ಮಂಗಳೂರು : ದೇಶಕ್ಕೆ ಮೊಟ್ಟಮೊದಲ ವಿಶ್ವಕಪ್ ತಂದುಕೊಟ್ಟ ಕನ್ನಡ ನಾಡಿನ ಹೆಮ್ಮೆಯ ಕಬಡಿ ಪಟು ಮಮತಾ ಪೂಜಾರಿ ಜನವರಿ 23 ರಂದು ಹಸೆಮಣೆ ಏರಲಿದ್ದಾರೆ. ಉಡುಪಿಯ ಖಾಸಗಿ ಹೋಟೆಲ್ ವೊಂದರಲ್ಲಿ ನಡೆಯಲಿರುವ ವಿವಾಹ ಸಮಾರಂಭದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮೂಲತಃ ಉಡುಪಿಯ ಉದ್ಯಾವರದವರಾದ ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಅಭಿಷೇಕ್ ಕೋಟ್ಯಾನ್‌ರನ್ನು ಮಮತಾ ವರಿಸಲಿದ್ದಾರೆ.
ತೀರಾ ಹತ್ತಿರ ಸಂಬಂಧಿಗಳ ಉಪಸ್ಥಿತಿಯಲ್ಲಿ ಅಕ್ಟೋಬರ್ 9 ರಂದು ಕಾರ್ಕಾಳದ ಅಜೆಕಾರು ಬಳಿಯಿರುವ ಹೆರ್ಮುಂಡೆಯ ಮಮತಾರವರ ಮನೆಯಲ್ಲಿ ಕುಟುಂಬಿಕರ ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ನಿಶ್ಚಿತಾರ್ಥ ನೆರವೇರಿತ್ತು. ಕಾರ್ಕಳ ಹೆರ್ಮುಂಡೆ ಗ್ರಾಮದ ಭೋಜ ಪೂಜಾರಿ ಮತ್ತು ಕಿಟ್ಟಿ ಪೂಜಾರಿಯ ಪುತ್ರಿ ಮಮತಾ ಬಾಲ್ಯದಿಂದಲೇ ತನ್ನ ವಿದ್ಯಾರ್ಥಿ ಜೀವನ, ಕ್ರೀಡಾ ಬದುಕನ್ನು ಕಟ್ಟಿದವರು. ಪ್ರಸ್ತುತ ಭಾರತೀಯ ರೈಲ್ವೆ ಯಲ್ಲಿ ಉದ್ಯೋಗ ಮಾಡುತ್ತಿರುವ ಮಮತಾ ವಿವಾಹ ಸಮಾರಂಭಕ್ಕಿಂತ ಒಂದು ವಾರ ಮುಂಚೆ ಬಂದು ವಿವಾಹ ಸಮಾರಂಭದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
Click this button or press Ctrl+G to toggle between Kannada and English