ಸುಳ್ಯ : ಸುಳ್ಯದ ಜಟ್ಟಿಪಳ್ಳದ ಬಾರೊಂದರಲ್ಲಿ ಮಂಗಳವಾರ ಮಧ್ಯಾಹ್ನ ಲಂಚ ಸ್ವೀಕರಿಸುತ್ತಿದ್ದ ಸುಳ್ಯದ ಸರ್ವೆ ಇಲಾಖೆಯ ಸರ್ವೇಯರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಸುಳ್ಯ ಭೂಮಾಪನಾ ಇಲಾಖೆಯ ಪರವಾನಗಿ ಭೂಮಾಪಕ ಚೆನ್ನಪಟ್ಟಣ ಮೂಲದ ಶರತ್‌ಕುಮಾರ್(೩೪) ಬಂಧಿತ ಆರೋಪಿಯಾಗಿದ್ದಾನೆ.
ಆಲೆಟ್ಟಿ ಗ್ರಾಮದ ಕೋಲ್ಚಾರಿನ ಪದ್ಮಾನಾಭ ಎಂಬುವವರು ಕೊಯಿಂಗಾಜೆಯಲ್ಲಿರುವ ತಮ್ಮ ಒಂದೂವರೆ ಎಕ್ರೆ ಜಾಗ ಸರ್ವೆ ಮಾಡಲು ಕಳೆದ ಡಿಸೆಂಬರ್ ೧೨ ರಂದು ಅರ್ಜಿ ಸಲ್ಲಿಸಿದ್ದರು. ಬಳಿಕ ೨೯ ರಂದು ಶರತ್‌ಕುಮಾರ್ ಕೊಯಿಂಗಾಜೆಗೆ ತೆರಳಿ ಸ್ಥಳದ ಸರ್ವೆ ನಡೆಸಿದ್ದರು. ಆದರೆ ದಾಖಲೆಗಳನ್ನು ನೀಡಲು ಶರತ್‌ಕುಮಾರ್ ಪದ್ಮಾನಾಭರ ಕೋಲ್ಚಾರ್ 6,000 ರೂಪಾಯಿ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದ. ದಾಖಲೆಗಳಿಗಾಗಿ ಪದ್ಮನಾಭನ ಚಿಕ್ಕಪ್ಪ ೩೨೦೦ ರೂಪಾಯಿಗಳನ್ನು ಮೊದಲೇ ನೀಡಿದ್ದರು. ಉಳಿದ ೨೮೦೦ ರೂಪಾಯಿ ನೀಡುವಂತೆ ಶರತ್ ಪದ್ಮನಾಭರನ್ನು ಕೇಳಿದ್ದ. ಹಣ ನೀಡದ ಕಾರಣ ಈತ ಯಾವುದೇ ದಾಖಲೆಗಳನ್ನೂ ಸಿದ್ಧಪಡಿಸಿರಲಿಲ್ಲ. ಈ ಬಗ್ಗೆ ಪದ್ಮನಾಭರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದರಂತೆ ಮಂಗಳವಾರ ಸುಳ್ಯದ ಜಟ್ಟಿಪಳ್ಳದಲ್ಲಿರುವ ಬಾರಲ್ಲಿ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಈತನನ್ನು ಬಂಧಿಸಿ, ಪದ್ಮನಾಭ ಕೊಯಿಂಗಾಜೆ ಅವರಿಂದ ಸ್ವೀಕರಿಸಿದ ೨೮೦೦ ರೂಪಾಯಿಗಳನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
Click this button or press Ctrl+G to toggle between Kannada and English