಂಘಟನೆಯನ್ನು ಬಲಶಾಲಿಯಾಗಿಸೋಣ ಎಂದು ಅಧ್ಯಕ್ಷ ರೋನ್ಸ್ ಬಂಟ್ವಾಳ್ ತಿಳಿದರು.

ಈ ಶುಭಾವಸರದಲ್ಲಿ ಶಿವಾ’ಸ್ ಸಂಸ್ಥೆಯ ಡಾ| ಶಿವರಾಮ ಕೃಷ್ಣ ಭಂಡಾರಿ, ಬಂಟರ ಸಂಘ, ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅವಿನ್, ಮಾಜಿ ಅಧ್ಯಕ್ಷರುಗಳಾದ ಚಂದ್ರಶೇಖರ್ ಎಸ್.ಪೂಜಾರಿ, ನಿತ್ಯಾನಂದ ಡಿ.ಕೋಟ್ಯಾನ್, ಭಾರತ್ ಬ್ಯಾಂಕ್‌ನ ನಿರ್ದೇಶಕ ಸೂರ್ಯಕಾಂತ್ ಜಯ ಸುವರ್ಣ, ಎನ್‌ಸಿಪಿ ಪಕ್ಷದ ಮುಂಬಯಿ ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಲಕ್ಷ್ಮಣ ಸಿ.ಪೂಜಾರಿ ಚಿತ್ರಾಪು, ಯುವ ನೇತಾರ ನಿರಂಜನ್ ಎಲ್.ಪೂಜಾರಿ, ಸಮಾಜ ಸೇವಕ ರಮಾನಂದ್ ಸಾಲ್ಯಾನ್ ಅಳಿಯೂರು (ಮೂಡಬಿದ್ರೆ), ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಜಿಲ್ಲಾ ಸಮಿತಿ ಘಟಕದ ಅಧ್ಯಕ್ಷ ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ, ಪ್ರಧಾನ ಕಾರ್ಯದರ್ಶಿ ಕೆ.ಗಂಗಾಧರ ಯಾದವ್, ಕೋಶಾಕಾರಿ ಪುರುಷೋತ್ತಮ ಪೆರ್ಲ ಮತ್ತಿತರರು ಉಪಸ್ಥಿತರಿದ್ದರು

ಸಲಹಾ ಸಮಿತಿ ಸದಸ್ಯರಾದ ಸಿಎ| ಐ.ಆರ್ ಶೆಟ್ಟಿ, ಗ್ರೇಗೋರಿ ಡಿ’ಅಲ್ಮೇಡಾ, ಸುರೇಂದ್ರ ಎ.ಪೂಜಾರಿ, ಕಡಂದಲೆ ಸುರೇಶ್ ಎಸ್.ಭಂಡಾರಿ, ಪಂಡಿತ್ ನವೀನ್‌ಚಂದ್ರ ಆರ್.ಸನೀಲ್, ಸುಧಾಕರ್ ಉಚ್ಚಿಲ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ನಾಗರಾಜ್ ಕೆ.ದೇವಾಡಿಗ, ಅನಿತಾ ಪಿ.ಪೂಜಾರಿ ತಾಕೋಡೆ, ಅಶೋಕ ಆರ್.ದೇವಾಡಿಗ, ಜಯಂತ್ ಕೆ.ಸುವರ್ಣ, ವಿಶೇಷ ಆಮಂತ್ರಿತ ಸದಸ್ಯರುಗಳಾದ ಸಾ.ದಯಾ, ಗೋಪಾಲ್ ತ್ರಾಸಿ, ಸದಾನಂದ ಕೆ.ಸಫಲಿಗ ಶಿರ್ವಾ, ಕರುಣಾಕರ್ ವಿ.ಶೆಟ್ಟಿ ಸೇರಿದಂತೆ ಸಂಘದ ಸದಸ್ಯರನೇಕರು, ಕೆ.ಟಿ ವೇಣುಗೋಪಾಲ್ ಅಭಿಮಾನಿಗಳು ಉಪಸ್ಥಿತರಿದ್ದರು.

ಸವಿತಾ ಸುರೇಶ್ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಗೌ| ಪ್ರ| ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ಸ್ವಾಗತಿಸಿದರು. ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ ಪ್ರಸ್ತಾವನೆಗೈದರು. ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ್ ಪೂಜಾರಿ ನಿಡ್ಡೋಡಿ ಕಾರ್ಯಕ್ರಮ ನಿರ್ವಹಿಸಿದರು. ಡಾ| ದಿನೇಶ್ ಶೆಟ್ಟಿ ರೆಂಜಾಳ ಪುರಸ್ಕೃತರನ್ನು ಪರಿಚಯಿಸಿದರು. ಎ.ಆರ್.ಸುಬ್ಬಯ್ಯಕಟ್ಟೆ, ಅಭಿನಂದನಾ ನುಡಿಗಳನ್ನಾಡಿದರು. ಜೊತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ, ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ, ಜಯಂತ್ ಕೆ.ಸುವರ್ಣ ಅತಿಥಿಗಳನ್ನು ಪರಿಚಯಿಸಿದರು. ಗೌರವ ಕಾರ್ಯದರ್ಶಿ ರವೀಂದ್ರ ಆರ್.ಶೆಟ್ಟಿ ತಾಳಿಪಾಡಿ ವಂದಿಸಿದರು.

Dharmasthala-Deepothsava  

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English