ಮಂಗಳೂರಿನ ಶ್ರೀ ಗುರುಮಠ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಏಪ್ರಿಲ್ 2 ರಿಂದ 11 ರ ವರೆಗೆ ಯುಗಾದಿ ಮಹೋತ್ಸವ

9:30 PM, Tuesday, March 29th, 2022
Share
1 Star2 Stars3 Stars4 Stars5 Stars
(No Ratings Yet)
Loading...

Kalikamba ಮಂಗಳೂರು : ಇಲ್ಲಿನ ರಥಬೀದಿಯ ವಿಶ್ವ ಬ್ರಾಹ್ಮಣ ಸಮಾಜದ ಪವಿತ್ರ  ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇನ್ದ್ರ ಸರಸ್ವತೀ ಮಹಾಸ್ವಾಮಿಜಿ ಗಳವರು ( ಶ್ರೀಮತ್ ಆನೆಗುಂದಿ ಜಗದ್ಗುರು ಮಹಾ ಸಂಸ್ಥಾನ0 ಸರಸ್ವತೀ ಪೀಠ, ಪಡುಕುತ್ಯಾರು) ಇವರ ದಿವ್ಯ ಉಪಸ್ಥಿತಿಯಲ್ಲಿ  ತಾ.02. 04.2022 ಶನಿವಾರ ದಿಂದ ದಿನಾಂಕ 11.04.2022ರ ಸೋಮವಾರದ ತನಕ ಹತ್ತು ದಿನಗಳ ಪರ್ಯಂತ ಕ್ಷೇತ್ರದ ಪ್ರಧಾನ ತಂತ್ರಿಗಳಾದ ಬ್ರಹ್ಮಶ್ರೀ ಲಕ್ಷ್ಮೀ ಕಾಂತ ಶರ್ಮಾರ ಆಚಾರ್ಯತ್ವದಲ್ಲಿ ಸಂಪನ್ನಗೊಳ್ಳಲಿದೆ. ಕಾರ್ಯಕ್ರಮ ವಿವರ : 02.4.2022 ಬೆಳಿಗ್ಗೆ ಗಂಟೆ 10.20 ರಿಂದ 10.40 ರೊಳಗೆ ಧ್ವಜಾರೋಹಣ, ಪಂಚಾಂಗ ಶ್ರವಣ, ಪ್ರತೀ ದಿನ ಶ್ರೀ ಕಾಳಿಕಾಂಬೆ ಮತ್ತು ಶ್ರೀ ಸುಬ್ರಹ್ಮಣ್ಯ ದೇವರ ಬಲಿ ಉತ್ಸವ, ಬೀದಿ ಸವಾರಿ ನಡೆಯಲಿದೆ. 06.04.2022 ಬೆಳಿಗ್ಗೆ ಶ್ರೀ ಗುರುಮಠದ ಗುರು ವೀರಭದ್ರ ದೇವರ ಪಂಚಮಿ ಉತ್ಸವ ಬೀದಿ ಸವಾರಿ.

08 4. 2022.ಏಳನೇ ನೇ ಉತ್ಸವ . ಸಂಜೆ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇನ್ದ್ರ ಸರಸ್ವತೀ ಮಹಾಸ್ವಾಮಿಜಿ ದಿವ್ಯ ಉಪಸ್ಥಿತಿಯಲ್ಲಿ ಮಹಾಸಭೆ, ಮುಖ್ಯ ಅತಿಥಿ : ಡಾ. ಎಸ್. ಪಿ. ಗುರುದಾಸ್, ಉಪನ್ಯಾಸಕರು ಹಾಗೂ ಕೀರ್ತನಕಾರರು. ಸಾಧಕರಿಗೆ ಅಭಿನಂದನೆ. ರಾತ್ರಿ ಶ್ರೀ ದೇವರ ವಿಶೇಷ ಬಲಿ ಹೊರಟು, ದೈವದ ಭೇಟಿ, ಚಂದ್ರಮಂಡಲೋತ್ಸವ,ಲಾಲ್ಕಿ , ಪಲ್ಲಕಿ ಯಲ್ಲಿ ಬೀದಿ ಸವಾರಿ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ತನಕ ತೆರಳಿ ಕ್ಷೇತ್ರಕ್ಕೆ ಆಗಮಿಸುವುದು.

ತಾ. 09.4.2022 ಎಂಟನೇ  ಉತ್ಸವ ಸಂಜೆ 4 ಗಂಟೆಗೆ ಶ್ರೀ ಗುರುಮಠದ ಗುರು, ವೀರಭದ್ರ ದೇವರ ಲಾಲ್ಕಿ ಉತ್ಸವ, ಬೀದಿ ಸವಾರಿ, ಚಂದ್ರ ಮಂಡಲೋತ್ಸವ, ರಾತ್ರಿ , ಶಯನೋತ್ಸವ ಜರಗಲಿರುವುದು. ಈ ಸಂದರ್ಭ ಭಕ್ತಾದಿಗಳಿಂದ ದಿಗಳಿಂದ ಫಲ, ಪುಷ್ಪ ಸಮರ್ಪಣೆ. ಶಯನೋತ್ಸವ. ತಾ.10.04.2022 ಒಂಬತ್ತನೇ  ಉತ್ಸವ :  ಬೆಳಿಗ್ಗೆ ಗಂಟೆ 6.27ಕ್ಕೆ ಶ್ರೀ ದೇವಿಯ ಕವಟೋಧ್ದ್ಗಾಟನೆ . ಬೆಳಿಗ್ಗೆ 10 ಕ್ಕೆ ಧಾರ್ಮಿಕ ಸಭೆ,  ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇನ್ದ್ರ ಸರಸ್ವತೀ ಮಹಾಸ್ವಾಮಿಜಿಯವರಿಂದ ಆಶೀರ್ವಚನ. ಮುಖ್ಯ ಅತಿಥಿ : ಡಾ || ಪಿ. ಅನಂತಕೃಷ್ಣ ಭಟ್, ಖ್ಯಾತ ಲೇಖಕರು, ವಿಶ್ರಾಂತ ಪ್ರಾಧ್ಯಾಪಕರು ಸಾಧಕರಿಗೆ ಅಭಿನಂದನೆ. ಸಂಜೆ 4 ಗಂಟೆಗೆ ಅವಭೃತ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ತೆರಳಿ, ಕದ್ರಿಯ ಕೆರೆಯಲ್ಲಿ ಜಳಕ ನಂತರ ಕ್ಷೇತ್ರಕ್ಕೆ ಆಗಮಿಸಿ,  ಧ್ವಜಾವರೋಹಣ.

11.4.2022 ಮಧ್ಯಾಹ್ನ ಚೂರ್ಣೋತ್ಸವ . ಶ್ರೀ ಸುಬ್ರಹ್ಮಣ್ಯ ದೇವರ ಪ್ರೀತ್ಯರ್ಥ ಬಟ್ಲು ಕಾಣಿಕೆ  12.4.2022 ಅಮ್ಮನವರ ರಂಗ ಪೂಜೆ. 13.04.2022 ಸಂಜೆ ವಿಶ್ವಕರ್ಮ ದೇವರ ರಂಗ ಪೂಜೆ . ವಿನಾಯಕ ದೇವರ ರಂಗ ಪೂಜೆ, ಸಾಯಂಕಾಲ ಶ್ರೀ ಕ್ಷೇತ್ರದ ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ. ನಂತರ  ಪಡುಪಣಂಬೂರು ನಾಲ್ಕುರು  ಪಂಜುರ್ಲಿ ದೈವದ ನಿರ್ಗಮನ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಸೇವೆ ಗಳನ್ನು ನೀಡಿ ಕಾಣಿಕೆ, ಪ್ರಸಾದ ಸ್ವೀಕರಿಸಿ ಅನ್ನ ಸಂತರ್ಪಣೆಯಲ್ಲಿ ಭಾಗವಹಿಸಿ ಶ್ರೀ ಕಾಳಿಕಾಂಬೆಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಕ್ಷೇತ್ರದ ಆಡಳಿತ ಮಂಡಳಿಯ ಪರವಾಗಿ ಆಡಳಿತ ಮೊಕ್ತೇಸರ್ ಶ್ರೀ ಕೆ. ಕೇಶವ ಆಚಾರ್ಯರು ವಿನಂತಿಸಿದ್ದಾರೆ. 2.04.2022 ರಿಂದ 10.04.2022 ರ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಕ್ಷೇತ್ರದ ಶ್ರೀ ಕಾಳಿಕಾಂಬಾ ರಂಗ ಮಂಟಪದಲ್ಲಿ ನಡೆಯಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English