ಮಂಗಳೂರು : ಮಂಗಳವಾರ ಫಾದರ್ ಮುಲ್ಲರ್ ಆಸ್ಪತ್ರೆಯ ಹೃದ್ರೋಗ ತೀವ್ರ ನಿಗಾ ಘಟಕದ ಎ.ಸಿ. ಯಲ್ಲಿ ಶಾರ್ಟ್ ಸರ್ಕ್ಯುಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡು ಸ್ವಲ್ಪ ಹೊತ್ತು ಗಲಭೆಯ ವಾತಾವರಣ ನಿರ್ಮಾಣವಾಯಿತು. ಆದರೆ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಬೆಳಗ್ಗೆ 10.30 ರ ವೇಳೆಗೆ ಏರ್‌ಕಂಡೀಷನ್ ಯಂತ್ರದ ಒಳಗೆ ಹೊಗೆ, ಸುಟ್ಟ ವಾಸನೆ ಹಾಗೂ ಸ್ವಲ್ಪ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಆಸ್ಪತ್ರೆಯ ಸಿಬ್ಬಂದಿ, ಕೊಠಡಿಯ ಕಿಟಕಿ ಗಾಜುಗಳನ್ನು ಒಡೆದು ಉಸಿರಾಟಕ್ಕೆ ಸಮಸ್ಯೆಯಾಗದಂತೆ ನೋಡಿಕೊಂಡರು. ಸಂಸ್ಥೆಯ ಭದ್ರತಾ ಸಿಬ್ಬಂದಿ ಗಳ ನೆರವಿನಿಂದ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ಸ್ಥಳಾಂತರಿಸಲಾಯಿತು. ಇದೆ ವೇಳೆಗೆ ಮೂರು ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ, ಬೆಂಕಿ ಹರಡದಂತೆ ನೀರು ಹಾಯಿಸಲಾಯಿತು. ಆಸ್ಪತ್ರೆಯ ಸಿಬ್ಬಂಧಿಗಳು ಜತೆಗೆ ಸಹಕರಿಸಿದರು. ಯಾವುದೇ ನಷ್ಟ, ಹಾನಿ ಸಂಭವಿಸಿಲ್ಲ.
Click this button or press Ctrl+G to toggle between Kannada and English