ವಿಭಜನೆಯಿಲ್ಲದ ಭಜನೆಯ ಕಂಠಗಳು ಎಲ್ಲೆಡೆ ಮೊಳಗಲಿ : ಶ್ರೀ ಮೋಹನದಾಸ ಪರಮಸಿಂಹ ಸ್ವಾಮೀಜಿ

12:21 AM, Sunday, November 7th, 2021
Share
1 Star2 Stars3 Stars4 Stars5 Stars
(No Ratings Yet)
Loading...

Bhajaneಮಂಗಳೂರು : ಭಜನೆ ಎಂದರೆ ಕೇವಲ ಹಾಡುವುದೆಂದಷ್ಟೇ ಅರ್ಥವಲ್ಲ. ಭಕ್ತಿ, ಜಪ, ನೆನವರಿಕೆ ಮಾಡುತ್ತಾ ಭಗವಂತನಿಗೆ ಹತ್ತಿರವಾಗುವುದು. ಆಧ್ಯಾತ್ಮಕ ಪ್ರಭಾವಲಯವನ್ನು ವೃದ್ಧಿಸಿಕೊಳ್ಳುವುದೇ ಆಗಿದೆ. ಇಂದು ಕೊರೋನದಂತಹ ಕಷ್ಟ ಕಾಲದಲ್ಲಿ ನಮ್ಮ ಪೀಳಿಗೆ ಸನಾತನೀಯವಾದ ಧರ್ಮದ ಸಾರವನ್ನು ಮರೆತಿವೆ. ಅವರನ್ನು ಪುನಃ ಧಾರ್ಮಿಕ ಹಳಿಗೆ ತಂದು ಈ ರಾಷ್ಟ್ರವನ್ನು ಪ್ರೀತಿಸುವ ಪ್ರಜೆಗಳನ್ನಾಗಿಸುವ ಕಾರ್ಯ ನಡೆಯಬೇಕಿದೆ. ಅಲ್ಲಲ್ಲಿ ಅಲ್ಲಲ್ಲಿ ಇಂತಹಾ ಜನಜಾಗೃತಿಯ ಕಾರ್ಯ ಆಗಬೇಕು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದು, ಜನಮನವನ್ನು ತಲುಪಿದೆ. ಸಂಸ್ಕಾರ ಭಾರತೀಯ ಜೊತೆ ಸೇರಿಕೆಯಿಂದ ನಡೆಯುವ ಈ ಕಾರ್ಯಕ್ರಮಕ್ಕೆ ಮನೆಮನೆಯ ಮಕ್ಕಳು ಪಾಲ್ಗೊಳ್ಳುವಂತಾಗಲಿ ಎಂದು ಶ್ರೀ ಕ್ಷೇತ್ರ ಮಾಣಿಲದ ಸ್ವಾಮೀಜಿ ತುಡರ ಪರ್ಬೊಗು ಭಜನೆದೈಸಿರೊ-ಪತ್ತೆತ್ತ ಗೊಂಚಿಲ್ ಎನ್ನುವ ಭಜನಾ ದಶಾಹವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಿರಿಚಾವಡಿಯಲ್ಲಿ ದೀಪಬೆಳಗಿಸಿ ಪ್ರಜ್ವಲಿಸಿ ಆಶೀರ್ವಚನದಲ್ಲಿ ಈ ಕರೆ ನೀಡಿದರು.

ಸಾಹಿತ್ಯಿಕವಾದ ಕಾರ್ಯಕ್ರಮಗಳನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಡೆಸಿಕೊಂಡು ಬರುತ್ತಿದೆ. ಪ್ರಚಲಿತವಾಗಿ ಅನೇಕ ತುಳುಭಜನೆಗಳು ಬಳಕೆಯಲ್ಲಿವೆ. ಅವುಗಳ ಸಂಖ್ಯೆ ವೃದ್ಧಿಯಾಗಬೇಕು. ಆ ದಿಶೆಯಲ್ಲಿ ಈ ಭಜನೆದೈಸಿರೊ’ ಎಂಬ ಕಾರ್ಯಕ್ರಮದಲ್ಲಿ ಹನ್ನೊಂದು ತಂಡಗಳನ್ನು ಆಹ್ವಾನಿಸಿ ತುಳುವಿನಲ್ಲೇ ಭಜನೆ ಹಾಡುವ ನಿರಂತರ ಪ್ರಯತ್ನದ ಐತಿಹಾಸಿಕ ಹೆಜ್ಜೆಯಿರಿಸಿದ್ದೇವೆ. ಸಂಸ್ಕಾರ ಭಾರತೀಯ ಜೊತೆ ಸೇರುವಿಕೆಯಿಂದ ಭಜನೆಗೆ ಇನ್ನಷ್ಟು ಮೆರಗು ಬಂದಿದೆ. ಇಂದು ಎಲ್ಲರಿಗೂ ಬೇಕಾಗುವ ಭಜನೆ, ಸಂಸ್ಕಾರಗಳು ಇನ್ನಷ್ಟು ಜರುಗಲಿ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಶ ಶ್ರೀ ದಯಾನಂದ ಜಿ. ಕತ್ತಲ್‌ಸಾರ್ ಅಧ್ಯಕ್ಶೀಯ ಭಾಷಣದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪ್ಪಳ ಸಿರಿಯ ದೇವಳದ ಶಶಿಧರ ಶೆಟ್ಟಿ, ಸಂಸ್ಕಾರ ಭಾರತೀಯ ಪ್ರಾಂತ ಉಪಾಧ್ಯಕ್ಷ  ಚಂದ್ರಶೇಖರ ಶೆಟ್ಟಿ, ಸದಸ್ಯ ಸಂಚಾಲಕ ಶ್ರೀ ಚೇತಕ್ ಪೂಜಾರಿ, ಸಂಘಟಕ ವರ್ಕಾಡಿ ರವಿ ಅಲೆವೂರಾಯ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸಂಜೀವ ಸೂಟರ್‌ಪೇಟೆ, ನಿಟ್ಟೆ ಶಶಿಧರ ಶೆಟ್ಟಿ ಸದಸ್ಯರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸರಯೂ ಭಜನಾ ವೃಂದದ ಸದಸ್ಯೆ ವಿಜಯಲಕ್ಷ್ಮೀ ಎಲ್. ಎನ್, ನಾಗರಾಜ ಶೆಟ್ಟಿ, ಮಾಧವ ಭಂಡಾರಿ, ಧನಪಾಲ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಸಂಸ್ಕಾರ ಭಾರತೀಯ ಮಂಗಳೂರಿನ ಅಧ್ಯಕ್ಷರಾದ ಪುರುಷೋತ್ತಮ ಭಂಡಾರಿ ಅಡ್ಯಾರ್ ಸ್ವಾಗತಿಸಿದರು. ಶ್ರೀಲತಾ ನಾಗರಾಜ್ ಧ್ಯೇಯಗೀತೆ ಹಾಡಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್‌ರವರು ಧನ್ಯವಾದವಿತ್ತರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English