ಕೊಣಾಜೆ ನಡುಪದವಿನಲ್ಲಿ ಚಿರತೆ ಹಿಡಿಯಲು ಜೀವಂತ ಕೋಳಿಯನ್ನು ಕಟ್ಟಿ ಬೋನು ಇರಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು

10:23 PM, Saturday, October 7th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಕೊಣಾಜೆ: ನಡುಪದವು ಬಳಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ‌ ಸಿಬ್ಬಂದಿ ಜೀವಂತ ಕೋಳಿಯನ್ನು ಕಟ್ಟಿ ಬೋನು ಇರಿಸಿದ್ದಾರೆ.

ಕೊಣಾಜೆ ನಡುಪದವಿನಲ್ಲಿ ಗುರುವಾರ ರಾತ್ರಿ 9.30 ವೇಳೆಗೆ ವಾಕಿಂಗ್ ಹೋಗುತಿದ್ದ ಉಪನ್ಯಾಸಕರೊಬ್ಬರು ಅಲ್ಲೇ ಸಮೀಪದ ಲಾಡ ಬಳಿ ಚಿರತೆಯನ್ನು ನೋಡಿ ಭಯಭೀತಗೊಂಡಿದ್ದರು. ಅಲ್ಲದೆ ಅದೇ ರಾತ್ರಿ ಪರಿಸರದ ಮಹಿಳೆ‌ ಸೇರಿದಂತೆ ಒಟ್ಟು ಐದು ಜನರು ಚಿರತೆಯನ್ನು ನೋಡಿ ಭಯಗೊಂಡಿರುವುದಾಗಿ ತಿಳಿಸಿದ್ದಾರೆ. ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಹಲವರಿಗೆ ಒಂದೇ ದಿನ ರಾತ್ರಿ ಚಿರತೆ ಕಾಣಸಿಕ್ಕಿ ಗ್ರಾಮಸ್ಥರು ಭಯಗೊಂಡಿರುವ ಕಾರಣ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಮಹಾಬಲ ಡಿಎಸ್, ಬಾಳೆಪುಣಿ ವ್ಯಾಪ್ತಿಯ ಗಸ್ತು ಅರಣ್ಯ ಸವಿತಾ ಗಸ್ತು, ಕೊಣಾಜೆ ಗಸ್ತು ಅರಣ್ಯ ಪಾಲಕ ಮಹಮ್ಮದ್ ಹನೀಫ್ ಅವರು ಶನಿವಾರ ಬೆಳಿಗ್ಗೆ ನಡುಪದವು ಪರಿಸರದಲ್ಲಿ ಪರಿಶೀಲನೆ ನಡೆಸಿ ಚಿರತೆ ಸೆರೆ ಹಿಡಿಯಲು ಬೋನ್ ಇಟ್ಟಿದ್ದಾರೆ. ಗೂಡಿನ ಒಂದು ಭಾಗದಲ್ಲಿ ಜೀವಂತ ಕೋಳಿಯನ್ನು ಇಡಲಾಗಿದ್ದು, ಅಲ್ಲದೆ ಕೋಳಿ ಮಾಂಸವನ್ನು ಕೂಡಾ ಕಟ್ಟಲಾಗಿದೆ. ನಡುಪದವು ಲಾಡಕ್ಕೆ ಹೋಗುವ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ಬೋನನ್ನು ಇಡಲಾಗಿದೆ.

ಬೋನ್ ವ್ಯವಸ್ಥೆಗೊಳಿಸುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಗ್ರಾಮಸ್ಥರು ಸಹಕರಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English