ಧರ್ಮಪ್ರಚಾರಕ್ಕಾಗಿ ಏಸುವಿನ ಕುರಿತ ಲೇಖನ, ಭಿತ್ತಿಪತ್ರ ಇಟ್ಟು, ಧಾರ್ಮಿಕ ಸ್ಥಳಗಳನ್ನು ಕಾಂಡೋಮ್ ಹಾಕಿ ಅಪವಿತ್ರ ಗೊಳಿಸುತ್ತಿದ್ದ ಆರೋಪಿ

4:30 PM, Wednesday, December 29th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

candom-desaiಮಂಗಳೂರು : ಬೈಬಲ್ ನಲ್ಲಿರುವ ವಾಕ್ಯದಂತೆ ದೇಶದಲ್ಲಿರುವ ಎಲ್ಲಾ ಸ್ತ್ರೀ ಪುರುಷರ ರಕ್ಷಣೆ ಮತ್ತು ಧರ್ಮಪ್ರಚಾರಕ್ಕಾಗಿ ದೈವಸ್ಥಾನ ಗಳಲ್ಲಿ ಏಸುವಿನ ಕುರಿತ ಲೇಖನ, ಭಿತ್ತಿಪತ್ರ ಹಾಕಿರುವುದಾಗಿ ಮಾರ್ನಮಿಕಟ್ಟೆ ಕೊರಗಜ್ಜ ಕಟ್ಟೆ ನ ಕಟ್ಟೆಯಲ್ಲಿ ಕಾಂಡೋಮ್ ಹಾಕಿ ಅಪವಿತ್ರ ಗೊಳಿಸಿದ ಆರೋಪಿ ಪೋಲೀಸರ ಬಳಿ ಬಾಯಿ ಬಿಟ್ಟಿದ್ದಾನೆ.

ಪೊಲೀಸರು ವಶಪಡಿಸಿಕೊಂಡಿರುವ ಆರೋಪಿಯನ್ನು ದೇವದಾಸ್ ದೇಸಾಯಿ, ಪ್ರಾಯ(62), ತಂದೆ: ಜಾನ್ ದೇಸಾಯಿ, ವಾಸ: ಡೋರ್ ನಂಬ್ರ: 4-311/2, ಮಿತ್ರ ನಗರ, ಕೊಂಡಾಣ, ಕೋಟೇಕಾರು, ಮಂಗಳೂರು ಎಂದು ಗುರುತಿಸಲಾಗಿದೆ.

ಮೂಲತ: ಹುಬ್ಬಳ್ಳಿಯ ಉಣ್ಕಲ್ ಎಂಬ ಊರಿನವನಾದ ದೇಸಾಯಿ  ತಂದೆ ತಾಯಿಯವರಿಗೆ  ನಾಲ್ಕು ಜನ  ಮಕ್ಕಳಿದ್ದು, ಮೊದಲನೇಯವನು ಅಣ್ಣ ಸುರೇಂದ್ರ ಕುಮಾರ್, ಎರಡನೆಯವನು ಅಣ್ಣ ಜ್ಯೋತಿಕುಮಾರ್, ಮೂರನೇಯವಳು ಅಕ್ಕ ಪದ್ಮಾವತಿ,  ಮತ್ತು ಆರೋಪಿ ಕಿರಿಯ ಮಗನಾಗಿರುತ್ತೇನೆ.  ಹುಬ್ಬಳ್ಳಿಯ ಬಾಸೆಲ್ ಮಿಷನ್ ಹೈಯರ್ ಸೆಕಂಡರಿ ಸ್ಕೂಲ್ ನಲ್ಲಿ 1977 ನೇ ಇಸವಿಯಲ್ಲಿ 10 ನೇ ತರಗತಿ ವ್ಯಾಸಾಂಗ ಮಾಡಿರುವುದಾಗಿ ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ.

ಆರೋಪಿಯ ತಂದೆ ಜಾನ್ ದೇಸಾಯಿಯವರು 1983ನೇ ಇಸವಿಯಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಹೆಡ್ ಕ್ಲರ್ಕ್ ಆಗಿ ನಿವ್ರತ್ತಿಯಾಗಿದ್ದು, 1997 ನೇ ಇಸವಿಯಲ್ಲಿ ತೀರಿಕೊಂಡಿರುತ್ತಾರೆ.

ಆರೋಪಿ 1985ನೇ ಇಸವಿಯಲ್ಲಿ ಧಾರವಾಡ ಸಾರಿಗೆ ಕಛೇರಿಯಲ್ಲಿ ತ್ರಿಚಕ್ರ ವಾಹನದ ಚಾಲನಾ ಪರವಾನಿಗೆಯನ್ನು ಪಡೆದುಕೊಂಡು 1991 ನೇ ಇಸವಿವರೆಗೆ ಹುಬ್ಬಳ್ಳಿ ನಗರದಲ್ಲಿ ಅಟೋರಿಕ್ಷಾ ಚಲಾಯಿಸಿ ಕೊಂಡಿದ್ದ. 1991 ನೇ ಇಸವಿಯಲ್ಲಿ ನನ್ನ ಅಣ್ಣ ಜ್ಯೋತಿಕುಮಾರ್ ದೇಸಾಯಿಯವರ ಹೆಂಡತಿ ಸುಮಂಗಳಾ ರವರ ಪರಿಚಯದ ಚಿಕ್ಕಮಗಳೂರು ಜಿಲ್ಲೆಯ ಶಂಕರಪುರ ಎಂಬಲ್ಲಿಯ ಜೋಸೆಫ್ ರವರ ಪುತ್ರಿ ವಸಂತ ಕುಮಾರಿಯ ಜೊತೆಗೆ ಮದುವೆಯಾಗಿದ್ದು, 1993 ನೇ ಇಸವಿಯಲ್ಲಿ ನಮಗೆ ಹೆಣ್ಣು ಮಗುವಾಗಿದ್ದು ಅವಳ ಹೆಸರು ಪದ್ಮಾವತಿ ಎಂಬುದಾಗಿದೆ.

1997 ನೇ ಇಸವಿಯಲ್ಲಿ ಕೆಲಸ ಹುಡುಕಿಕೊಂಡು ಮಂಗಳೂರಿಗೆ ಬಂದಿದ್ದ ದೇಸಾಯಿ, ಮಂಗಳೂರಿನ ಬಂದರಿನ ವಿ.ಆರ್.ಎಲ್. ಟ್ರಾನ್ಸ್ ಪೋರ್ಟ್ ಕಛೇರಿಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡ. ಆ ಸಮಯ ಸುರತ್ಕಲ್ ಸೂರಿಂಜೆಯಲ್ಲಿ ಬಾಡಿಗೆ ಮನೆ ಮಾಡಿ,  ಹೆಂಡತಿ ಹಾಗೂ ಮಗಳ ಜೊತೆಗಿದ್ದ. ನಂತರ ಹುಬ್ಬಳ್ಳಿಯ  ಮನೆಯಲ್ಲಿದ್ದ  ಅತ್ತಿಗೆಯ ಜೊತೆಗೆ ಮನಸ್ತಾಪ ಮಾಡಿಕೊಂಡು  ಹೆಂಡತಿ, ಮಗಳು ದೇಸಾಯಿಯನ್ನು ಬಿಟ್ಟು ಸ್ವಂತ ಊರಾದ ಚಿಕ್ಕಮಗಳೂರಿಗೆ ಹೋದವರು ಅಲ್ಲಿಯೇ ನೆಲೆಸಿರುತ್ತಾರೆ.

1999ನೇ ಇಸವಿಯಲ್ಲಿ ವಿ.ಆರ್.ಎಲ್. ಕಛೇರಿಯ ಕೆಲಸವನ್ನು ಬಿಟ್ಟ ದೇಸಾಯಿ ಸ್ವಂತ ಊರಾದ ಹುಬ್ಬಳ್ಳಿಗೆ ಹೋಗಿದ್ದು, ಅಲ್ಲಿಂದ ಕೊಡಗು ಜಿಲ್ಲೆಯ ವಿರಾಜಪೇಟೆಯ ಮತ್ತೂರು ಎಂಬಲ್ಲಿ ಶ್ರೀನಿವಾಸ ಕಾಫಿ ಎಸ್ಟೇಟ್ ನಲ್ಲಿ ರೈಟರ್ ಆಗಿ ಕೆಲಸಕ್ಕೆ ಸೇರಿದ್ದು, 2000ನೇ ಇಸವಿಯಲ್ಲಿ ಅಲ್ಲಿಂದ ಕೆಲಸ ಬಿಟ್ಟು ಮಂಗಳೂರಿಗೆ ಬಂದು ಬಾಡಿಗೆ ರಿಕ್ಷಾ ಚಲಾಯಿಸಿಕೊಂಡಿದ್ದನು. ಈ ಸಮಯದಲ್ಲಿ ಮಂಗಳೂರಿನ ಶಕ್ತಿನಗರದ ಕಾರ್ಮಿಕ ಕಾಲೊನಿಯಲ್ಲಿ ಪೊಲೀಸ್ ಕೃಷ್ಣಪ್ಪ ಎಂಬವರ ಮನೆಯಲ್ಲಿ ಬಾಡಿಗೆ ಮನೆಮಾಡಿಕೊಂಡಿದ್ದ. 2003 ನೇ ಇಸವಿಯಲ್ಲಿ ಮಂಗಳೂರಿನ ಬೆಂದೂರ್ ವೆಲ್ ನ ಕೊಲಾಸೋ ಆಸ್ಪತ್ರೆಯ ಮಾಲಕರಾದ ಮಥಾಯಿಸ್ ಪ್ರಭು ರವರ ಕಾರಿನ ಚಾಲಕನಾಗಿ ಸುಮಾರು 6 ತಿಂಗಳುಗಳ ಸಮಯ ಕೆಲಸ ಮಾಡಿಕೊಂಡಿದ್ದ ಎಂದು ಹೇಳಿಕೊಂಡಿದ್ದಾನೆ.

ನಂತರ 2006 ನೇ ಇಸವಿಯಲ್ಲಿ ತಲಪಾಡಿ ಕೆ.ಸಿ. ರೋಡ್ ಬಳಿ ಅಂತೋನಿ ರಾಜ್ ಎಂಬವರ ಮನೆಯನ್ನು ಖರೀದಿ ಮಾಡಿದ್ದು, ಪ್ರಸ್ತುತ ಇದೇ ಮನೆಯಲ್ಲಿ ಒಬ್ಬಂಟಿಯಾಗಿ ವಾಸಮಾಡಿಕೊಂಡಿರುವುದಾಗಿದೆ. ಸರಿಯಾದ ಕೆಲಸವಿಲ್ಲದೆ ಗುಜಿರಿ ಪೇಪರ್ ಬಾಕ್ಸ್ ಗಳನ್ನು ಮಾರಿಕೊಂಡು ಒಬ್ಬಂಟಿಯಾಗಿ ಜೀವನ ನಡೆಸುತ್ತಿರುವ ದೇಸಾಯಿ ಧರ್ಮಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿರುವುದಾಗಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ.

ಮಾರ್ನಮಿಕಟ್ಟೆ ಕೊರಗಜ್ಜ ಕಟ್ಟೆ,  ಬಾಬುಗುಡ್ಡೆ ಕೊರಗಜ್ಜನ ಕಾಣಿಕೆ ಡಬ್ಬಿ,  ಕೊಂಡಾಣ ದೈವಸ್ಥಾನ , ಮಂಗಳಾದೇವಿ ದೇವಸ್ಥಾನ , ಕದ್ರಿ ದೇವಸ್ಥಾನದ ಬಳಿಯಲ್ಲಿರುವ ರಿಕ್ಷಾ ಪಾರ್ಕ್ ನ ಬಳಿ ಕಾಣಿಕೆ ಡಬ್ಬಿ, ಕಲ್ಲುರ್ಟಿ ದೈವಸ್ಥಾನ, ಒಮೆಗಾ ಆಸ್ಪತ್ರೆ ಬಳಿ, ಪಂಪ್ ವೆಲ್ ಬಳಿ, ಉಳ್ಳಾಲದ ದರ್ಗಾ ಬಳಿಯ ಮಸೀದಿಯ ಕಾಣಿಕೆ ಡಬ್ಬಿ, ಕಲ್ಲಾಫು ನಾಗನ ಕಟ್ಟೆ,  ಕೊಟ್ಟಾರ ಚೌಕಿಯ ಕಲ್ಲುರ್ಟಿ ದೈವಸ್ಥಾನ , ಉರ್ವಾ ಮಾರಿಗುಡಿ ದೇವಸ್ಥಾನದ ಕಾಣಿಕೆ ಡಬ್ಬಿ, ಕುತ್ತಾರು ಕೊರಗಜ್ಜನ ಕಟ್ಟೆ, ಕುಡುಪು ದೈವಸ್ಥಾನ , ಉಳ್ಳಾಲದ ಕೊರಗಜ್ಜನ ಕಾಣಿಕೆ ಡಬ್ಬಿ , ನಂದಿಗುಡ್ಡೆಯ ಕೊರಗಜ್ಜನ ಗುಡಿ, ಎ ಬಿ ಶೆಟ್ಟಿ ವೃತ್ತದ ಬಳಿಯ ದರ್ಗಾ,  ಸಿಖ್ ಗುರುದ್ವಾರ ಗುಡಿ- ಬಂಗ್ರ ಕೂಳೂರು,  ಕೋಟ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ- ಮಂಕಿಸ್ವಾಂಡ್, ಆದಿ ಮಾಹೇಶ್ವರಿ ದೈವಸ್ಥಾನ ಭಜನಾ ಮಂಡಳಿ ಕಾಣಿಕೆ ಡಬ್ಬಿ- ಜೆಪ್ಪು ಮಹಾಕಾಳಿ ಪಡ್ಪು ಮೊದಲಾದೆಡೆ  ಕಾಂಡೋಮ್, ಭಿತ್ತಿಪತ್ರ, ಏಸುವಿನ ಕುರಿತ ಲೇಖನ ಹಾಕಿದ್ದಾಗಿ ಆರೋಪಿ ದೇಸಾಯಿ ಒಪ್ಪಿಕೊಂಡಿದ್ದಾನೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English