ಕುಲಶೇಖರ ವೀರನಾರಾಯಣ ದೇವಸ್ಥಾನದಲ್ಲಿ ಗೋಪೂಜೆ ಭಜನೆ ಸತ್ಯನಾರಾಯಣ ಮಹಾಪೂಜೆ ಅನ್ನಸಂತರ್ಪಣೆ

9:32 PM, Wednesday, November 17th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Veeranarayana Temple ಮಂಗಳೂರು: ಕುಲಶೇಖರ ವೀರನಾರಾಯಣ ದೇವಸ್ಥಾನ ಜೀರ್ಣೋದ್ಧಾರದ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಆ ಪ್ರಯುಕ್ತ ನವೆಂಬರ್ 14 ರಂದು ರವಿವಾರ ದೇವಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘ ಮತ್ತು ವೀರನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಜಂಟಿಯಾಗಿ ಭಜನೆ. ಗೋಪೂಜೆ. ಸತ್ಯನಾರಾಯಣ ಮಹಾಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ ದೇವಸ್ಥಾನದ ತಂತ್ರಿ ಗಳಾಗಿರುವ ಶ್ರೀಹರಿ ಉಪಾಧ್ಯಾಯರು ಅವರ ಮಾರ್ಗದರ್ಶನದಂತೆ ಪ್ರಧಾನ ಅರ್ಚಕರು ಜನರ್ಧನ್ ಭಟ್ ಅವರು ಶ್ರೀದೇವರಿಗೆ ವಿಶೇಷ ಪೂಜೆ ನಡೆಸಿದರು.

ಆ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲ ಸಂಘದ ಅಧ್ಯಕ್ಷ ಮಯೂರ ಉಳ್ಳಾಲ್ ದಂಪತಿಗಳಿಂದ ಗೋ ಪೂಜೆ ನೆರವೇರಿತು.

Veeranarayana Temple
ಜಿಲ್ಲಾ ಕುಲಾಲ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ.ಎ ಸಾಲ್ಯಾನ್ ಮತ್ತು ಪದಾಧಿಕಾರಿಗಳು ಸದಸ್ಯರು ಹಾಗೂ ವೀರನಾರಾಯಣ ದೇವಸ್ಥಾನದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಮನೋಜ್ ಮತ್ತು ಪದಾಧಿಕಾರಿಗಳು ಸದಸ್ಯರು ಭಜನೆ ನಡೆಸಿದರು.

ನಂತರ ಶ್ರೀ ಸತ್ಯನಾರಾಯಣ ಮಹಾಪೂಜೆ ಅನ್ನಸಂತರ್ಪಣೆ ನೆರವೇರಿತು.

ಪೂಜೆ ನಡೆದ ಬಳಿಕ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಜಿಲ್ಲಾ ಸಂಘದ ಅಧ್ಯಕ್ಷರು ಮಯೂರ   ಉಳ್ಳಾಲ್ ಮಾತನಾಡುತ್ತಾ ವೀರನಾರಾಯಣ ಕ್ಷೇತ್ರ ಸಮಸ್ತ ಹಿಂದೂ ಬಾಂಧವರ ಕ್ಷೇತ್ರವಾಗಿದೆ ಆದರೆ ಇತಿಹಾಸದಿಂದಲೇ ಕ್ಷೇತ್ರವನ್ನು ಕುಲಾಲ ಸಮಾಜ ಬಂಧುಗಳು ಆಡಳಿತವನ್ನು ನಡೆಸುತ್ತ ಬಂದಿದ್ದಾರೆ ಮುಂದೇವು ನಡೆಸುತ್ತೇವೆ.  ಕ್ಷೇತ್ರ ಜೀರ್ಣೋದ್ಧಾರ ಆಗಬೇಕೆಂದು ಸಂಕಲ್ಪ ಮಾಡಿದ್ದೇವೆ ಮುಂದಿನ ತಿಂಗಳು ಜೀರ್ಣೋದ್ಧಾರದ ದೊಡ್ಡ ಮಟ್ಟಿನ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ ಅದಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕುಲಾಲ ಸಮಾಜ ಬಾಂಧವರು ಸೇರುವವರು ಇದ್ದಾರೆ.  ಕ್ಷೇತ್ರದಲ್ಲಿ ಕೆಲವೇ ದಿನಗಳ ಹಿಂದೆ ಭಜನೆ ಸತ್ಯನಾರಾಯಣ ಪೂಜೆ ಗೋಪೂಜೆ ಮಾಡಬೇಕೆಂದು ನಿರ್ಧಾರ ಮಾಡಿದ್ದೆವು ಅದಕ್ಕೆ ಸಾವಿರ ಸಂಖ್ಯೆಯಲ್ಲಿ ಸಮಾಜಬಾಂಧವರು  ಸೇರಿಕೊಂಡಿರುವುದು ಅಭಿಮಾನ ತಂದಿದೆ. ದೇಶವಿದೇಶಗಳಿಂದ ಸಮಾಜಬಾಂಧವರು ಕ್ಷೇತ್ರದ ಮೇಲೆ ಭಕ್ತಿಯಿಂದ ಸಹಕಾರವನ್ನು ನೀಡುವ ಭರವಸೆ ನೀಡಿದ್ದಾರೆ. ವೀರನಾರಾಯಣ ಕ್ಷೇತ್ರ ಕುಲಾಲರ ಅಸ್ಮಿತೆ ಎಂದು ನುಡಿದರು.
Veeranarayana Temple
ವೇದಿಕೆಯಲ್ಲಿ ಪುರುಷೋತ್ತಮ್ ಕುಲಾಲ್ ಕಲ್ಬಾವಿ,  ಆಡಳಿತ ಮೊಕ್ತೇಸರರು. ಶ್ರೀಕ್ಷೇತ್ರ ವೀರನಾರಾಯಣ, ಎ. ದಾಮೋದರ, ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ , ಬಿ ಪ್ರೇಮಾನಂದ ಕುಲಾಲ್ ಕಾರ್ಯಧ್ಯಕ್ಷರು ಶ್ರೀ ವೀರನಾರಾಯಣ ಸೇವಾ ಟ್ರಸ್ಟ್.. ಸುಂದರ ಕುಲಾಲ್ ಶಕ್ತಿನಗರ ಅಧ್ಯಕ್ಷರು ವೀರನಾರಾಯಣ ಸೇವಾ ಸಮಿತಿ, ದೇವಸ್ಥಾನದ ಮಹಿಳಾ  ವಿಭಾಗದ ಕಾರ್ಯಧ್ಯಕ್ಷೆ ಗೀತಾ ಮನೋಜ್. ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಸಾಲ್ಯಾನ್. ಹಾಗೂ ದಯಾನಂದ ಅಡ್ಯಾರ್, ಎಂಪಿ ಬಂಗೇರ .ರಾಮಣ್ಣ ಉಪ್ಪಿನಂಗಡಿ, ಪುಂಡರೀಕಾಕ್ಷ,  ಭಾಸ್ಕರ್ ಪೆರುವಾಯಿ ಸುರೇಶ್ ಕುಲಾಲ್ ಬಂಟ್ವಾಳ,  ಸುರೇಶ್ ಕುಲಾಲ್ ಮಲಾಲಿ, ಬಿಜೆಪಿಯ ಹಿರಿಯ ನಾಯಕಿ ರೂಪಾ ಡಿ ಬಂಗೇರ.  ನಾಗೇಶ್ ಕುಲಾಲ್ ಕುಲಾಯಿ. ಕಿರನ್ ಅಟ್ಲೂರು . ಉದ್ಯಮಿ ಅನಿಲ್ ದಾಸ್. ಸುರೇಶ್ ಕುಲಾಲ್ ಮಂಗಳದೇವಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ನವೀನ್ ಕುಲಾಲ್ ಪುತ್ತೂರು ನಿರೂಪಿಸಿದರು ಪ್ರವೀಣ್ ಬಸ್ತಿ ವಂದನಾರ್ಪಣೆಗೈದರು.

Veeranarayana Temple

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English