ಮಂಗಳೂರಿನ ಶ್ರೀ ಗುರುಮಠ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಏಪ್ರಿಲ್ 2 ರಿಂದ 11 ರ ವರೆಗೆ ಯುಗಾದಿ ಮಹೋತ್ಸವ

Tuesday, March 29th, 2022
Kalikamba

ಮಂಗಳೂರು : ಇಲ್ಲಿನ ರಥಬೀದಿಯ ವಿಶ್ವ ಬ್ರಾಹ್ಮಣ ಸಮಾಜದ ಪವಿತ್ರ  ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇನ್ದ್ರ ಸರಸ್ವತೀ ಮಹಾಸ್ವಾಮಿಜಿ ಗಳವರು ( ಶ್ರೀಮತ್ ಆನೆಗುಂದಿ ಜಗದ್ಗುರು ಮಹಾ ಸಂಸ್ಥಾನ0 ಸರಸ್ವತೀ ಪೀಠ, ಪಡುಕುತ್ಯಾರು) ಇವರ ದಿವ್ಯ ಉಪಸ್ಥಿತಿಯಲ್ಲಿ  ತಾ.02. 04.2022 ಶನಿವಾರ ದಿಂದ ದಿನಾಂಕ 11.04.2022ರ ಸೋಮವಾರದ ತನಕ ಹತ್ತು ದಿನಗಳ ಪರ್ಯಂತ ಕ್ಷೇತ್ರದ ಪ್ರಧಾನ ತಂತ್ರಿಗಳಾದ ಬ್ರಹ್ಮಶ್ರೀ ಲಕ್ಷ್ಮೀ ಕಾಂತ ಶರ್ಮಾರ ಆಚಾರ್ಯತ್ವದಲ್ಲಿ ಸಂಪನ್ನಗೊಳ್ಳಲಿದೆ. ಕಾರ್ಯಕ್ರಮ ವಿವರ : 02.4.2022 ಬೆಳಿಗ್ಗೆ […]

ಪರಂಪರಾನುಗತ ಶಿಲ್ಪವಿದ್ಯೆಯನ್ನು ಉಳಿಸಿ ಬೆಳೆಸುವಲ್ಲಿ ಸಮುದಾಯ ನಿರಂತರ ಪ್ರಯತ್ನಿಸಬೇಕಿದೆ : ಡಾ. ಡಿ. ವೀರೇಂದ್ರ ಹೆಗ್ಗಡೆ

Thursday, January 27th, 2022
Veerendra Hegde

ಮಂಗಳೂರು  : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಬುಧವಾರ ಬೆಳಿಗ್ಗೆ ಶತಚಂಡಿಕಾ ಯಾಗಪೂರ್ಣಾಹುತಿ ನಡೆಯಿತು.  ಶ್ರದ್ದೆ ನಿಸ್ವಾರ್ಥ ಸೇವೆ ಎಲ್ಲರೂ ಮಾಡಿದುದರಿಂದ ಬ್ರಹ್ಮ ಕಲಶ ವ್ಯವಸ್ಥಿತ ವಾಗಿ ಮೂಡಿ ಬಂದಿದೆ. ಕ್ಷೇತ್ರದಲ್ಲಿ ಇಂದು ನಡೆದ ಚಂಡಿಕಾ ಯಾಗದ ಫಲದಿಂದ ಕೊರೋನ ಲೋಕವನ್ನೇ ಬಿಟ್ಟು ತೊಲಗಲಿ. ಕ್ಷೇತ್ರದ ಬ್ರಹ್ಮ ಕಲಶ 13 ದಿನಗಳ ಕಾಲ ಬೆಳಗ್ಗೆ ಉದಯರಾಗ, ವಿವಿಧ ಧಾರ್ಮಿಕ ಕಾರ್ಯಕ್ರಮ, ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲಾ ಮುಗಿದ ನಂತರ ಮಹಿಳೆಯರು ಸ್ವಚ್ಛತೆ ಮಾಡಿಕೊಂಡು ಬಂದಿರುವುದು ನಿಜಕ್ಕೂ ಸುತ್ಯಾರ್ಹ ಎಂದು […]

ಭಗವಂತನಿಗೆ ಮೆಚ್ಚುಗೆ ಆಗುವ ರೀತಿಯಲ್ಲಿ ನಾವೆಲ್ಲರೂ ಬದುಕು ರೂಪಿಸಿಕೊಳ್ಳಬೇಕು : ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿ

Monday, January 24th, 2022
Kalahastendra

ಮಂಗಳೂರು: ಭಗವಂತನಿಗೆ ಮೆಚ್ಚುಗೆ ಆಗುವ ರೀತಿಯಲ್ಲಿ ನಾವೆಲ್ಲರೂ ಬದುಕು ರೂಪಿಸಿಕೊಳ್ಳಬೇಕು, ಸರ್ವವ್ಯಾಪಿಯಾದ ದೇವರ ಸ್ಮರಣೆಯನ್ನು ಕೇವಲ ಕಷ್ಟ ಕಾಲದಲ್ಲಿ ಮಾತ್ರ ಮಾಡದೆ ನಿರಂತರವಾಗಿ ಸದಾ ಕಾಲ ಸ್ಮರಿಸಿ ದೇವರ ಕ್ರಪೆಗೆ ಪಾತ್ರರಾಗಬೇಕು ಶ್ರೀ ಕಾಳಿಕಾಂಬಾ ಅಮ್ಮನವರಿಗೆ ಸರ್ವಸ್ವವನ್ನೂ ಅರ್ಪಿಸಿ ಕಾರ್ಯಕರ್ತರು ದೇವಸ್ಥಾನ ಜೀರ್ಣೋದ್ದಾರ ಕಾರ್ಯದಲ್ಲಿ ಶ್ರಮಿಸಿದ್ದಾರೆ ಧನ ಸಹಾಯವನ್ನೂ ಮಾಡಿದ್ದಾರೆ ಅವರೆಲ್ಲರಿಗೂ ಒಳಿತಾಗಲಿ ಎಂದು ಶ್ರೀಮತ್ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಯವರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮ ಕಲಶೋತ್ಸವದ (23.01.2022) ದಿನದ ಧಾರ್ಮಿಕ […]

ನಮ್ಮ ಧರ್ಮ ಸಂಸ್ಕೃತಿ ರಕ್ಷಣೆ ನಮ್ಮ ಕರ್ತವ್ಯ, ಇವೆರಡೂ ಉಳಿದರೆ ಮಾತ್ರ ದೇಶ ಉಳಿಯಬಲ್ಲುದು- ಕಲ್ಲಡ್ಕ ಪ್ರಭಾಕರ ಭಟ್

Saturday, January 22nd, 2022
Kalikamba

ಮಂಗಳೂರು : ರಾಷ್ಟ್ರ ಮತ್ತು ಧರ್ಮ ವೈಶಿಷ್ಟ್ಯ ತೆಯೇ ಕಳೆದುಹೋಗಿದೆ. ನಾವು ಸೃಷ್ಟಿಯನ್ನು ಪೂಜಿಸುವವರು, ನಮಗೆ ಸಂಸ್ಕಾರ ನೀಡುವವಳೇ ತಾಯಿ, ಮಕ್ಕಳಲ್ಲೂ ತಾಯಿಯನ್ನು ಕಾಣುವ ಸಮಾಜ ನಮ್ಮದು, ಹಿಂದು ಸಮಾಜದ ಮೇಲೆ ಸಾಕಷ್ಟು ಆಕ್ರಮಣ ನಡೆದಿದೆ. ನಮ್ಮಮಕ್ಕಳಿಗೆ ನಮ್ಮತನವನ್ನು ತಿಳಿಸುವ ಕೆಲಸ ಆಗಬೇಕು, ನಮ್ಮ ಧರ್ಮ ಸಂಸ್ಕೃತಿ ರಕ್ಷಣೆ ನಮ್ಮ ಕರ್ತವ್ಯ, ಇವೆರಡೂ ಉಳಿದರೆ ಮಾತ್ರ ದೇಶ ಉಳಿಯಬಲ್ಲುದು, ಹಣದ ಹಿಂದೆ ಗುಣ ಬರುವುದಿಲ್ಲ, ಗುಣದ ಹಿಂದೆ ಹಣ ತನ್ನಷ್ಟಕ್ಕೆ ಬರುತ್ತದೆ. ಧರ್ಮಪ್ರಧಾನ ರಾಷ್ಟ್ರ ನಮ್ಮದಾಗಬೇಕು, ಹಿಂದು […]

ವಿಶ್ವಕರ್ಮ ಬಂಧುಗಳು ಸಂಘಟನೆಯ ವತಿಯಿಂದ ಉಚಿತ ಸಾಮೂಹಿಕ ಉಪನಯನ

Monday, April 29th, 2019
upanayana

ಮಂಗಳೂರು  : ನಗರದರಥಬೀದಿ, ಭವಂತಿಸ್ಟ್ರೀಟ್‌ನ ವಿಶ್ವಕರ್ಮ ಬಂಧುಗಳು ಸಂಘಟನೆಯ ದಶಮಾನೋತ್ಸವ ಆಚರಣೆಯ ಸಲುವಾಗಿ ವಿಶ್ವಕರ್ಮ ಸಮಾಜದ 19 ಮಂದಿ ವಟುಗಳಿಗೆ ’ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ಜರಗಿದ ಸಮಾರಂಭದಲ್ಲಿ ಸಾನಿಧ್ಯವಹಿಸಿದ್ದ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧಿಪತಿ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಆಶೀರ್ವಚನವಿತ್ತರು. ನಿತ್ಯ ಸಂಧ್ಯಾವಂದನೆ ಹಾಗೂ ಇತರ ಅನುಷ್ಠಾನಗಳ ಬಗೆಗಿನ ಮಹತ್ವವನ್ನು ಸ್ವಾಮೀಜಿಯವರು ತಿಳಿಸಿದರಲ್ಲದೆ, ಗಾಯತ್ರಿ ಮಂತ್ರದಕುರಿತಾಗಿಯೂ ವಿವರಿಸಿ ಸಂಧ್ಯಾವಂದನೆ ಪುಸ್ತಕ ಹಾಗೂ […]