ಯುವವಾಹಿನಿ (ರಿ )ಶಕ್ತಿನಗರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ

6:38 PM, Monday, December 20th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Yuvavahini Shakthinagara ಮಂಗಳೂರು : ಯುವವಾಹಿನಿ (ರಿ )ಶಕ್ತಿನಗರ ಘಟಕದ 2021/22 ನೇ ಸಾಲಿನ ಪದಗ್ರಹಣ , ಪ್ರಶಸ್ತಿ , ಸನ್ಮಾನ , ಕಾರ್ಯಕ್ರಮವು ದಿನಾಂಕ 19.12.2021ನೇ ಆದಿತ್ಯವಾರ ನಾಲ್ಯಪದವು ಕುವೆಂಪು ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಜರಗಿತು.
Yuvavahini Shakthinagara
ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಹಾಗೂ ಕೇಂದ್ರ ಸಮಿತಿಯ ಸಲಹೆಗಾರರು ಪದ್ಮರಾಜ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅಹಂಕಾರ ಅಹಂ ನಮ್ಮಲ್ಲಿ ಹೋದರೆ ನಾವು ಸಮಾಜಮುಖಿ ಕೆಲಸ ಮಾಡಲು ಅನುಕೂಲ ಸಾಧ್ಯವೆಂದು ತಿಳಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು ಹಾಗೂ ಯುವವಾಹಿನಿಯ ಸಮಾಜಮುಖಿ ಕಾರ್ಯಕ್ರಮದ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿದರು.

Yuvavahini Shakthinagara ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಂದ್ರ ಯುವವಾಹಿನಿಯ ಮಾಜಿ ಅಧ್ಯಕ್ಷರಾದ ಹಾಗೂ ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಧ್ಯಕ್ಷರಾದ ಜಯಂತ್ ನಡುಬೈಲು ಮಾತನಾಡಿ, ಸಮಾಜದಿಂದ ಪಡೆದುದ್ದನ್ನು ಸಮಾಜಕ್ಕೆ ಮತ್ತೆ ಸಮರ್ಪಿಸುವ ಗುಣವನ್ನು ಯುವಜನತೆ ಮೈಗೂಡಿಸಬೇಕು ಮತ್ತು ಯುವವಾಹಿನಿಯ ಧ್ಯೆಯ ಉದ್ದೇಶ ಮೈಗುಡಿಸಿಕೊಂಡು ಕೆಲಸಮಾಡಬೇಕು ಎಂದರು. 2021/22 ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಗೊಂಡ ನೂತನ ಅಧ್ಯಕ್ಷ ಜಯರಾಮ ಪೂಜಾರಿ ಬಾಳಿಲ ಹಾಗೂ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಈ ಸಂಧರ್ಭ ಶಕ್ತಿನಗರ ವ್ಯಾಪ್ತಿಯಲ್ಲಿ 2020/21ನೇ ಸಾಲಿನ SSLCಯಲ್ಲಿ 85% ಮಿಗಿಲಾಗಿ ಅಂಕಗಳಿಸಿ ಸಮಾಜಕ್ಕೆ ಕೀರ್ತಿ ತಂದ ಇಬ್ಬರು ಬಿಲ್ಲವ ಮಕ್ಕಳಾದ ಪ್ರತೀಕ್ಷಾ ಜಿ ಅಮೀನ್ ಮತ್ತು ಶೀತಲ್ ಇವರನ್ನು ಯುವವಾಹಿನಿ ಶಕ್ತಿನಗರ ಪ್ರಶಸ್ತಿ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

ಯುವವಾಹಿನಿ( ರಿ)ಕೇಂದ್ರ ಸಮಿತಿಯು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ಒದಗಿಸಲಿರುವ ಡಯಾಲಿಸಿಸ್ ಯಂತ್ರದ ಯೋಜನೆಗೆ ಯುವವಾಹಿನಿ ಘಟಕದ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಶ್ರೀನಿವಾಸ ಪೂಜಾರಿ ಅವರ ವೈಯುಕ್ತಿಕ ದೇಣಿಗೆ ರೂ10000.00ದ ಚೆಕ್ಕನ್ನು, ಕೊಡುಗೆಯನ್ನು ಕೇಂದ್ರ ಸಮಿತಿ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು. ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಯುವವಾಹಿನಿ (ರಿ )ಶಕ್ತಿನಗರ ಘಟಕದ ನೂತನ ಅಧ್ಯಕ್ಷ ಜಯರಾಮ ಪೂಜಾರಿ ಯವರ ವತಿಯಿಂದ ರೂ.10,000.00 ದೇಣಿಗೆ ನೀಡಿದರು, ಹಾಗೂ ಘಟಕದ ನೂತನ ಇಬ್ಬರ ಸದಸ್ಯತನ ಶುಲ್ಕ ರೂ.10,000.00ವನ್ನು ಗೆಜ್ಜೆಗಿರಿಯ ಅಧ್ಯಕ್ಷರಿಗೆ ಹಸ್ತಾಂತರ ಮಾಡಲಾಯಿತು.

Yuvavahini Shakthinagara ಈ ಸಂಧರ್ಭ ದೇವರಾಜ್ ಸಂಪಾದಕತ್ವದಲ್ಲಿ ಮೂಡಿ ಬಂದ ಸಿಂಚನ ಪತ್ರಿಕೆಯನ್ನು ಜಯಂತ್ ನಡುಬೈಲು ಬಿಡುಗಡೆಗೊಳಿಸಿದರು

ಸಭಾಧ್ಯಕ್ಷರಾಗಿ ವಿಶ್ವನಾಥ್ ಕಿರೋಡಿಯನ್ , ಕೇಂದ್ರ ಯುವವಾಹಿನಿಯ ಅಧ್ಯಕ್ಷರಾದ ರಾಜಾರಾಮ್ ಕೆ.ಬಿ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಧ್ಯಕ್ಷರಾದ ಜಯಂತ ನಡುಬೈಲು, ಮಾಜಿ ಕೇಂದ್ರ ಸಮಿತಿಯ ಅಧ್ಯಕ್ಷರು ಕಿಶೋರ್ ಬಿಜೈ , ಕಾರ್ಯದರ್ಶಿ ಯಶ್ವoತ್ ಕರ್ಕೇರ ಉಪಸ್ಥಿತರಿದ್ದರು.

ಕು. ಲಾವಣ್ಯ ತಂಡದವರಿಂದ ಪ್ರಾರ್ಥನೆ, ಗುರು ಪೂಜೆನಡೆಯಿತು. ಕಾರ್ಯದರ್ಶಿ ಯಶ್ವoತ್ ಕರ್ಕೇರ ವಾರ್ಷಿಕ ವರದಿ ಮಂಡನೆ ಮಾಡಿದರು. ಕೇಂದ್ರ ಸಮಿತಿ ಅಧ್ಯಕ್ಷರಾದ ರಾಜಾರಾಮ್ ಕೆ.ಬಿ ಇವರು ಪ್ರತಿಜ್ಞಾ ವಿಧಿ ಬೋಧನೆ ನಡೆಸಿದರು.

Yuvavahini shaktinagara ಪ್ರಶಸ್ತಿಯ ವಿವರ ಮತ್ತು ಸನ್ಮಾನ ಪತ್ರವನ್ನು ನೂತನ ಅಧ್ಯಕ್ಷ ಜಯರಾಮ ಪೂಜಾರಿ ವಾಚಿಸಿದರು. ನೂತನ ಕಾರ್ಯದರ್ಶಿ ಸುಜಾತಾನವರು ಧನ್ಯವಾದ ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಘಟಕದ ನಿರ್ದೇಶಕರಾದ ಉಮೇಶ್ ದಂಡೇಕೇರಿ ಹಾಗೂ ಭಾರತಿ ಅಮೀನ್ ಇವರು ನಡೆಸಿಕೊಟ್ಟರು. ವೇದಿಕೆಯ ಸಂಪೂರ್ಣ ನಿರ್ವಹಣೆಯನ್ನು ನವೀನ್ ರವರು ನಿರ್ವಹಿಸಿದ್ದರು.

Yuvavahini Shakthinagara ಯುವವಾಹಿನಿ ಶಕ್ತಿನಗರ ಘಟಕ 2021-2022 ಸಾಲಿನ ಕಾರ್ಯಕಾರಿ ಸಮಿತಿ

ಅಧ್ಯಕ್ಷರು : ಜಯರಾಂ ಪೂಜಾರಿ ಬಾಳಿಲ, ಉಪಾಧ್ಯಕ್ಷರು : 1. ಶ್ರೀಯುತ ಗಣೇಶ್ ಕೆ ಮಹಾಕಾಳಿ, 2. ಶ್ರೀಯುತ ಯಶವಂತ ಕರ್ಕೇರ, ಕಾರ್ಯದರ್ಶಿ, ಶ್ರೀಮತಿ ಸುಜಾತ ನವೀನ್, ಜೊತೆ ಕಾರ್ಯದರ್ಶಿ : ಶ್ರೀಯುತ ತುಕಾರಾಂ, ಕೋಶಾಧಿಕಾರಿ : ಶ್ರೀಯುತ ಶರತ್ ರಾಜ್, ಸಂಘಟನಾ ಕಾರ್ಯದರ್ಶಿ : ಶ್ರೀಯುತ ರವಿಪ್ರಕಾಶ್ ಪೂಜಾರಿ, ಸಮಾಜ ಸೇವೆ : ಶ್ರೀಯುತ K. ಕೃಷ್ಣಪ್ಪ ಅಂಚನ್ , ಪ್ರಚಾರ ನಿರ್ದೇಶಕರು : ಯೋಗೇಂದ್ರ ಕೋಟ್ಯಾನ್, ಕ್ರೀಡೆ ಮತ್ತು ಆರೋಗ್ಯ ನಿರ್ದೇಶಕರು: ಶ್ರೀಯುತ ಭವಾನಿ ಶಂಕರ್, ಸಾಹಿತ್ಯ ಮತ್ತು ಸಂಸ್ಕೃತಿ ನಿರ್ದೇಶಕರು ಶ್ರೀಯುತ ವಿಶ್ವನಾಥ್ ಕುಂದರ್, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ಶ್ರೀಯುತ ಶೀನಪ್ಪ ಪೂಜಾರಿ, ನಾರಾಯಣ ಗುರುಗಳ ತತ್ವ ಆದರ್ಶಗಳ ಪ್ರಚಾರ ಮತ್ತು ಅನುಷ್ಟಾನ : ಶ್ರೀಯುತ ಕಿಶೋರ್ J., ವಿದ್ಯಾರ್ಥಿ ಸಂಘಟನೆ ನಿರ್ದೇಶಕರು : ಪ್ರತೀಕ್ಷಾ ಜಿ. ಅಮೀನ್, ವ್ಯಕ್ತಿತ್ವ ವಿಕಸನ ನಿರ್ದೇಶಕರು : ಶ್ರೀಯುತ ಉಮೇಶ್ ದಂಡಕೇರಿ, ಮಹಿಳಾ ಸಂಘಟನಾ ನಿರ್ದೇಶಕರು: ಶ್ರೀಮತಿ ಸುರೇಖಾ ರವೀಂದ್ರ, ವಿದ್ಯಾ ನಿಧಿ ನಿರ್ದೇಶಕರು : ಶ್ರೀಯುತ ನವೀನ್ ಚಂದ್ರ ಮಹಾಕಾಳಿ, ನಿಕಟ ಪೂರ್ವ ಅಧ್ಯಕ್ಷರು: ವಿದ್ಯಾ ನಿಧಿ ಸಂಚಾಲಕರು, ಶ್ರೀಯುತ ವಿಶ್ವನಾಥ್ ಕಿರೋಡಿಯನ್ ,ಸಂಘಟನಾ ಕಾರ್ಯದರ್ಶಿ ಕೇಂದ್ರ ಸಮಿತಿ : ಭಾರತೀ ಜಿ ಅಮೀನ್.

Yuvavahini Shakthinagara

Yuvavahini Shakthinagara

Yuvavahini Shakthinagara

Yuvavahini Shakthinagara

Yuvavahini Shakthinagara

Yuvavahini shaktinagara

Yuvavahini Shakthinagara

Yuvavahini Shakthinagara

Yuvavahini Shakthinagara

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English