ಮಂಗಳೂರು: ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೊಕ್ಕಪಟ್ನ- ಬೋಳೂರಿನ ಸುಲ್ತಾನ್ ಬತ್ತೇರಿಯಿಂದ ಅಮೃತಾನಂದಮಯಿ ಆಶ್ರಮದ ಮೂಲಕವಾಗಿ ಕಂಕನಾಡಿ ರೈಲ್ವೇ ಸ್ಟೇಷನ್ ವರೆಗೆ ಮತ್ತು ಅಲ್ಲಿಂದ ವಾಪಸು ಬೋಳೂರು ಸುಲ್ತಾನ್ ಬತ್ತೇರಿ – ಬೊಕ್ಕಪಟ್ನದ ವರೆಗೆ ಸರಕಾರಿ ಸಿಟಿ ಬಸ್ ಸೇವೆಯನ್ನು ಹೊಸದಾಗಿ ದಿನಾಂಕ 27.9.2021 ರಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಡಿ.ವೇದವ್ಯಾಸ ಕಾಮತ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಸ್ಥಳೀಯ ಸಾರ್ವಜನಿಕರು ಬಹಳ ಕಾಲದಿಂದಲೂ ಇಲ್ಲಿ ಸರಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆಯನ್ನು ಸಲ್ಲಿಸುತ್ತಿದ್ದರು. ಇಲ್ಲಿನ ಜನರ ಭಾವನೆಗಳಿಗನುಗುಣವಾಗಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಮಂಗಳೂರು ಭೇಟಿಯ ಸಂದರ್ಭದಲ್ಲಿ ಅಮ್ಮನವರು ಇಲ್ಲಿ ಸಾರಿಗೆ ಸೌಲಭ್ಯ ಅಭಿವೃದ್ಧಿ ಮಾಡಬೇಕಾಗಿ ತಿಳಿಸಿದ್ದರು.ಅಮ್ಮನವರ ಸಂಕಲ್ಪದಂತೆ ಇಂದು ಅವರ 68 ನೆಯ ಜನ್ಮದಿನಾಚರಣೆಯಂದು ಈ ಸೇವೆ ಆರಂಭಗೊಳ್ಳುತ್ತಿರುವುದು ವಿಶೇಷ. ಸ್ಥಳೀಯ ಜನರು ಬಡ,ಮಧ್ಯಮ ವರ್ಗದವರಾಗಿದ್ದು ಅವರಿಗೆ ಈ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಪ್ರಯೋಜನಕಾರಿ ಎನಿಸಲಿದೆ.ಕಂಕನಾಡಿ ರೈಲು ನಿಲ್ದಾಣ ಮೂಲಕ ಆಗಮಿಸುವ ಪ್ರಯಾಣಿಕರಿಗೆ ಇದು ಅನುಕೂಲಕರ.
ಇಲ್ಲಿನ ರಸ್ತೆ ಗಳನ್ನು ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತಿಸಲಾಗುತ್ತದೆ ಎಂದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷರಾದ ಡಾ.ವಸಂತ ಕುಮಾರ್ ಪೆರ್ಲ ಪ್ರಾಸ್ತಾವಿಕ ನುಡಿಗಳೊಂದಿಗೆ ಸರಕಾರಿ ಬಸ್ ಚಾಲನೆ ಗೊಂಡರೆ ಸಾರ್ವಜನಿಕರಿಗೆ, ಬ್ರಹ್ಮಸ್ಥಾನ ಕ್ಕೆ ಆಗಮಿಸುವ ಭಕ್ತರಿಗೆ ಮತ್ತು ನದೀಯಾನ ಹಾಗೂ ಬೋಟ್’ಹೌಸ್’ಗಳ ಮೂಲಕ ಪ್ರವಾಸೋದ್ಯಮಕ್ಕೆ ಉಪಯುಕ್ತವೆನಿಸಲಿದೆ ಎಂದರು. ಸ್ಟ್ರೀಟ್ ಫೆಸ್ಟಿವಲ್ ಮೂಲಕ ಸಾರ್ವಜನಿಕರಿಗೂ ಉಪಯೋಗವಾಗಲಿದೆ ಎಂದರು.
ಶ್ರೀ ಅರುಣ ಎಸ್.ಎನ್., ವಿಭಾಗೀಯ ನಿಯಂತ್ರಣಾಧಿಕಾರಿ, ಕೆ ಎಸ್ ಆರ್ ಟಿ ಸಿ, ಮಂಗಳೂರು ವಿಭಾಗ ಇವರು ಸ್ವಾಗತಿದರು. ಶ್ರೀ ಕೃಷ್ಣ ಶೆಟ್ಟಿ ವಂದಿಸಿದರು. ಡಾ.ದೇವದಾಸ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಡಾ.ಜೀವರಾಜ್ ಸೊರಕೆ, ಆಡಳಿತ ನಿರ್ದೇಶಕರು. ಎಸ್.ಸಿ.ಎಸ್ ಆಸ್ಪತ್ರೆ , ಮಂಗಳೂರು, ಮಾಜಿ ಮೇಯರ್ ಶ್ರೀ ದಿವಾಕರ್, ಸ್ಥಳೀಯ ಕಾರ್ಪೋರೇಟರ್ ಶ್ರೀ ಜಗದೀಶ್ ಶೆಟ್ಟಿ, ಮಂಗಳೂರು,ಶ್ರೀ ಪ್ರಸಾದ್ ರಾಜ್ ಕಾಂಚನ್,ಸುರೇಶ್ ಅಮೀನ್,ಶ್ರೀ ಮುರಳೀಧರ್ ಶೆಟ್ಟಿ, ಶ್ರೀ ಪಂಕಜ್ ವಸಾನಿ, ಆರ್.ಟಿ.ಓ ಶ್ರೀ ವರ್ಣೇಕರ್ ಬೋಳೂರು ಮೊಗವೀರ ಸಭಾದ ಪ್ರತಿನಿಧಿಗಳು, ಶ್ರೀ ರಾಹುಲ್ ಶೆಟ್ಟಿ, ಶ್ರೀ ಯೋಗೀಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು
Click this button or press Ctrl+G to toggle between Kannada and English