ಅನಂತ ಗುಣ ಸ್ವರೂಪಿ ಭಗವಂತನ ನಾಮ ಸ್ಮರಣೆ, ನಮ್ಮ ಜೀವನದ ಅಂಗವಾಗಬೇಕು – ಜಿತಕಾಮಾನಂದಜಿ ಮಹಾರಾಜ್

5:43 PM, Friday, January 21st, 2022
Share
1 Star2 Stars3 Stars4 Stars5 Stars
(No Ratings Yet)
Loading...

Kalikamba ಮಂಗಳೂರು : ಅನಂತ ಸ್ವರೂಪಳಾಗಿರುವ ಕಾಳಿಕಾಂಬೆಯು ಶಕ್ತಿಯ ವಿವಿಧ ರೂಪಗಳಲ್ಲಿ ಜಗತ್ತಿನಲ್ಲಿ ಗೋಚರಿಸುವಳು, ಜೀವನಕ್ಕೆ ಆಧಾರವೇ ಭಗವಂತನ ಅನುಗ್ರಹ, ನಿಜವಾದ ನೆಮ್ಮದಿ ನಮ್ಮದೇ ಅಂತರಾಳದಲ್ಲಿ ಇದೆ, ಅನಂತ ಗುಣ ಸ್ವರೂಪಿ ಭಗವಂತ, ಭಗವಂತನ ನಾಮ ಸ್ಮರಣೆ, ನಮ್ಮ ಜೀವನದ ಅಂಗವಾಗಬೇಕು. ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಶಿಕ್ಷಣ-ಸಂಸ್ಕಾರ ನೀಡದಿದ್ದರೆ , ಮಕ್ಕಳನ್ನೇ ಅವಸಾನಗೊಳಿಸಿದಂತೆ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ನುಡಿದರು.

ಅವರು  ಮಂಗಳೂರು ಶ್ರೀಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡುತ್ತಾ  ಹೇಳಿದರು. ಶ್ರೀ ಚಿರುಚಿಟ್ರಂಬಲಂ ಅವಧೂತಾನಂದ ಸಮರ್ಥ ಸದ್ಗುರು ಗುರುಮಲೈ ಶ್ರೀ ರಾಜಗುರು ಮಹಾರಾಜರು ಮಹಾ ಸಂಸ್ಥಾನಂ ಮೈಸೂರು ಉಪಸ್ಥಿತರಿದ್ದರು.

ಶ್ರೀ ಕಾಳಿಕಾಂಬೆಯ ಕ್ಷೇತ್ರದ ಜೀರ್ಣೋದ್ದಾರ ಕೆಲಸ ಕಾರ್ಯಗಳು ಉತ್ತಮ ವಾಗಿ ಮೂಡಿ ಬಂದಿದ್ದು ಮಹಾನ್ ಕ್ಷೇತ್ರವಾಗಿ ಬೆಳಗಲಿ ಎಂದು ಶ್ರೀಮತ್ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಯವರು ತಮ್ಮ ಆಶೀರ್ವಚನದಲ್ಲಿ ಹೇಳಿದರು . ಶ್ರೀಮತಿ ಅಕ್ಷತಾ ಬಜ್ಪೆ ಅವರು ” ವಿಶ್ವಬ್ರಾಹ್ಮಣ ಮಹಿಳೆ ಮತ್ತು ಸಂಸ್ಕಾರ ” ಎಂಬ ವಿಷಯದ ಕುರಿತು ಮಾತನಾಡುತ್ತಾ ತನ್ನ ಹಿನ್ನೆಲೆಯ ಬಗ್ಗೆ ಪ್ರತಿಯೊಬ್ಬರೂ ಮೊದಲಾಗಿ ತಿಳಿದಿರಬೇಕು,ಸ್ತ್ರೀಯರನ್ನು ತಾಯಿಯ ರೂಪದಲ್ಲಿ ಕಾಣುವ ಉದಾತ್ತತೆ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಕಾಣಲು ಸಾಧ್ಯ, ಸ್ತ್ರೀಯರಲ್ಲಿರುವ ನೇತೃತ್ವದ ಗುಣ ಗಮನಾರ್ಹವಾದ ದ್ದು, ಜಗತ್ತಿನ ಅತ್ಯಂತ ಶ್ರೇಷ್ಠ ಕೆಲಸ ಇದ್ದರೆ ಅದು ತಾಯಿಯದು,ಮಹಿಳೆ ಪ್ರತಿಯೊಂದು ಕ್ಷೇತ್ರಗಳ ಲ್ಲೂ ಬೆಳೆಯಬೇಕು, ಸಮಷ್ಟಿ ಯ ಚಿಂತನೆ ಎಲ್ಲರಲ್ಲೂ ಬರಬೇಕು, ಸಭ್ಯತೆ, ಸಂಸ್ಕೃತಿ ಇದ್ದಾಗ ಮಾತ್ರ ಸಮಾಜ ಉನ್ನತಿ, ಮನೆಯ ಮೂಲ ಭಾವವನ್ನು ಬೇರಿನ ಹಾಗೆ ಬೆಳೆಸಬೇಕು.ನಾವು ಇತರರಿಗೆ ಆದರ್ಶವಾಗಬೇಕು ಎಂದು ತಮ್ಮ ಉಪನ್ಯಾಸದಲ್ಲಿ ಹೇಳಿದರು.

ಕ್ಷೇತ್ರದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ,  ಶ್ರೀ ಕರ ಸ್ಥಳ ನಾಗಲಿಂಗ ಸ್ವಾಮಿ ಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿ, ಶ್ರೀ ವೆಂಕಟ್ರಮಣ ದೇವಸ್ಥಾನ ಡೊಂಗರಕೇರಿ ಇದರ ಆಡಳಿತ ಮೊಕ್ತೇಸರ ಪಿ ವರದರಾಯ ಎಸ್. ನಾಗ್ವೇಕರ್, ಎಸ್. ಕೆ. ಜಿ ಐ ಕೋ ಆಪರೇಟಿವ್ ಸೊಸೈಟಿ ಲಿ ಇದರ ಅಧ್ಯಕ್ಷ ಉಪೇಂದ್ರ ಆಚಾರ್ಯ, ಕ್ಷೇತ್ರದ ಆಡಳಿತ ಮೊಕ್ತೇಸರ ಕೆ ಕೆ ಕೇಶವ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಕ್ಷೇತ್ರದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿ ಕ್ಷೇತ್ರದ ಜೀರ್ಣೋದ್ದಾರ ಕಾರ್ಯಸಾಗಿ ಬಂದ ಬಗ್ಗೆ ಧಾರ್ಮಿಕವಾಗಿ ಕ್ಷೇತ್ರ ಯಾವ ರೀತಿ ಇರಬೇಕು ಎಂದು ಹೇಳಿದರು . ಬ್ರಹ್ಮ ಕಲಶೋತ್ಸವ ನಿರ್ವಹಣಾ ಸಮಿತಿಯ ಸಂಚಾಲಕರು ಆದ ಸುಂದರ್ ಆಚಾರ್ಯ ಮರೋಳಿ ಸ್ವಾಗತಿಸಿದರು. ವಿಶ್ವಕರ್ಮ ಯುವ ವೇದಿಕೆಯ ಅಕ್ಷತಾ ಬೈಕಾಡಿ ಮತ್ತು ಪೂಜಾ ಬೋಳೂರು ಕಾರ್ಯಕ್ರಮ ನಿರೂಪಿಸಿದರು. ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮ ವೆಂಕಟೇಶ್ ಆಚಾರ್ ವಂದಿಸಿದರು. ದಾನಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ “ನುಡಿ ನಾದ- ನಾಟ್ಯಮ್ರತ- ಪುಣ್ಯಭೂಮಿ ಭಾರತ” ಸನಾತನ ನಾಟ್ಯಾಲಯದ ನ್ರತ್ಯ ನಿರ್ದೇಶಕಿ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾ ಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ತಂಡದಿಂದ ವಿಶ್ವಬ್ರಾಹ್ಮಣ ಮಹಿಳಾ ಸೇವಾ ಸಮಿತಿಯ ಸೇವರೂಪದಲ್ಲಿ ನಡೆಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English