ಕಾಲೇಜಿಗೆ ಹೋದ ಯುವತಿ ಮನೆಗೆ ಮರಳಿ ಬಾರದೆ ನಾಪತ್ತೆ

11:51 AM, Wednesday, December 22nd, 2021
Share
1 Star2 Stars3 Stars4 Stars5 Stars
(No Ratings Yet)
Loading...

Supriyaಉಡುಪಿ : ಮನೆಯಿಂದ ಕಾಲೇಜಿಗೆ ಹೋದ ಯುವತಿಯೊಬ್ಬಳು  ಡಿ.15ರಂದು ವರು ಮನೆಗೆ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರ್ಕಳ ತಾಲೂಕು ಮಾಳ ಗ್ರಾಮದ ಹುಕ್ರಟ್ಟೆ ಬೆಟ್ಟು ನಿವಾಸಿ ಸುಪ್ರಿಯಾ (18) ಕಾಣೆಯಾದ ಯುವತಿ.

ಈಕೆ 5 ಅಡಿ 2 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ವೃತ್ತ ಕಚೇರಿ ದೂರವಾಣಿ ಸಂಖ್ಯೆ: 08258-231083, 9480805435, ಕಾರ್ಕಳ ಗ್ರಾಮಾಂತರ ಠಾಣೆ ದೂರವಾಣಿ ಸಂಖ್ಯೆ: 08258-232083, 9480805462ನ್ನು ಸಂಪರ್ಕಿಸು ವಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English