ಮಂಗಳೂರು : ಶಕ್ತಿನಗರದ ಶಕ್ತಿ ಪಪೂ ಕಾಲೇಜು ಮಂಗಳೂರು ಡಿ.25 ಮತ್ತು 26 ರಂದು ನಡೆದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ತೃತೀಯ ಸ್ಧಾನವನ್ನು ಪಡೆದಿರುತ್ತದೆ. 65 ಕೆ.ಜಿ ತೂಕದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವು ಡಿ.25 ರಂದು ಪಂಜದಲ್ಲಿ ಆಯೋಜನೆಯಾಗಿತ್ತು. ಪಂಚಶ್ರೀ ಪಂಜ ಸ್ಪೋರ್ಟ್ ಕ್ಲಬ್ ಪಂಜ ಆಯೋಜಿಸಿರುವ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ 24 ತಂಡಗಳು ಭಾಗವಹಿಸಿದವು. ಇದು ಹೊನಲು ಬೆಳಕಿನ ಮ್ಯಾಟ್ ಪಂದ್ಯಾಟವಾಗಿತ್ತು. ಇದರಲ್ಲಿ ತೃತೀಯ ಸ್ಧಾನವನ್ನು ಪಡೆಯುವುದರ ಮೂಲಕ ಪ್ರಥಮ ಭಾರಿಗೆ ಜಿಲ್ಲೆಯಲ್ಲಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿತು.
ಡಿ.26 ರಂದು ವಿಷ್ಣು ಫ್ರೆಂಡ್ಸ್ ಕುಂಡಡ್ಕವು ಆಯೋಜಿಸಿದ 22 ವರ್ಷದ ಒಳಗಿನ ಕಬಡ್ಡಿ ಪಂದ್ಯಾಟದಲ್ಲಿ 45 ಕಬಡ್ಡಿ ತಂಡಗಳು ಭಾಗವಹಿಸಿದವು. ಇದರಲ್ಲಿಯು ಶಕ್ತಿ ಪಪೂ ಕಾಲೇಜು ತೃತೀಯ ಸ್ಧಾನವನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದೆ. ಹಾಗೂ ಉತ್ತಮ ಶಿಸ್ತುಬದ್ಧ ತಂಡ ಪ್ರಶಸ್ತಿಯನ್ನ ಗಳಿಸಿದೆ. ವಿಶೇಷವಾಗಿ ಶಕ್ತಿ ಪಪೂ ಕಾಲೇಜು 2 ಪಂದ್ಯಾಟದಲ್ಲಿ ಗಳಿಸಿದ ನಗದು ಹಣವನ್ನು ಸಮಾಜದ ಹಿಂದುಳಿದ ಬಡ ಕುಟುಂಬದ ಉಳ್ಳಾಲ ಬೈಲು ಪ್ರದೇಶದ 2 ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಪದ್ಮಾವತಿ ಇವರ ಚಿಕಿತ್ಸಾ ವೆಚ್ಚಕ್ಕೆ ಹಣವನ್ನು ನೀಡುವುದರ ಮೂಲಕ ಮಾನವೀಯತೆಯನ್ನು ಮೆರೆದಿರುತ್ತಾರೆ. ಇವರ ಜೊತೆ ಉಳ್ಳಾಲ ಫ್ರೆಂಡ್ಸ್ ತಂಡವು ಕೈ ಜೋಡಿಸಿರುವುದು ವಿಶೇಷವಾಗಿದೆ.
ಶಕ್ತಿ ಪಪೂ ಕಾಲೇಜಿನ ದೈಹಿಕ ನಿರ್ದೇಶಕರಾದ ಆಕಾಶ್ ಶೆಟ್ಟಿಯವರು ಈ ತಂಡದ ಕಬಡ್ಡಿ ತರಬೇತುದಾರರಾಗಿ ಮಾರ್ಗದರ್ಶನ ನೀಡಿರುತ್ತಾರೆ. ಶಕ್ತಿ ಪಪೂ ಕಾಲೇಜಿನ ಕಬಡ್ಡಿ ತಂಡವನ್ನು ಸಂಸ್ಥೆಯ ವಿದ್ಯಾರ್ಥಿಗಳಾದ ನಿಖಿಲ್, ಇಮ್ರಾನ್, ಸಾತ್ವಿಕ್, ಪವನ್, ಪವನ್ ಹೆಚ್.ಬಿ., ಸೂರಜ್, ಸಂತೋಷ್, ಪ್ರಣಮ್, ಧನುಷ್, ಸುಮನ್, ಮನೋಜ್, ಹಿತೇಶ್ ಪ್ರತಿನಿಧಿಸಿರುತ್ತಾರೆ. ಇವರನ್ನು ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ. ಕೆ.ಸಿ ನಾಕ್ ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶೈಕ್ಷಣಿಕ ಸಂಯೋಜಕರಾದ ಪೃಥ್ವಿರಾಜ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ..ಟಿ. ರಾಜರಾಮ್ ರಾವ್ ಹಾಗೂ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್ ಅಭಿನಂದಿಸಿದರು.
Click this button or press Ctrl+G to toggle between Kannada and English