ಹಿಂದೂಗಳನ್ನು ಮತಾಂತರ ಮಾಡುವ ಧಂದೆಗೆ ಈ ಕಾನೂನಿಂದ ದೊಡ್ಡ ಅಘಾತ ಆಗಿದೆ : ಜಗದೀಶ್ ಶೇಣವ

9:28 PM, Wednesday, December 22nd, 2021
Share
1 Star2 Stars3 Stars4 Stars5 Stars
(No Ratings Yet)
Loading...

Jagadisha Senavaಮಂಗಳೂರು : ಅನೇಕ ಮತಾಂತರದ ಮಿಷನರಿಗಳು ಅತೀ ಬಡವ ಹಿಂದುಗಳನ್ನು ಬಲವಂತ, ಆಮಿಷ ಆಸೆಯೊಡ್ಡಿ ಮತಾಂತರ ಮಾಡಿದೆ  ಅಂತಹವರಿಗೆ ಈ ಕಾನೂನಿಂದ ದೊಡ್ಡ ಅಘಾತ ಆಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್ ಶೇಣವ ಹೇಳಿದ್ದಾರೆ.

ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು,  ಬಿಜೆಪಿ ಕಾರ್ಯಕರ್ತರ ಬಹುನಿರೀಕ್ಷಿತ ಮತಾಂತರ ಮಸೂದೆ ಮಂಡಿಸಿದ್ದು, ಈ ಕಾಯ್ದೆ ಮಂಡಿಸಿದ ಬೊಮ್ಮಾಯಿ ಸರ್ಕಾರಕ್ಕೆ ದ‌ಕ ಜಿಲ್ಲಾ ಬಿಜೆಪಿ ಅಭಿನಂದನೆ ಸಲ್ಲಿಸುತ್ತದೆ ಎಂದು ಶೇಣವ ಹೇಳಿದರು.

ಕೇವಲ ಒಂದು ಸಾವಿರ ಎರಡು ಸಾವಿರ ರೂಪಾಯಿ, ಐನೂರು ರೂಪಾಯಿ ಮಾತ್ರೆ ನೀಡಿ. ಅದರಿಂದ ಕಾಯಿಲೆ ಗುಣ ಆಗುತ್ತೆ ಹೇಳಿ. ಅನೇಕ ಸುಳ್ಳು ಕಾರಣಗಳ್ನು ಹೇಳಿ ಬಡತನದ ದುರುಪಯೋಗ ಪಡಿಸಿ. ಅನೇಕ ಮತಾಂತರದ ಮಿಷನರಿಗಳು ಅತೀ ಬಡವ ಹಿಂದುಗಳನ್ನು ಮತಾಂತರ ಮಾಡುತ್ತಿದ್ದರು” ಎಂದು ಅವರು ಆರೋಪಿಸಿದ್ದಾರೆ.

ಅಲೆಲೂಯ ಅಲೆಲೂಯ ಎಂದು ಬೊಬ್ಬೆ ಹಾಕಿಕೊಂಡು. ಕಣ್ಣಿದವನಿಗೆ ಕಣ್ಣು ಬರುತ್ತೇ,  ಕಾಲಿಲ್ಲದವನಿಗೆ ಕಾಲು ಬರುತ್ತೆ,  ಎನ್ನುವ ಮೋಸದ ವಂಚನೆ ಆಟ ಆಡಿ. ಅನೇಕ ಜನ ಮುಗ್ಧ ಹಿಂದೂಗಳನ್ನು ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡುವ ಒಂದು ಧಂದೆಗೆ ಈ ಕಾನೂನಿಂದ ದೊಡ್ಡ ಅಘಾತ ಆಗಿದೆ” ಎಂದು ಹೇಳಿದ್ದಾರೆ.

ಕೊರ್ಪೊರೇಟರ್ ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English