ನಮಗೆ ಬಜರಂಗದಳ ಅಂದ್ರೆ ರಕ್ಷಣೆ ಕೊಡುವ ದೇವರುಗಳು : ಚೈತ್ರಾ ಕುಂದಾಪುರ

12:17 AM, Wednesday, October 6th, 2021
Share
1 Star2 Stars3 Stars4 Stars5 Stars
(No Ratings Yet)
Loading...

Surathkal-DurgaVahiniಮಂಗಳೂರು : ಇಪ್ಪತ್ತು ಪರ್ಸೆಂಟ್ ಇರುವ ನೀವೇ ಇಷ್ಟು ಹಾರಾಡಿದ್ರೆ ಎಪ್ಪತ್ತು ಪರ್ಸೆಂಟ್ ಇರುವ ನಾವೆಷ್ಟು ಹಾರಡಬೇಡ, ಮರ್ಯಾದೆಯಿಂದ ಲವ್‌ ಜಿಹಾದ್‌ ಬಿಟ್ರೆ ನೀವು ಬದುಕಿಕೊಳ್ಳುತ್ತೀರಿ ಇಲ್ಲದಿದ್ದರೆ ಪ್ರತಿ ಮನೆಯ ಮುಸಲ್ಮಾನ ಹೆಣ್ಣು ಮಕ್ಕಳ ಹಣೆಗೆ ಕುಂಕುಮ ಇಟ್ಟು ಕರ್ಕೊಂಡು ಬರುತ್ತೇವೆ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.

ಸುರತ್ಕಲ್ ನಲ್ಲಿ  ಮಂಗಳವಾರ  ಬಜರಂಗ ದಳ, ದುರ್ಗಾ ವಾಹಿನಿಯಿಂದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಮ್ಮ ಊರಿನ ಆಶಾರನ್ನು ಆಯೇಶಾ ಮಾಡಿದಿರಿ, ತಾರಾರನ್ನು ತಮನ್ನಾ ಮಾಡಿದಿರಿ ಇನ್ನು ಸಹಿಸಿಕೊಂಡು ಇರೋಕೆ ಸಾಧ್ಯವಿಲ್ಲ  ಇದು ಕೊನೆಯ ಎಚ್ಚರಿಕೆ ಎಂದು ಹೇಳಿದರು.

ಎಲ್ಲಾ ಕಡೆ ಧರ್ಮಕ್ಕೋಸ್ಕರ ಬದುಕೋದು ಹೇಗೆ ಎಂದು ಕಲಿಯಬಹುದು. ಧರ್ಮಕ್ಕೋಸ್ಕರ ಸಾಯೋದು ಹೇಗೆ ಎಂದು ಕಲಿಸೋ ಊರಿದ್ರೆ ಅದು ಸುರತ್ಕಲ್‌. ಕೆಲವರ ಪಾಲಿಗೆ ಬಜರಂಗದಳ ಅಂದ್ರೆ ಗೂಂಡಾಗಳು, ಕೋಮುವಾದಿಗಳು. ನಮಗೆ ಬಜರಂಗದಳ ಅಂದ್ರೆ ರಕ್ಷಣೆ ಕೊಡುವ ದೇವರುಗಳು ಎಂದು ಹೇಳಿದರು.

ನಮ್ಮ ಮನೆಯ ಹೆಣ್ಣು ಕಾಪಾಡಿಕೊಳ್ಳಲು ರೌಡಿಸಂ ಮಾಡಬೇಕು ಅಂತಿದ್ರೆ ನಾವು ಅದಕ್ಕೂ ಸಿದ್ದ. ನಮ್ಮ ಮನೆಯಲ್ಲಿ ಹಾಲು ಕರೆಯುವ ದನ ನಾವು ಕಾಪಾಡಿಕೊಳ್ಳಬೇಕು ಅಂತದ್ರೆ ನೀವು ದನ ಕದ್ದುಕೊಂಡು ಹೋಗುವಾಗ ತಲವಾರು ತೋರಿಸ್ತೀರಾ ಅಂದರೆ ನಾವು ಧರ್ಮ ರಕ್ಷಣೆಗೆ ನಾವು ತಲವಾರು ಹಿಡಿಯೋದನ್ನು ಕೋಟಿ ಚೆನ್ನಯ್ಯರಿಂದ ಕಲಿತಿದ್ದೇವೆ. ಇದು ಕೊನೆಯ ಎಚ್ಚರಿಕೆ, ನೋಡುವಷ್ಟು ನೋಡಿದ್ದೇವೆ. ನಮಗೂ ಮತಾಂತರ ಮಾಡೋದು ಗೊತ್ತು. ಮರ್ಯಾದೆಯಿಂದ ಲವ್‌ ಜಿಹಾದ್‌ ಬಿಟ್ರೆ ನೀವು ಬದುಕಿಕೊಳ್ಳುತ್ತೀರಿ.ಇಲ್ಲದಿದ್ದರೆ ಎರಡೇ ದಿನ ಸಾಕು ಬಜರಂಗದಳ ಕಾರ್ಯಕರ್ತರು ಮನಸು ಮಾಡಿದರೆ ಮುಸಲ್ಮಾನರ ಮನೆಯಲ್ಲಿ ಒಂದು ಬುರ್ಖಾನೂ ಕಾಣೋದಿಲ್ಲ. ಪ್ರತಿ ಮನೆಯ ಮುಸಲ್ಮಾನ ಹೆಣ್ಣು ಮಕ್ಕಳ ಹಣೆಗೆ ಕುಂಕುಮ ಇಟ್ಟು ಕರ್ಕೊಂಡು ಬರುತ್ತೇವೆ ಎಂದರು.

Surathkal-DurgaVahiniಎಲ್ಲೋ ಒಂದು ಕಡೆ ಬಜರಂಗದಳ ಕಾರ್ಯಕರ್ತರು ಅಡ್ಡ ಹಾಕಿದ್ದಕ್ಕೆ ತಾಲಿಬಾನ್‌ ಸರ್ಕಾರ ಅಂತೀರಾ? ನಮಗೆ ಗಾಂಜಾ ಡ್ರಗ್ಸ್‌, ವೆಪನ್‌ ಸೇಲ್‌ ಮಾಡೋದು ಗೊತ್ತಿಲ್ಲ ಎಂದರು.

ವಿಹೆಚ್‌ಪಿ ಮುಖಂಡ ಶರಣ್‌ ಪಂಪ್‌ವೆಲ್‌ ಮಾತನಾಡಿ, ಡ್ರಗ್ಸ್ ಮತ್ತು ಲವ್ ಜಿಹಾದ್, ಧಾರ್ಮಿಕ ಧರ್ಮಾಂಧರ ವಿರುದ್ಧ ನಮ್ಮ ಸಂಘಟನೆಗಳು ಹೋರಾಡುತ್ತವೆ.ವಾಹನಗಳನ್ನು ಅಡ್ಡಗಟ್ಟಿದ ನಂತರ ನಾವು ಎಂದಿಗೂ ನೈತಿಕ ಪೊಲೀಸ್ ಗಿರಿ ಅಥವಾ ಜನರ ಮೇಲೆ ದಾಳಿ ನಡೆಸಲಿಲ್ಲ. ಡ್ರಗ್ಸ್ ಹಾಗೂ ಲವ್ ಜಿಹಾದ್ ಅನ್ನು ಕರಾವಳಿ ಕರ್ನಾಟಕದಿಂದ ದೂರವಿಡಲಾಗಿದೆ” ಎಂದರು.

ಭಜರಂಗದಳ ವಿಭಾಗೀಯ ಸಂಚಾಲಕ ಭುಜಂಗ ಕುಲಾಲ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಗೋಪಾಲ್, ದುರ್ಗಾವಾಹಿನಿ ಜಿಲ್ಲಾ ಸಂಚಾಲಕಿ ಶ್ವೇತಾ, ಮತ್ತು ವಿಶ್ವ ಹಿಂದೂ ಪರಿಷತ್ ಸುರತ್ಕಲ್ ಘಟಕದ ಕಾರ್ಯದರ್ಶಿ ಜಯರಾಮ ಆಚಾರ್ಯ ಉಪಸ್ಥಿತರಿದ್ದರು.

Surathkal-DurgaVahini

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English