ಬಾರೊಂದರಲ್ಲಿ ಲಂಚ ಸ್ವೀಕರಿಸುತ್ತಿದ್ದ ಸುಳ್ಯದ ಸರ್ವೇಯರ್ ಲೋಕಾಯುಕ್ತ ವಶಕ್ಕೆ
Wednesday, January 9th, 2013ಸುಳ್ಯ : ಸುಳ್ಯದ ಜಟ್ಟಿಪಳ್ಳದ ಬಾರೊಂದರಲ್ಲಿ ಮಂಗಳವಾರ ಮಧ್ಯಾಹ್ನ ಲಂಚ ಸ್ವೀಕರಿಸುತ್ತಿದ್ದ ಸುಳ್ಯದ ಸರ್ವೆ ಇಲಾಖೆಯ ಸರ್ವೇಯರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಸುಳ್ಯ ಭೂಮಾಪನಾ ಇಲಾಖೆಯ ಪರವಾನಗಿ ಭೂಮಾಪಕ ಚೆನ್ನಪಟ್ಟಣ ಮೂಲದ ಶರತ್‌ಕುಮಾರ್(೩೪) ಬಂಧಿತ ಆರೋಪಿಯಾಗಿದ್ದಾನೆ. ಆಲೆಟ್ಟಿ ಗ್ರಾಮದ ಕೋಲ್ಚಾರಿನ ಪದ್ಮಾನಾಭ ಎಂಬುವವರು ಕೊಯಿಂಗಾಜೆಯಲ್ಲಿರುವ ತಮ್ಮ ಒಂದೂವರೆ ಎಕ್ರೆ ಜಾಗ ಸರ್ವೆ ಮಾಡಲು ಕಳೆದ ಡಿಸೆಂಬರ್ ೧೨ ರಂದು ಅರ್ಜಿ ಸಲ್ಲಿಸಿದ್ದರು. ಬಳಿಕ ೨೯ ರಂದು ಶರತ್‌ಕುಮಾರ್ ಕೊಯಿಂಗಾಜೆಗೆ ತೆರಳಿ ಸ್ಥಳದ ಸರ್ವೆ ನಡೆಸಿದ್ದರು. ಆದರೆ ದಾಖಲೆಗಳನ್ನು […]