ಮಂಗಳೂರು : ಬಂಟ್ವಾಳ ತಾಲೂಕಿನ ಪ್ರಸಿದ್ಧ ಇರಾ ಶ್ರೀ ಕುಂಡಾವು ಸೋಮನಾಥೇಶ್ವರ ದೇವಸ್ಥಾನಕ್ಕೆ ನಾಗ ಬನದ ಪಕ್ಕದ ಹುತ್ತವೊಂದರಲ್ಲಿ ಕಳ್ಳರು ನಿಧಿಗಾಗಿ ಭೂಮಿಯನ್ನು ಸುಮಾರು ಹತ್ತು ಅಡಿ ಆಗೆದಿದ್ದಾರೆ.
ನಾಗಬನದ ಆಸುಪಾಸಿನಲ್ಲಿ ಕಂಬಳ ಗದ್ದೆ ಎಲ್ಲ ಧಾರ್ಮಿಕ ನೆಲೆಗಟ್ಟಿನಲ್ಲಿ ಕಾರಣಿಕ ಬೀರುತ್ತಿರುವುದರಿಂದ ಅಲ್ಲೆಲ್ಲ ಚಿನ್ನ ವಜ್ರಗಳಿರುವ ನಿಧಿ ಇರುತ್ತದೆ, ನಾಗ ಕಾವಲು ಕಾಯುತ್ತಾನೆ ಎಂಬ ಪ್ರತೀತಿ ಇದ್ದು, ನಿಧಿ ಆಸೆಯಿಂದ ಕಳ್ಳರು ಭೂಮಿ ಅಗೆಯುವ ಪ್ರಕರಣ ಆಗಾಗ್ಗೆ ಕೇಳಿಬರುತ್ತಿದೆ.
ನಿಧಿಗಾಗಿ ಕಳ್ಳರು ಪುರಾತನ ಹುತ್ತವೊಂದನ್ನು ಶನಿವಾರ ವಾರ ರಾತ್ರಿ ಅಗೆದಿರುವ ಘಟನೆ ನಡೆದಿದೆ.
ದೇವಸ್ಥಾನಕ್ಕೆ ಸಂಬಂಧಪಟ್ಟ ನಾಗಬನಕ್ಕೆ ನಾಗನ ಕಟ್ಟೆಯನ್ನು ಕಟ್ಟಲಾಗಿದೆ. ಆದರೆ ಕಳ್ಳರು ನಾಗನ ಕಟ್ಟೆಗೆ ಯಾವುದೇ ಹಾನಿಯನ್ನುಂಟು ಮಾಡಿಲ್ಲ. ಪ್ರಚಲಿತದಲ್ಲಿರುವಂತೆ ಈ ಭಾಗದಲ್ಲಿ ನಿಧಿ ಇದೆ ಎಂಬುದನ್ನು ಹಿಂದಿನ ಕಾಲದ ಜನರು ಆಡಿಕೊಳ್ಳುವುದನ್ನು ಕೇಳಿ ಅದು ಜನರ ಬಾಯಿಂದ ಕಿವಿಗೆ ಹರಡಿ ದುರಾಸೆಯಿಂದ ಕಳ್ಳರು ನಿಧಿ ಶೋಧ ನಡೆಸಿದ್ದಾರೆ ಎಂದು ಜನರಾಡಿಕೊಳ್ಳುತ್ತಿದ್ದು ದೇವಸ್ಥಾನ ಸಮಿತಿ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗಿದೆ.
ಇದೆಲ್ಲದರ ಜೊತೆಗೆ ಇರಾ ಗ್ರಾಮ ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಹಿಂದಿನ ಕಾಲದಿಂದ ಈಗಿನವರೆಗೂ ಇಲ್ಲಿ ಎಲ್ಲಾ ಧರ್ಮೀಯರು ಪರಸ್ಪರ ಸೌಹಾರ್ದದಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಯಾರು ತಪ್ಪಿತಸ್ಥರಿದ್ದಾರೋ, ಆ ಕಳ್ಳರನ್ನು ಹಿಡಿದು ಅವರಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಸಮಿತಿತಿಯವರು ಆಗ್ರಹಿಸಿದ್ದಾರೆ.
Click this button or press Ctrl+G to toggle between Kannada and English