ಪೊಳಲಿ, ಕಟೀಲು, ಕುತ್ತಾರು ಕೊರಗಜ್ಜ ದೈವದ ಆದಿಕ್ಷೇತ್ರಕ್ಕೆ ಭೇಟಿ ನೀಡಿದ ನಟಿ ರಕ್ಷಿತಾ ಪ್ರೇಮ್ ಮತ್ತು ತಂಡ

9:49 PM, Wednesday, October 6th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Rakshitha-Kuttaruಮಂಗಳೂರು : ಝೀ ಕನ್ನಡ ವಾಹಿನಿಯಲ್ಲಿ ಕಾಮಿಡಿ ಕಿಲಾಡಿ, ಡಾನ್ಸ್ ಕರ್ನಾಟಕ ರಿಯಾಲಿಟಿ ಶೋ ಜಡ್ಜ್ ಕನ್ನಡ ಚಿತ್ರರಂಗದ ಖ್ಯಾತ ನಟಿ ರಕ್ಷಿತಾ ಪ್ರೇಮ್ ಹಾಗೂ ಡಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಕೊರಿಯೋಗ್ರಾಫರ್ ರಾಹುಲ್ ಮತ್ತು ಪ್ರಜ್ವಲ್ ಪೊಳಲಿ ಶ್ರೀ ರಾಜರಾಜೇಶ್ವರಿ ಮತ್ತು ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ ದರ್ಶನ ನಡೆಸಿ ಇಂದು ಕುತ್ತಾರು ಕೊರಗಜ್ಜನ ಆದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಡಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಕೊರಿಯೋಗ್ರಾಫರ್ ರಾಹುಲ್ ಅವರ ಹರಕೆ ತೀರಿಸುವುದಕ್ಕೋಸ್ಕರ ನಟಿ ರಕ್ಷಿತಾ ಪ್ರೇಮ್ ಜೊತೆ ಕಾರಣಿಕ ಸ್ಥಳ ಕುತ್ತಾರು ಕೊರಗಜ್ಜ ದೈವದ ಆದಿಕ್ಷೇತ್ರಕ್ಕೆ ಆಗಮಿಸಿ ಬೆಳ್ಳಿ ದೀಪ ಮತ್ತು ಬೆಳ್ಳಿಯ ಘಂಟೆಯನ್ನ ಹರಕೆಯಾಗಿ ಸಲ್ಲಿಸಿದ್ದಾರೆ.

ಬುಧವಾರ ಮಧ್ಯಾಹ್ನ ಮಂಗಳೂರು ಹೊರವಲಯದ ಕುತ್ತಾರು ಸ್ವಾಮಿ ಕೊರಗಜ್ಜ ದೈವದ ಆದಿ ಕ್ಷೇತ್ರಕ್ಕೆ ಭೇಟಿ ನೀಡಿ ರಾಹುಲ್ ಹರಕೆ ಸಲ್ಲಿಸಿದ್ದಾರೆ.

ಕೊರಗಜ್ಜ ದೈವ ವನ್ನು ನಂಬಿ ಇಷ್ಟಾರ್ಥ ಈಡೆರಿದಕ್ಕೆ ರಾಹುಲ್ ದೀಪ, ಘಂಟೆಯನ್ನ ಹರಕೆ ನೀಡುವುದಾಗಿ ಪ್ರಾರ್ಥಿಸಿದ್ದರು ಎನ್ನಲಾಗಿದೆ. ಆಶಯ ಈಡೇರುತ್ತಿದ್ದಂತೆ ಅವರು ಕುತ್ತಾರಿನ ಕೊರಗಜ್ಜನ ಆದಿ ಕ್ಷೇತ್ರಕ್ಕೆ ಬಂದು ಹರಕೆ ಸಲ್ಲಿಸಿದ್ದಾರೆ.

ಅವರು ಪೊಳಲಿ ಶ್ರೀ ರಾಜರಾಜೇಶ್ವರಿ ಮತ್ತು ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ ದರ್ಶನ ನಡೆಸಿ ಇಂದು ಕುತ್ತಾರು ಕೊರಗಜ್ಜನ ಆದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಸಂಧರ್ಭ ರಕ್ಷಿತಾ ಪ್ರೇಮ್ ಜೊತೆ ಕುತ್ತಾರಿನ ಸ್ಥಳೀಯ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿದ್ದಾರೆ.

ಕೋಸ್ಟಲ್ ವುಡ್ ಖಳ ನಟ ಕಿಶೋರ್ ಡಿ.ಕೆ, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಕಲಾವಿದರಾದ ಧೀರಜ್ ನೀರುಮಾರ್ಗ, ಸೂರಜ್ ಪಾಂಡೇಶ್ವರ, ಮೊದಲಾದವರು ಜೊತೆಗಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English