ಮುಂಬಯಿ : ನಟಿ ಪೂನಂ ಪಾಂಡೆ ಮೇಲೆ ಪತಿ ಸ್ಯಾಮ್ ಬಾಂಬೆ ಹಲ್ಲೆ ಮಾಡಿದ್ದಾರೆಂದು ಪೂನಂ ನೀಡಿದ ದೂರಿನ ಆಧಾರದ ಮೇಲೆ ಸ್ಯಾಮ್‌ರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೆ ಒಳಗಾದ ನಟಿ ಪೂನಂ ಪಾಂಡೆ ಈಗ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ನಟಿ ಪೂನಂ ಪಾಂಡೆ ಅವರು, ಸೋಮವಾರ (ನ.8) ರಾತ್ರಿ ಪತಿ ಸ್ಯಾಮ್ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಪೂನಂ ಮೇಲೆ ಗಂಭೀರವಾಗಿ ಹಲ್ಲೆ ಮಾಡಲಾಗಿದ್ದು, ಅವರ ಕಣ್ಣು, ತಲೆ, ಮುಖದ ಮೇಲೆ ತೀವ್ರ ಗಾಯಗಳಾಗಿರುವ ಕುರಿತು ಮಾಹಿತಿ ಕೇಳಿಬಂದಿದೆ. ಸದ್ಯ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ನಟಿ ಪೂನಂ ಪಾಂಡೆ ನೀಡಿದ ದೂರಿನ ಆಧಾರದ ಮೇಲೆ ಅವರ ಪತಿ ಸ್ಯಾಮ್ ಬಾಂಬೆಯನ್ನು ಸೋಮವಾರ ಮುಂಬೈನಲ್ಲಿ ಬಂಧಿಸಲಾಗಿದೆ. ತಮ್ಮ ಮೇಲೆ ಸ್ಯಾಮ್ ಹಲ್ಲೆ ಮಾಡಿದ್ದಾರೆಂದು ಪೂನಂ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಪೂನಂ ಪಾಂಡೆ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಪೂನಂ ಮತ್ತು ಸ್ಯಾಮ್ ದಂಪತಿಯ ಕಿರಿಕ್ ಇದೇ ಮೊದಲೇನಲ್ಲ! ಈ ಹಿಂದೆ ಗೋವಾಕ್ಕೆ ಹೋಗಿದ್ದ ಈ ಜೋಡಿ, ಅಲ್ಲಿಯೂ ಜಗಳ ಮಾಡಿಕೊಂಡಿತ್ತು. ತಕ್ಷಣವೇ ಪೂನಂ ಗೋವಾ ಪೊಲೀಸರಿಗೆ ದೂರು ನೀಡಿದ್ದರು. ‘ಪತಿ ಸ್ಯಾಮ್ ನನ್ನ ಹಲ್ಲೆ ಮೇಲೆ ಮಾಡಿ, ದೌರ್ಜನ್ಯ ಎಸಗಿ, ಜೀವ ಬೆದರಿಕೆ ಹಾಕುತ್ತಿದ್ದಾನೆ’ ಎಂದು ದೂರಿನಲ್ಲಿ ತಿಳಿಸಿದ್ದರು. ಕೂಡಲೇ ಸ್ಯಾಮ್‌ರನ್ನು ಪೊಲೀಸರು ಬಂಧಿಸಿದ್ದರು. ನಂತರ 20 ಸಾವಿರ ರೂ.ಗಳನ್ನು ಶ್ಯೂರಿಟಿ ಇರಿಸಿಕೊಂಡು ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿತ್ತು. ಅಲ್ಲದೆ, ಯಾವುದೇ ಸಾಕ್ಷಿ ನಾಶ ಮಾಡಲು ಪ್ರಯತ್ನ ಮಾಡಬಾರದು ಎಂದು ಸ್ಯಾಮ್‌ಗೆ ಕೋರ್ಟ್ ಸೂಚನೆ ನೀಡಿತ್ತು.
ನಂತರ ಪತಿಯ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದ್ದ ಪೂನಂ, ‘ನನ್ನ ಮತ್ತು ಸ್ಯಾಮ್ ಸಂಬಂಧ ಮೊದಲಿನಿಂದಲೂ ಸರಿ ಇರಲಿಲ್ಲ. ಆತ ನನ್ನ ಬಗ್ಗೆ ತುಂಬ ಪೊಸೆಸಿವ್ ಆಗಿ ತಾಳ್ಮೆ ಕಳೆದುಕೊಳ್ಳುತ್ತಾನೆ. ಮದುವೆ ಆದನಂತರ ಸರಿಹೋಗಬಹುದು ಎಂದುಕೊಂಡಿದ್ದೆ. ಆದರೆ ಈ ಬಾರಿ ನಾನು ನಿರ್ಧಾರ ಮಾಡಿದ್ದೇನೆ. ಪ್ರಾಣಿಗೆ ಹೊಡೆದಂತೆ ನನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯ ಜೊತೆ ನಾನು ಬಾಳಲಾರೆ. ಇಂತಹ ದೌರ್ಜನ್ಯದ ಸಂಸಾರದಲ್ಲಿ ಇರುವುದಕ್ಕಿಂತ ಒಂಟಿ ಆಗಿರುವುದೇ ವಾಸಿ ಅಂತ ನಿರ್ಧರಿಸಿದ್ದೇನೆ. ಹನಿಮೂನ್‌ನಲ್ಲಿ ಸ್ಯಾಮ್ ಜೊತೆ ಜಗಳ ಆಯಿತು. ಅವನು ನನಗೆ ಹೊಡೆಯಲು ಆರಂಭಿಸಿದ. ನನ್ನ ಗಂಟಲು ಒತ್ತಿದ. ನಾನು ಸತ್ತೇ ಹೋಗುತ್ತೇನೆ ಎನಿಸಿತು. ಮುಖಕ್ಕೆ ಗುದ್ದಿದ, ಕೂದಲು ಹಿಡಿದು ಎಳೆದಾಡಿದ. ಆತನಿಂದ ಹೇಗೋ ತಪ್ಪಿಸಿಕೊಂಡು ಕೂಡಲೇ ರೂಮ್‌ನಿಂದ ಹೊರಬಂದೆ. ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ನಾನು ಆತನ ವಿರುದ್ಧ ದೂರು ದಾಖಲಿಸಿದೆ’ ಎಂದು ಆಗ ಹೇಳಿದ್ದರು.
Click this button or press Ctrl+G to toggle between Kannada and English