ಕಾರ್ಕಳ ಮೆಸ್ಕಾಂ ಉಪವಿಭಾಗಗಳಿಗೆ ರೂ. 6 ಕೋಟಿ ವಿಶೇಷ ಅನುದಾನ : ವಿ ಸುನಿಲ್ ಕುಮಾರ್

9:12 PM, Sunday, September 26th, 2021
Share
1 Star2 Stars3 Stars4 Stars5 Stars
(No Ratings Yet)
Loading...

Sunil Kumar V ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಲೊ ವೊಲ್ಟೇಜ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಕಾರ್ಕಳ ಕ್ಷೇತ್ರದ ಕಾರ್ಕಳ ಮತ್ತು ಹೆಬ್ರಿ ಮೆಸ್ಕಾಂ ಉಪ ವಿಭಾಗಗಳಿಗೆ ರೂ. 6.00 ಕೋಟಿ ವಿಶೇಷ ಅನುದಾನದಲ್ಲಿ ಹೆಚ್ಚುವರಿಯಾಗಿ ವಿದ್ಯುತ್ ಪರಿವರ್ತಕ (ಟಿಸಿ) ಗಳನ್ನು ಅಳವಡಿಸಲು ಕ್ರಮ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಲೊ ವೊಲ್ಟೇಜ್ ಹಾಗೂ ವಿದ್ಯುತ್ ಪರಿವರ್ತಕಗಳ ಸಮಸ್ಯೆ ಬಗೆಹರಿಸಲಾಗುವುದು ಎಂದು ಕ್ಷೇತ್ರದ ಶಾಸಕರು, ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ ಸುನಿಲ್ ಕುಮಾರ್ ರವರು ತಿಳಿಸಿರುತ್ತಾರೆ.

ಕಾರ್ಕಳ ಉಪವಿಭಾಗಕ್ಕೆ ಸಂಬAಧಿಸಿದAತೆ ರೂ. 5.00 ಕೋಟಿ ವೆಚ್ಚದಲ್ಲಿ 25 ಕೆ.ವಿ ಸಾಮರ್ಥ್ಯದ 33 ಪರಿವರ್ತಕ, 63 ಕೆ.ವಿ ಸಾಮರ್ಥ್ಯದ 70 ಒಟ್ಟು 103 ವಿದ್ಯುತ್ ಪರಿವರ್ತಕಗಳನ್ನು ಹೊಸದಾಗಿ ಅಳವಾಡಿಸಲಾಗುವುದು. ಕಾರ್ಕಳ ಉಪವಿಭಾಗದ ಬೈಲೂರು ಶಾಖೆಯ ಬೈಲೂರು – 02, ಎರ್ಲಪಾಡಿ -01, ಕೌಡೂರು – 05, ನೀರೆ – 01, ಪಳ್ಳಿ – 01 ಕಾರ್ಕಳ ಎ ಶಾಖೆಯ ತೆಳ್ಳಾರು – 14, ನಿಟ್ಟೆ – 02, ಕಾರ್ಕಳ ಬಿ ಶಾಖೆಯಲ್ಲಿ ಮಿಯ್ಯಾರು – 05, ಸಾಣೂರು – 02, ಮುಡಾರು -01, ರೆಂಜಾಳ – 02, ಇರ್ವತ್ತೂರು – 01, ನಿಟ್ಟೆ ಶಾಖೆಯ ನಿಟ್ಟೆ – 10, ಕಲ್ಯಾ – 05, ಬೋಳ – 03, ಕಾಂತಾವರ – 06, ಬಜಗೋಳಿ ಶಾಖೆಯ ನಲ್ಲೂರು – 07, ಮುಡಾರು – 04, ಮಾಳ – 04, ಈದು -04, ನೂರಾಳ್‌ಬೆಟ್ಟು – 01, ಬೆಳ್ಮಣ್ ಶಾಖೆಯ ಮುಂಡ್ಕೂರು – 07, ಬೆಳ್ಮಣ್ – 04, ಮುಲ್ಲಡ್ಕ – 02, ಸೂಡ – 06, ನಂದಳಿಕೆ – 02, ಇನ್ನಾ – 01 ಕಡೆಗಳಲ್ಲಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.

ಹೆಬ್ರಿ ಉಪವಿಭಾಗಕ್ಕೆ ಸಂಬAಧಿಸಿದAತೆ ರೂ. 1.00 ಕೊಟಿ ವೆಚ್ಚದಲ್ಲಿ 25 ಕೆ.ವಿ ಸಾಮರ್ಥ್ಯದ 07 ಪರಿವರ್ತಕ, 63 ಕೆ.ವಿ ಸಾಮರ್ಥ್ಯದ 19 ಒಟ್ಟು 26 ವಿದ್ಯುತ್ ಪರಿವರ್ತಕಗಳನ್ನು ಹೊಸದಾಗಿ ಅಳವಾಡಿಸಲಾಗುವುದು. ಹೆಬ್ರಿ ಉಪ ವಿಭಾಗದ ಹೆಬ್ರಿ ಶಾಖೆಯ ನಾಡ್ಪಾಲು – 03, ಮುದ್ರಾಡಿ – 04, ಹೆಬ್ರಿ – 03, ಚಾರಾ – 03, ಶಿವಪುರ – 03 ಮತ್ತು ಅಜೆಕಾರು ಶಾಖೆಯ ಮರ್ಣೆ – 05, ಕಡ್ತಲ – 03, ಶಿರ್ಲಾಲು – 01, ವರಂಗ – 01 ಕಡೆಗಳಲ್ಲಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಕಳ ಶಾಸಕರ ಕಛೇರಿ ಪ್ರಕಟನೆಯಲ್ಲಿ ತಿಳಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English