ಈಶ್ವರಮಂಗಲ : ಪೋಟೋಗ್ರಾಫರ್‌ ಒಬ್ಬರನ್ನು ಹತ್ಯೆಗೈದು ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಹೂತು ಹಾಕಿದ ಮಾವ

10:05 PM, Wednesday, November 24th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Jagadish Shettyಸುಳ್ಯ  : ಪೋಟೋಗ್ರಾಫರ್‌ ಒಬ್ಬರನ್ನು ಹತ್ಯೆಗೈದು ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಹೂತು ಹಾಕಿರುವ ಘಟನೆ, ನಾಪತ್ತೆಯಾದ ಐದು ದಿನಗಳ ಬಳಿಕ  ಸುಳ್ಯ ತಾಲೂಕಿನ ಈಶ್ವರಮಂಗಲದಲ್ಲಿ  ನ.24 ರಂದು ಬೆಳಕಿಗೆ ಬಂದಿದೆ.

ಕೊಲೆಯಾದವರನ್ನು  ಮಂಗಳೂರು ಹೊರವಲಯ ಕೂಳೂರು ಸಮೀಪದ ಶಿವನಗರ ನಿವಾಸಿ ದಿ. ಶಂಭು ಶೆಟ್ಟಿಯವರ ಪುತ್ರ , ಪ್ರಸ್ತುತ ಮೈಸೂರಿನ ಸುಬ್ರಹ್ಮಣ್ಯ ನಗರ ನಿವಾಸಿ ಯಾಗಿರುವ  ಜಗದೀಶ್ ಶೆಟ್ಟಿ (58ವ) ಎಂದು ಗುರುತಿಸಲಾಗಿದೆ.

ಜಗದೀಶ್ ಶೆಟ್ಟಿ ತನ್ನ ಕೃಷಿ ಜಮೀನು ನೋಡಲು ಮೈಸೂರಿನಿಂದ ಪುತ್ತೂರಿಗೆ ಆಗಮಿಸಿ  ನಿಗೂಢವಾಗಿ ಕಣ್ಮರೆಯಾಗಿದ್ದರು. ಈಗ ನಾಪತ್ತೆ ಪ್ರಕರಣ ಭಾರೀ ತಿರುವು ಪಡೆದಿದ್ದು, ಅವರನ್ನು ಹತ್ಯೆಗೈದು ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಹುಗಿದಿಟ್ಟಿರುವುದು ಬಯಲಾಗಿದೆ.

ಕೂಳೂರು ಸಮೀಪದ ಶಿವನಗರ ನಿವಾಸಿಯಾಗಿದ್ದ  ಜಗದೀಶ್ ಶೆಟ್ಟಿಯವರು  ವೃತ್ತಿಯಲ್ಲಿ ಪೋಟೋಗ್ರಾಫರ್‌ ಆಗಿದ್ದು ಇವರು ಪತ್ನಿ ಶರ್ಮಿಳಾ ಹಾಗೂ ಮಗ 9ನೇ ತರಗತಿ ವಿದ್ಯಾರ್ಥಿ ಶಶಾಂಕ್‌ ಜತೆ ಮೈಸೂರಿನ ಸುಬ್ರಹ್ಮಣ್ಯ ನಗರದಲ್ಲಿ ವಾಸಿಸುತ್ತಿದ್ದರು. ವಾರದ ಹಿಂದೆ ಈಶ್ವರ ಮಂಗಳದ ತನ್ನ ಜಾಮೀನು ನೋಡಲು ಬಂದಿದ್ದ ಅವರನ್ನು ಈಶ್ವರಮಂಗಲ ಸಮೀಪದ ಪುಲಿತ್ತಡಿ ಪಟ್ಲಡ್ಕ ನಿವಾಸಿ ಅವರ ಮಾವನೇ ಆಗಿರುವ ಭಾಲಕೃಷ್ಣ ರೈ ಅಲಿಯಾಸ್‌ ಸೋಮಪ್ಪ ರೈ  ಮತ್ತು ಅವರ ಮಗ ಪ್ರಶಾಂತ್‌, ಪತ್ನಿ ಜಯಲಕ್ಮೀ ಹಾಗೂ ಮಗನ ಸ್ನೇಹಿತ, ಮನೆಯ ಸಮೀಪದ ಸುಳ್ಯದಲ್ಲಿ ಪೋಟೋಗ್ರಾಫರ್‌ ಆಗಿರುವ ಜೀವನ್‌ ಪ್ರಸಾದ್‌ ಜತೆ ಸೇರಿ  ಹತ್ಯೆ ನಡೆಸಿ ಮುಚ್ಚಿಟ್ಟಿದ್ದರು.

ಇದೀಗ ನಾಪತ್ತೆ ದೂರು ನೀಡಿದ ಬಳಿಕ ಪ್ರಕರಣ ಬಹಿರಂಗಗೊಂಡಿದ್ದು ಅದನ್ನು ಮುಚ್ಚಿ  ಹಾಕಲು ಯತ್ನಿಸಿದ ಮೂವರನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.

 

Dharmasthala-Deepothsava  

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English