ಮಂಗಳೂರು : ನಕಲಿ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ನಗರ ದಕ್ಷಿಣ ಎಸಿಪಿ ಟಿ. ಆರ್. ಜಗನ್ನಾಥ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ನಕಲಿ ಅಂಕ ಪಟ್ಟಿ ಮತ್ತು ಪ್ರಮಾಣ ಪತ್ರಗಳೊಂದಿಗೆ ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಮೇಲೆ ಎಸಿಪಿ ಟಿ.ಆರ್. ಜಗನ್ನಾಥ್ ನೇತೃತ್ವದ ಪೊಲೀಸರು ರವಿವಾರ ಪಾಂಡೇಶ್ವರದ ಸುಭಾಸ್‌ನಗರ ಜಂಕ್ಷನ್‌ನಲ್ಲಿ ಕಾದು ನಿಂತು ಆರೋಪಿಯನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಒಟ್ಟು ನಾಲ್ವರು ಆರೋಪಿಗಳ ಪೈಕಿ ಜಪ್ಪು ಬಪ್ಪಾಲ್‌ನ ನವಾಜ್ ಮಹಮದ್ (33) ಮತ್ತು ಬಿಜೈ ನ್ಯೂ ರೋಡ್‌ನ ರವೀಂದ್ರನಾಥ ನಾಯಕ್ (32) ರನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳಾದ ನವಾಜ್ ಮಹಮದ್ ಅವರ ಪತ್ನಿ ರೇಶ್ಮಾ (26) ಮತ್ತು ಚಿಕ್ಕಪ್ಪ ಜಪ್ಪಿನಮೊಗರು ತಾರ್ದೊಲ್ಯದ ಅಬ್ಟಾಸ್ (55) ತಲೆ ಮರೆಸಿಕೊಂಡಿದ್ದಾರೆ. ಇವರು ಮಂಗಳೂರು ವಿಶ್ವ ವಿದ್ಯಾನಿಲಯ ಮಾತ್ರವಲ್ಲದೆ ಬೆಳಗಾವಿಯ ತಾಂತ್ರಿಕ ವಿ.ವಿ., ಕೇರಳ ವಿಶ್ವ ವಿದ್ಯಾನಿಲಯ ಹೀಗೆ ವಿವಿಧ ವಿಶ್ವ ವಿದ್ಯಾನಿಲಯಗಳ ನಕಲಿ ಅಂಕ ಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ತಯಾರಿಸಿ ಕೊಡುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ.
ಆರೋಪಿಗಳಿಂದ ನಕಲಿ ಅಂಕಪಟ್ಟಿಗಳನ್ನು, ಒಂದು ಟಿವಿಎಸ್ ಸ್ಕೂಟರ್, ನಕಲಿ ಪ್ರಮಾಣ ಪತ್ರ ,ಅಂಕ ಪಟ್ಟಿ ತಯಾರಿಸಲು ಉಪಯೋಗಿಸುತ್ತಿದ್ದ ಕಂಪ್ಯೂಟರ್, ಲ್ಯಾಪ್‌ಟೊಪ್, ಸಿಪಿಯು, ಪ್ರಿಂಟರ್‌ನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
Click this button or press Ctrl+G to toggle between Kannada and English