ನಮ್ಮ ಧರ್ಮ ಸಂಸ್ಕೃತಿ ರಕ್ಷಣೆ ನಮ್ಮ ಕರ್ತವ್ಯ, ಇವೆರಡೂ ಉಳಿದರೆ ಮಾತ್ರ ದೇಶ ಉಳಿಯಬಲ್ಲುದು- ಕಲ್ಲಡ್ಕ ಪ್ರಭಾಕರ ಭಟ್

1:01 PM, Saturday, January 22nd, 2022
Share
1 Star2 Stars3 Stars4 Stars5 Stars
(No Ratings Yet)
Loading...

Kalikamba ಮಂಗಳೂರು : ರಾಷ್ಟ್ರ ಮತ್ತು ಧರ್ಮ ವೈಶಿಷ್ಟ್ಯ ತೆಯೇ ಕಳೆದುಹೋಗಿದೆ. ನಾವು ಸೃಷ್ಟಿಯನ್ನು ಪೂಜಿಸುವವರು, ನಮಗೆ ಸಂಸ್ಕಾರ ನೀಡುವವಳೇ ತಾಯಿ, ಮಕ್ಕಳಲ್ಲೂ ತಾಯಿಯನ್ನು ಕಾಣುವ ಸಮಾಜ ನಮ್ಮದು, ಹಿಂದು ಸಮಾಜದ ಮೇಲೆ ಸಾಕಷ್ಟು ಆಕ್ರಮಣ ನಡೆದಿದೆ. ನಮ್ಮಮಕ್ಕಳಿಗೆ ನಮ್ಮತನವನ್ನು ತಿಳಿಸುವ ಕೆಲಸ ಆಗಬೇಕು, ನಮ್ಮ ಧರ್ಮ ಸಂಸ್ಕೃತಿ ರಕ್ಷಣೆ ನಮ್ಮ ಕರ್ತವ್ಯ, ಇವೆರಡೂ ಉಳಿದರೆ ಮಾತ್ರ ದೇಶ ಉಳಿಯಬಲ್ಲುದು, ಹಣದ ಹಿಂದೆ ಗುಣ ಬರುವುದಿಲ್ಲ, ಗುಣದ ಹಿಂದೆ ಹಣ ತನ್ನಷ್ಟಕ್ಕೆ ಬರುತ್ತದೆ. ಧರ್ಮಪ್ರಧಾನ ರಾಷ್ಟ್ರ ನಮ್ಮದಾಗಬೇಕು, ಹಿಂದು ಧರ್ಮ ಉಳಿದರೆ ಜಗತ್ತು ಉಳಿಯುತ್ತದೆ. ವಿಶ್ವಕರ್ಮ ಎಂದರೆ ನಿಜವಾದ ವಾಸ್ತು ಶಿಲ್ಪಿ. ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ ಕಲ್ಲಡ್ಕ ಪ್ರಭಾಕರ ಭಟ್ ರವರು ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಿತಿಯ ಸಮಾರಂಭದಲ್ಲಿ ತಮ್ಮ ಧಾರ್ಮಿಕ ಭಾಷಣ ದಲ್ಲಿ ಹೇಳಿದರು.

ಪರಶುರಾಮ ಸೃಷ್ಟಿಯಲ್ಲಿ ದೇವಸ್ಥಾನಗಳು ವೈಶಿಷ್ಟತೆ, ಅನನ್ಯತೆ ಹೊಂದಿದೆ. ಕ್ಷೇತ್ರಗಳಲ್ಲಿ ಶಾಸ್ತ್ರೀಯತೆ ಅಚ್ಚುಕ್ಕಟ್ಟು ಪ್ರಭಾವ ಬೀರುತ್ತದೆ ಎಂದು ಬ್ರಹ್ಮಶ್ರೀ ವೇ |ಮೂ | ಕೃಷ್ಣರಾಜ ತಂತ್ರಿ, ಶ್ರೀ ಕ್ಷೇತ್ರ ಕುಡುಪು ಇವರು ದೇವಾಲಯ ಹಾಗೂ ತಂತ್ರಾಗಮ ಎಂಬ ವಿಷಯದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಗೋಕರ್ಣನಾಥ ದೇವಸ್ಥಾನ ಇದರ ಮೊಕ್ತೇಸರ ರವಿಶಂಕರ್ ಮಿಜಾರ್, ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್, ಶಾಂತಾರಾಮ್ ಜೂವೆಲ್ಲೆರ್ಸ್ ಉಜಿರೆ ಇದರ ಮಾಲಕರಾದ ಆನಂದ ಆಚಾರ್ಯ, ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ ಎಸ್. ಆರ್. ಆಚಾರ್ಯ ಆಗಮಿಸಿ ಶುಭ ಹಾರೈಸಿದರು.

ಕ್ಷೇತ್ರದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿ ಕ್ಷೇತ್ರದ ಜೀರ್ಣೋದ್ದಾರ ಕೆಲಸಕ್ಕೆ ಸಹಕರಿಸಿದ ಎಲ್ಲರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ತಾಯಿ ಕಾಳಿಕಾಂಬೆಯ ಅನುಗ್ರಹದಿಂದ ಎಲ್ಲವೂ ಸಾಂಗವಾಗಿ ನೆರವೇರುತ್ತಾ ಬಂದಿದೆ ಎಂದು ಹೇಳಿದರು . ಶ್ರೀ ಕಾಳಿಕಾಂಬಾ ದೇವಸ್ಥಾನ ಕೊಲಕಾಡಿಯ ಆಡಳಿತ ಮೊಕ್ತೇಸರ ಕೆ ಸುಧಾಕರ ಆಚಾರ್ಯ, ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮ ವೆಂಕಟೇಶ್ ಆಚಾರ್, ಕ್ಷೇತ್ರದ ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಜೆ ಗುರುರಾಜ್ ಉಪಸ್ಥಿತರಿದ್ದರು. ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆಹರ್ನಿಷಿ ಸೇವೆ ಸಲ್ಲಿಸಿದ ಮ ವೆಂಕಟೇಶ್ ಆಚಾರ್ ಇವರನ್ನು ಪೂಜ್ಯ ಗುರುಗಳು ಗೌರವಿಸಿದರು. ನಿವೃತ್ತ ಪ್ರೊಫೆಸರ್ ಯಶ್ವoತ್ ಸ್ವಾಗತಿಸಿದರು. ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ವಿಶೇಷ ಆಹ್ವಾನಿತ ಸುಜೀರ್ ವಿನೋದ್ ಭರತ್ ರಾಜ್ ಬೈಕಾಡಿ ಕಾರ್ಯಕ್ರಮ ನಿರೂಪಿಸಿದರು. ಡಾ. ಎಸ್. ಪಿ
ಗುರುದಾಸ್ ವಂದಿಸಿದರು. ದಾನಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಕಾರ್ಕಳ ಇವರಿಂದ ” ಬೀಷ್ಮ ವಿಜಯ ” ತಾಳ ಮದ್ದಳೆ ನಡೆಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English