ಬೆಂಗಳೂರು : ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿರುವ ನಡೆಯುತ್ತಿರುವ “ಅನಿಶ್ಚಿತತೆ” ಕಲಾಪ್ರದರ್ಶನವನ್ನು ಇಂದು ಮುಂಜಾನೆ ಉದ್ಘಾಟಿಸಿ ಕಲಾವಿದರೊಂದಿಗೆ ಅವರ ಕಲಾಕೃತಿಗಳನ್ನು ನೋಡಿದ್ದು, ಕೆಲಸಮಯ ಬೇರೆಯದೇ ಲೋಕದಲ್ಲಿ ಸಂಚರಿಸಿದ ಅನುಭವ ನೀಡಿತು.
ಕೊರೋನಾ ಸಂದರ್ಭದಲ್ಲಿ ಸಮಾಜದ ಪ್ರತಿಯೊಬ್ಬರಲ್ಲೂ ಉಂಟಾದ ಅನಿಶ್ಚಿತತೆ ಭಾವವನ್ನು, ಗ್ರಾಫಿಕ್ ಮುದ್ರಣ ಕಲೆಯ ಮೂಲಕ ಕರ್ನಾಟಕದ ವಿವಿಧ ಭಾಗಗಳ 75 ಕಲಾವಿದರುಗಳು ಅತಿ ಸುಂದರ ಹಾಗೂ ಮನಸ್ಸಿನ ಆಳದಲ್ಲಿ ನಮ್ಮನ್ನು ಚಿಂತನೆಗೆ ಒಳಪಡಿಸುವಂತಹ ಕಲಾಕೃತಿಗಳನ್ನು ರಚಿಸಿದ್ದರು.
ದೇಶದಲ್ಲೇ ದೊಡ್ಡಮಟ್ಟದ ಗ್ರಾಫಿಕ್ ಮುದ್ರಣ ಕಲಾ ಪ್ರದರ್ಶನ ನಮ್ಮ ಕರ್ನಾಟಕದ ಕಲಾವಿದರುಗಳಿಂದ ನಡೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.
ನಮ್ಮ ನಾಡು, ನುಡಿ, ಸಂಸ್ಕೃತಿಯ ಉಳಿವು ಹಾಗೂ ಅಭಿವೃದ್ಧಿಗಾಗಿ ಕಲಾವಿದರುಗಳು ಮಾಡುವ ಪ್ರತಿಯೊಂದು ಕೆಲಸಕ್ಕೂ ಕನ್ನಡ ಸಂಸ್ಕೃತಿ ಇಲಾಖೆಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಕಲಾವಿದರಿಗೆ ತಿಳಿಸಲಾಯಿತು.
Click this button or press Ctrl+G to toggle between Kannada and English