ತಾಳ್ಮೆ ಸಹನೆಗೆ ಇನ್ನೊಂದು ಹೆಸರು ವಿಶ್ವಕರ್ಮ ಸಮಾಜ -ಗುರು ದೇವಾನಂದ ಸ್ವಾಮಿ, ಶ್ರೀ ಗುರುದೇವದತ್ತ ಸಂಸ್ಥಾನಮ್ ಓಡಿಯೂರು

12:53 PM, Thursday, January 20th, 2022
Share
1 Star2 Stars3 Stars4 Stars5 Stars
(5 rating, 1 votes)
Loading...

Kalikamba-Brahmmakalashaಮಂಗಳೂರು : ತಾಳ್ಮೆ ಸಹನೆಗೆ ಇನ್ನೊಂದು ಹೆಸರು ವಿಶ್ವಕರ್ಮ ಸಮಾಜ, ವಿಶ್ವಕರ್ಮ ಬ್ರಾಹ್ಮಣ ಸಮಾಜ ಇಲ್ಲದೆ ಸಮಾಜವೇ ಇಲ್ಲ ಸಮಾಜದ ವಿವಿಧ ಸ್ತರಗಳಲ್ಲಿ ವಿಶ್ವಕರ್ಮರ ಕೊಡುಗೆ ಅನನ್ಯ ವಾದುದು. ಕ್ಷೇತ್ರದ ಮೊಕ್ತೇಸರರು ಬೆನ್ನು ಮೂಳೆಯಂತೆ ಆಡಳಿತವನ್ನು ಎಲ್ಲರ ಸಹಕಾರದಿಂದ ನಡೆಸಿದಲ್ಲಿ ಕ್ಷೇತ್ರ ಅಭಿವೃದ್ಧಿ ಪರಿಪೂರ್ಣತೆ ಕಾಣುವಂತಾಗುತ್ತದೆ, ದತ್ತಾತ್ರೇಯನಿಗೂ ಕಾಳಿಕಾಂಬೆಯ ಕ್ಷೇತ್ರಕ್ಕೂ ಅವಿನಾಭವ ಸಂಬಂಧವಿದೆ, ಧರ್ಮ ಶ್ರದ್ದೆಯಿಂದ ನಮ್ಮ ಸಂಸ್ಕಾರ ರೂಪುಗೊಳ್ಳುತ್ತದೆ ಇದಕ್ಕಾಗಿ ವೇದಿಕೆಗಳು ಸಿದ್ದವಾಗಬೇಕು ಎಂದು ಶ್ರೀ ಕಾಳಿಕಾಂಬಾ ರಂಗ ಮಂಟಪದಲ್ಲಿ ಜನವರಿ 19ರಂದು ಬ್ರಹ್ಮಕಲಶೋತ್ಸವ ಸಮಾರಂಭದ ಸಲುವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಗುರು ದೇವಾನಂದ ಸ್ವಾಮಿ, ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಾoಜನೇಯ ಕ್ಷೇತ್ರ ಓಡಿಯೂರು ಆಶೀರ್ವಚನ ನೀಡುತ್ತಾ  ಹೇಳಿದರು.

ಅಸೂಯೆ ಗುಣ ನಮ್ಮನ್ನು ಅಧೋಗತಿಗೆ ತರುತ್ತದೆ, ಪೈಪೋಟಿ ಅಸೂಯೆ ಗುಣಬಿಟ್ಟು ಇನ್ನೊಬ್ಬರ ಯಶಸ್ಸಿಗೆ ಪ್ರೋತ್ಸಾಹಿಸಬೇಕು ಎಂದು ಶ್ರೀಮತ್ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಯವರು ತಮ್ಮ ಆಶೀರ್ವಚನದಲ್ಲಿ ಹೇಳಿದರು . ವಿದ್ವಾನ್ ಡಾ || ಸತ್ಯ ಕೃಷ್ಣ ಭಟ್ ವೇದ ಸಂಸ್ಕೃತ ವಿದ್ವಾಂಸರು, ಶ್ರೀನಿವಾಸ್ ರಾಧಾ ಕೃಷ್ಣ ದೇವಸ್ಥಾನ ಮಂಗಳೂರು ಇವರು ” ಶಕ್ತಿ ಉಪಾಸನೆ” ಎಂಬ ವಿಷಯದ  ಬಗ್ಗೆ ಶ್ರೀ ಕಾಳಿಕಾಂಬಾ ಕ್ಷೇತ್ರದ ಕಾಳಿಕಾಂಬೆಯ ಬಗ್ಗೆ, ವಿಶ್ವಕ್ಕೆ ವಿಶ್ವಕರ್ಮರ ಕೊಡುಗೆಯ ಬಗ್ಗೆ ಅರ್ಥ ಪೂರ್ಣವಾಗಿ ಧಾರ್ಮಿಕ ಉಪನ್ಯಾಸ ನೀಡಿದರು.

ಕ್ಷೇತ್ರದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ, ಯು ಎಸ್ ಗಿರೀಶ್ ಅಧ್ಯಕ್ಷರು ಶ್ರೀ ವಿಶ್ವಕರ್ಮ ಸಭಾ ಕೊಯಂಬತ್ತೂರು ಶುಭ ಹಾರೈಸಿದರು,  ಶ್ರೀ ಕಾಳಿಕಾಂಬಾ ದೇವಸ್ಥಾನ ಬಂಗ್ರ ಮಂಜೇಶ್ವರದ ಅಧ್ಯಕ್ಷ ಉಮೇಶ್ ಆಚಾರ್ಯ ಪೋಲ್ಯ, ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ನವೀನ್ ಆಚಾರ್ಯ, ಬಾ ಜ ಪಾ ಜಿಲ್ಲಾ ವಕ್ತಾರ ಜಿತೇಂದ್ರ ಕೊಟ್ಟಾರಿ, ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಕಾರ್ಯಧ್ಯಕ್ಷ ಕೈಂತಿಲ ಸದಾಶಿವ ಆಚಾರ್ಯ, ಮ. ನ ಪಾ ಸದಸ್ಯೆ ಶ್ರೀಮತಿ ವನಿತಾ ಪ್ರಸಾದ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ಷೇತ್ರದ ಆಡಳಿತ ಮೊಕ್ತೇಸರ ಕೆ ಕೇಶವ ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಹೇಳಿದರು . ಬ್ರಹ್ಮ ಕಲಶೋತ್ಸವ ಸಮಿತಿಯ ಕಾರ್ಯಧ್ಯಕ್ಷ ನಾಗರಾಜ್ ಆಚಾರ್ಯ ಮಂಗಳಾದೇವಿ ಸ್ವಾಗತಿಸಿದರು. ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಸುಜೀರ್ ವಿನೋದ್ ಮತ್ತು ಕು. ವಾರುಣಿ ನಾಗರಾಜ್ ಆಚಾರ್ಯ ( ತುಳುವಿನಲ್ಲಿ ) ಕಾರ್ಯಕ್ರಮ ನಿರೂಪಿಸಿದರು. ದ ಕ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಕೆ ಎಲ್ ಹರೀಶ್ ವಂದಿಸಿದರು. ದಾನಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನ್ರತ್ಯ ಗಾನ ಇವರ ತುಳುವಪ್ಪೆ ಜೋಕುಲು ಕಲಾ ಬಳಗ ಕಲ್ಲಡ್ಕ ಸೇವರೂಪದಲ್ಲಿ ನಡೆಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English